Header Ads
Breaking News

ಕೋಲ್ಕತ್ತಾದಲ್ಲಿ ಕಿರಿಯ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣ : ಮಂಗಳೂರಿನಲ್ಲಿ ಐಎಮ್‌ಎಎಮ್‌ನ ವತಿಯಿಂದ ಪ್ರತಿಭಟನೆ

ಇತ್ತೀಚೆಗೆ ಕೋಲ್ಕತ್ತಾದ ಎನ್‌ಆರ್‌ಎಸ್ ವೈದ್ಯಕೀಯ ವಿದ್ಯಾಲಯದ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡನೆಯನ್ನು ಐಎಮ್‌ಎಎಮ್ ವ್ಯಕ್ತಪಡಿಸಿದ್ದು, ಹಾಗೂ ಆರೋಗ್ಯ ಸಂಸ್ಥೆಗಳ ಮೇಲಿನ ಹಲ್ಲೆಗಳ ವಿರೋಧಿ ರಾಷ್ಟ್ರ ಮಟ್ಟದ ಕಾಯಿದೆ ಆಗ್ರಹಿಸಲು ಭಾರತೀಯ ವೈದ್ಯಕೀಯ ಸಂಘವು ರಾಷ್ಟ್ರ ಮಟ್ಟದ ಒಂದು ದಿನದ ಕಪ್ಪು ಪಟ್ಟಿ ಪ್ರತಿಭಟನೆಯನ್ನು ನಡೆಸಿದ್ದು, ಮಂಗಳೂರಿನ ಭಾರತೀಯ ವೈದ್ಯಕೀಯ ಸಂಘದ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಐಎಮ್‌ಎಎಮ್‌ನ ಮಂಗಳೂರು ಕಾರ್ಯದರ್ಶಿ ಡಾ. ಸುಧೀಂದ್ರ ರಾವ್ ಎಂ ಮಾತನಾಡಿ, ಯುವ ವೈದ್ಯನ ಮೇಲೆ ಇತ್ತೀಚೆಗೆ ಮಾರಣಾಂತಿಯನ್ನು ಹಲ್ಲೆಯನ್ನು ಖಂಡಿಸಿ ದೇಶದಾದ್ಯಂತ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಅಲ್ಲಿನ ಮುಖ್ಯಮಂತ್ರಿಗಳು ಹಲ್ಲೆ ಮಾಡಿದವರನ್ನು ಬಂಧಿಸುವುದನ್ನು ಬಿಟ್ಟು ಪ್ರತಿಭಟನೆ ಮಾಡುವ ವೈದ್ಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಆನಂತರ ಐಎಮ್‌ಎಎಮ್‌ನ ಉಪಾಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ಅವರು ಮಾತನಾಡಿ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕಣ್ಣು ತೆರೆಯಬೇಕು ವೈದ್ಯರ ಮೇಲೆ, ವೈದ್ಯಕೀಯ ಕಾಲೇಜಿನ ಪೀಠೋಪಕರಗಳನ್ನು ಧ್ವಂಸ ಮಾಡುವುದನ್ನು ತಪ್ಪಿಸಬೇಕಾಗಿದೆ. ವೈದ್ಯಕೀಯ ವೃತ್ತಿಯನ್ನು ಉಳಿಸುವ ಕೆಲಸಕ್ಕೆ ನಾವೇಲ್ಲಾ ಕೈಜೋಡಿಸಬೇಕು ಎಂದು ಹೇಳಿದರು.
ಪ್ರತಿಭಟನೆಯನ್ನು ವಿವಿಧ ವೈದ್ಯರು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *