Header Ads
Breaking News

ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಮಗುಚಿದ ಕಾರು : ಮಂಜೇಶ್ವರದ ದುರ್ಗಿಪಳ್ಳದಲ್ಲಿ ನಡೆದ ಘಟನೆ

ಮಂಜೇಶ್ವರ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ದುರ್ಗಿಪಳ್ಳದಲ್ಲಿ ಹೊಂಡಕ್ಕೆ ಮಗುಚಿ ಅಬ್ದುಲ್ಲ ಎಂಬವರ ಮನೆ ಮೇಲೆ ಬಿದ್ದಿದೆ. ಕಾರಿನಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಮನೆಯಲ್ಲಿ ಕೂಡಾ ಯಾರು ಇಲ್ಲದೆ ಇದ್ದ ಹಿನ್ನೆಲೆಯಲ್ಲಿ ದೊಡ್ಡದಾದ ದುರಂತವೊಂದು ತಪ್ಪಿ ಹೋಗಿದೆ. ಕುಂಜತ್ತೂರು ನಿವಾಸಿಯೊಬ್ಬನ ಮಾಲಕತ್ವದಲ್ಲಿರುವ ಕಾರನ್ನು ಉಳ್ಳಾಲ ನಿವಾಸಿಗಳಿಗೆ ಬಾಡಿಗೆಗೆ ನೀಡಿರುವುದಾಗಿ ಹೇಳಲಾಗುತ್ತಿದೆ. ಉಳ್ಳಾಲ ನಿವಾಸಿಗಳು ಚಲಾಯಿಸಿದ ಕಾರು ಅಪಘಾತಕ್ಕೀಡಾಗಿದೆ. ಅಪಘಾತಕ್ಕೀಡಾಗುವುದಕ್ಕಿಂತ ಮೊದಲು ಇದೆ ಕಾರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿರುವುದಾಗಿಯೂ ಇಬ್ಬರು ಪಾದಾಚಾರಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಕಾರು ಚಲಾಯಿಸಿದ ವ್ಯಕ್ತಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *