Header Ads
Header Ads
Breaking News

ಗೋಳ್ತಮಜಲು ಹಜಾಜ್ ಸ್ಪೋಟ್ಸ್ ಕ್ಲಬ್‍ನ ನೂತನ ಸಮಿತಿ ಅಸ್ತಿತ್ವಕ್ಕೆ

ಒಂದು ಕಾಲದಲ್ಲಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸಿದ್ದ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ಹಜಾಜ್ ಸ್ಪೋಟ್ಸ್ ಕ್ಲಬ್ ಇದರ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರುವ ಮೂಲಕ ನಿಂತು ಹೋಗಿದ್ದ ಸಮಾಜಮುಖಿ ಕಾರ್ಯಕ್ರಮ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಮತ್ತೆ ಮುನ್ನಡೆಸಲು ಸಜ್ಜುಗೊಂಡಿದೆ. ಈ ಬಗ್ಗೆ ವಿಶೇಷ ವರದಿ ಇಲ್ಲಿದೆ ನೋಡಿ….

ಕಲ್ಲಡ್ಕ ಸಮೀಪದ ಗೋಳ್ತಮಜಲು ಎಂಬಲ್ಲಿ 1988ರಲ್ಲಿ ನೂತನ ಕ್ಲಬನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಮೊಹಮ್ಮದ್ ಹನೀಪ್ ಅವರು ಪ್ರಥಮ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಯುವಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ ಧೂಮಪಾನ, ಮಾದಕದ್ರವ್ಯಗಳನ್ನು ಮುಕ್ತಗೊಳಿಸುವಂತೆ ದೂರ ದೃಷ್ಟಿತ್ವದ ಚಿಂತನೆಯೊಂದಿಗೆ ಆರಂಭಗೊಂಡ ಸಂಸ್ಥೆ ಕಳೆದ ನೂರು ದಶಕಗಳಲ್ಲಿ ಕ್ರೀಡೆ, ಸಮಾಜ ಸೇವೆ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳ ಜತೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಯಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಹಲವು ಕಬಡ್ಡಿ ಕ್ರೀಡಾಪಟುಗಳನ್ನು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿತ್ತು. ಹಜಾಜ್ ಕಬಡ್ಡಿ ತಂಡ ಎಂದರೆ ಸಾಕು ಎದುರಾಳಿ ತಂಡವೇ ನಿಂಬೆರಾಗುವಂತೆ ಮಾಡುತ್ತಿತ್ತು. ಹಜಾಜ್ ಸ್ಪೋಟ್ಸ್ ಕ್ಲಬ್ ಕಬಡ್ಡಿಯಲ್ಲಿ ಮಾಡಿದ ಸಾಧನೆ ಅವಿಸ್ಮರಣೀಯವಾಗಿತ್ತು.

ಕಳೆದ 8 ವರ್ಷಗಳಿಂದ ಯಾವುದೇ ರೀತಿಯ ಕಾರ್ಯಗಳು ನಡೆಯದೇ ಸ್ಥಗಿತಗೊಂಡಿತು. ಇದೀಗ ಮತ್ತೆ ನೂತನ ಸಮಿತಿಯನ್ನು ರಚಿಸಲಾಗಿದೆ. ನೂತನ ಅಧ್ಯಕ್ಷರಾಗಿ ಇಮ್ತಿಯಾಜ್ ಅವರ ನೇತೃತ್ವದಲ್ಲಿ ಪ್ರಾರಂಭದಲ್ಲಿ ಇದ್ದಂತಹ ವೈಭವವನ್ನು ಮತ್ತೆ ಮುನ್ನಡೆಸಲು ಈ ನೂತನ ಸಮಿತಿ ಸಜ್ಜುಗೊಂಡಿದೆ. ನೂತನ ಸಮಿತಿಗೆ ಸದಸ್ಯರನ್ನು ಸೇರ್ಪಡೆಗೊಳಿಸುವ ಕಾರ್ಯ ಭರದಿಂದ ನಡೆಯಿತ್ತಿದೆ. ಇದೀಗ ಪ್ರೋ ಮಾದರಿಯ ಕಬಡ್ಡಿ ಪಂದ್ಯಾಟದ ಜತೆಗೆ ಸಮಾಜಮುಖಿ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ.

