Header Ads
Header Ads
Breaking News

ಗಬ್ಬೆದ್ದು ನಾರುತ್ತಿದೆ ಕಾಸರಗೋಡು ಮೀನು ಮಾರ್ಕೆಟ್: ಅಧಿಕೃತರು ಗಾಢ ರೀತಿಯಲ್ಲಿ ಸಾಂಕ್ರಾಮಿಕ ರೋಗ ಭೀತಿಯಲ್ಲಿ ಮೀನು ಮಾರಾಟಗಾರರು

ಮಂಜೇಶ್ವರ: ಕಾಸರಗೋಡು ಮುನ್ಸಿಪಲ್ ಮಾರುಕಟ್ಟೆಗೆ ಹೊಸತಾಗಿ ಕಟ್ಟಡ ನಿರ್ಮಾಣಗೊಂಡಿದ್ದರೂ ಇಲ್ಲಿಯ ಕಥೆ ಮಾತ್ರ ಹಳೆಯ ದಕ್ಕಿಂತಲೂ ಶೋಚನೀಯವಸ್ಥೆಗೆ ತಲುಪಿರುವುದಾಗಿ ಮೀನು ಮಾರಾಟಗಾರರು ಆರೋಪಿಸುತಿದ್ದಾರೆ.ಇಲ್ಲಿ ಅದೆಷ್ಟೋ ತಿಂಗಳಿನಿಂದ ತ್ಯಾಜ್ಯಗಳು ತುಂಬಿ ಕೊಂಡಿದ್ದು, ಮಲಿನ ಜಲ ಹರಿಯುತ್ತಿರುವ ಇನ್ನೊಂದು ಭಾಗ ಸೊಳ್ಳೆಗಳ ಕೇಂದ್ರವಾಗಿ ಮಾರ್ಪಾಟಾಗಿದೆ. ಶೌಚಾಲಯಗಳು ನೀರು ಕಾಣದೆ ಗುಬ್ಬೆದ್ದು ನಾರುತಿದ್ದು, ಮೀನು ಖರಿದಿಸಲು ಆಗಮಿಸುವವರು ಮೂಗಿಗೆ ಕೈ ಮುಚ್ಚಿಕೊಂಡೇ ಇಲ್ಲಿ ಸಾಗಬೇಕಾಗಿದೆ. ಜತೆಯಾಗಿ ಇಲ್ಲಿ ರಾತ್ರಿ ಕಾಲದಲ್ಲಿ ಸಮಾಜ ಬಾಹಿರ ಚಟುವಟಿಕೆಗಳ ಕೇಂದ್ರವಾಗುತ್ತಿರುವುದಾಗಿ ಮೀನು ಮಾರಾಟಗಾರರು ಹೇಳುತಿದ್ದಾರೆ. ಈ ಬಗ್ಗೆ ಹಲವಾರು ಸಲ ಸಂಬಂಧಪಟ್ಟವರಿಗೆ ದೂರುಗಳನ್ನು ನೀಡಿದರೂ ಯಾರೂ ಇತ್ತ ಕಡೆ ತಿರುಗಿಯೂ ನೋಡುವುದಿಲ್ಲವೆಂಬ ಆರೋಪವಿದೆ. ಮೂಲಭೂತ ಸೌಕರ್ಯಗಳೊಲ್ಲಂದಾದ ನೀರು, ವಿದ್ಯುತ್ ಯಾವಾಗಲಾದರೊಮ್ಮೆ ಲಭಿಸುವ ದುಸ್ಥಿತಿ ಕೂಡಾ ಇಲ್ಲಿ ಯ ನಿತ್ಯ ದರ್ಶನವಾಗಿದೆ. ಕೆಲವೊಮ್ಮೆ ದೊಡ್ಡ ಮೊತ್ತಗಳನ್ನು ಉಪಯೋಗಿಸಿ ಮಾಡಲಾಗುತ್ತಿರುವ ಯೋಜನೆಗಳು ಉಪಯೋಗ ಶೂನ್ಯವಾಗುತ್ತಿರುವುದಕ್ಕೆ ಇಲ್ಲಿಯ ಮೀನು ಮಾರುಕಟ್ಟೆ ಕಟ್ಟಡವೇ ಉದಾಹರಣೆ ಎಂದು ಹೇಳಬಹುದಾಗಿದೆ. ಸಂಬಂಧಪಟ್ಟವರು ಇನ್ನಾದರೂ ಇತ್ತ ಕಡೆ ಗಮನ ಹರಿಸಿಯಾರೇ ಎಂದು ಕಾದು ನೋಡಬೇಕಾಗಿದೆ. 

Related posts

Leave a Reply