Header Ads
Header Ads
Breaking News

ಚೊಕ್ಕಾಡಿ ಸೊಸೈಟಿ ನೂತನ ಕಟ್ಟಡ ಅಮರ ಸಹಕಾರ ಸೌಧ ಉದ್ಘಾಟನೆ

ಸಹಕಾರ ಸಂಘಗಳು ಬೆಳವಣಿಗೆ ಕಾಣಬೇಕಾದರೆ ಸಂಘ ಮತ್ತು ಸದಸ್ಯರ ಸಹಕಾರ ಅಗತ್ಯ. ಅವರ ನಡುವಿನ ಪ್ರಾಮಾಣಿಕ ಸೇವೆ ಮತ್ತು ಪರಿಶ್ರಮದಿಂದ ಸಹಕಾರ ಸಂಘಗಳು ಬೆಳವಣಿಗೆ ಕಾಣುತ್ತದೆ ಎಂದು ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.ಅವರು ಸುಳ್ಯದ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮರ ಸಹಕಾರ ಸೌಧದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿ ಸಹಕಾರ ಸಂಘಗಳು ನೀಡುವ ಸೆವೆಯನ್ನು ಜನರು ಸ್ವೀಕಾರ ಮಾಡುತ್ತಾರೆ. ದೇಶದ ಅಭಿವೃದ್ದಿಗೆ ಕೃಷಿ ಮತ್ತು ಋಷಿ ಸಂಸ್ಕೃತಿ ಅಗತ್ಯ. ಕೃಷಿ ಅನಾದಿ ಕಾಲದಿಂದಲೂ ನಮ್ಮವರ ಜೀವನವಾಗಿತ್ತು. ನಮಗೆ ಬದುಕು ನೀಡಿದ ಕೃಷಿ ಸಂಸೃತಿಯನ್ನು ಬೆಳೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ರೈತರಲ್ಲಿ ಆತ್ಮವಿಶ್ವಾಸವನ್ನು ಕೊಡುವ ಕೆಲಸ ಜಿಲ್ಲೆಯ ಸಹಕಾರಿ ಸಂಘಗಳು ಮಾಡುತ್ತಿದೆ. ಈ ಮೂಲಕ ಜಿಲ್ಲೆಯ ರೈತರು ಸ್ವಾಭಿಮಾನಿ ಜೀವನ ನಡೆಸುತ್ತಿದ್ದಾರೆ. ಅತಿ ಹೆಚ್ಚು ಸಾಲ ಮರು ಪಾವತಿ ಮಾಡುತ್ತಿರುವ ಜಿಲ್ಲೆ ಇದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆ. ಸ್ವಾಭಿಮಾನಿ ರೈತರು ಇರುವುದರಿಂದ ಇಲ್ಲಿನ ರೈತರು ಅತ್ಮಹತ್ಯೆಯಂತಹ ಕೆಲಸಕ್ಕೆ ಇಳಿಯುವುದಿಲ್ಲ. ತಮ್ಮ ಜಮೀನಿನಲ್ಲಿ ನಾನಾ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಪ್ರಯೋಗ ಶೀಲತೆಯ ಮನಸ್ಸು ಹೊಂದಿದ ರೈತರು ನಮ್ಮ ಜಿಲ್ಲೆಯಲ್ಲಿ ಇದ್ದಾರೆ. ಕೃಷಿಕರಲ್ಲಿ ಬದುಕನ್ನು ಕಲಿಸಿಕೊಟ್ಟದ್ದು ಸಹಕಾರಿ ರಂಗಗಳು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಸ್. ಅಂಗಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ಕೆ.ಎಸ್. ದೇವರಾಜ್, ಅಮರ ಮೂಡ್ನೂರು ಗ್ರಾ.ಪಂ ಅದ್ಯಕ್ಷೆ ಸೀತಾ ಎಚ್, ಜಿ.ಪಂ ಸದಸ್ಯರಾದ ಎಸ್.ಎನ್. ಮನ್ಮಥ, ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಕೆ.ಎಂ.ಎಫ್ ನಿರ್ದೇಶಕ ಕೆ. ಸೀತಾರಾಮ ರೈ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಎ.ಪಿ.ಎಂ.ಸಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ, ಎಪಿ‌ಎಂ.ಸಿ ಉಪಾಧ್ಯಕ್ಷೆ ಸುಕನ್ಯಾ ಭಟ್, ಸ್ಥಳದಾನಿ ಗಣಪಯ್ಯ ಪೈಲೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಚೊಕ್ಕಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಮೂಕಮಲೆ ಸ್ವಾಗತಿಸಿ, ಸುಳ್ಯ ತಾ.ಪಂ ಸ್ಥಾಯಿ ಸಮಿತಿ ಅದ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪ್ರಾಸ್ತಾವಿಕ ಮಾತನಾಡಿದರು.

Related posts

Leave a Reply