ಸೋಮವಾರ ನೂತನ ಸಮಿತಿಯ ಸದಸ್ಯರು ಒಟ್ಟುಗೂಡಿ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಯ ಬಗ್ಗೆ ಪರಸ್ಪರ ಚರ್ಚೆ ಮಾಡಿದರು. ಈ ಸಭೆಯಲ್ಲಿ ನೂತನ ಸದಸ್ಯರ ಸೇರ್ಪಡೆಗೊಳಿಸಲಾಯಿತು. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಬಡ್ಡಿ ತರಬೇತಿ ನೀಡುವ ಬಗ್ಗೆ ಚರ್ಚಿಸಲಾಯಿತು. ವರ್ಷದಲ್ಲಿ ಸ್ನೇಹಾ ಸಮ್ಮೀಳನ ನಡೆಸುವ ಬಗ್ಗೆ ಹಾಗೂ ಕಲ್ಲಡ್ಕದಲ್ಲಿ ತೀರ್ಮಾನಿಸಲಾಯಿತು. ಅದಲ್ಲದೇ ಕಲ್ಲಡ್ಕದಲ್ಲಿ ಸರ್ವ ಧರ್ಮಿಯರನ್ನು ಸೇರಿಸಿಕೊಂಡು ಕಲ್ಲಡ್ಕ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭ ಮಾತನಾಡಿದ ಕ್ಲಬ್‍ನ ಗೌರವಾಧ್ಯಕ್ಷ ಹನೀಪ್ ಹಾಜಿ ಗೋಳ್ತಮಜಲು ಅವರು ಕಳೆದ ಕೆಲವು ವರ್ಷಗಳಿಂದ ಹಜಾಜ್ ಸ್ಪೋಟ್ಸ್ ಕ್ಲಬ್‍ನ ಚಟುವಟುಕೆಗಳು ಕಡಿಮೆಯಾಗಿತ್ತು. ಇದೀಗ ಹಲವು ಯುವಕರು ಜತೆಗೂಡಿ ಕ್ಲಬ್‍ಗೆ ಮರುಜೀವ ನೀಡಿರುವ ಕಾರ್ಯ ಶ್ಲಾಘನೀಯ. ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಮನ್ನಣೆಗಳಿಸಲು ಎಂದು ಶುಭ ಹಾರೈಸಿದರು.

ಈ ಸಂದರ್ಭ ಅಧ್ಯಕ್ಷ ಇಮ್ತಿಯಾಜ್, ಗೌರವ ಸಲಹೆಗಾರರಾದ ಝಕಾರಿಯಾ ಕಲ್ಲಡ್ಕ, ಹಾಜಿ ಅಹಮ್ಮದ್ ಯೂಸುಪ್, ಅಬ್ದುಲ್ ಹಮೀದ್ ಎ1, ಶರೀಫ್ ಹಾಜಿ, ಮಹಮ್ಮದ್ ಯೂಸುಪ್, ಉಪಾಧ್ಯಕ್ಷರಾದ ಅಬ್ದುಲ್ ರಝಾಕ್, ಶಿಯಾಬುದ್ದೀನ್, ಕಾರ್ಯದರ್ಶಿ ಅಬ್ದುಲ್ ಹಮೀದ್ ಗೋಳ್ತಮಜಲು, ಜತೆ ಕಾರ್ಯದರ್ಶಿ ಜಮಾಲ್, ನಝಿರ್ ಗೋಳ್ತಮಜಲು, ಮಾಜಿ ಕಬಡ್ಡಿ ಆಟಗಾರ, ಕ್ಲಬ್‍ನ ಸದಸ್ಯ ಸಹೀದ್, ಸದಸ್ಯ ಗಫೂರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *