Breaking News

ಜನತಾ ವಿಧ್ಯಾಲಯದಲ್ಲಿ ಆಪ್ತ ಸಮಾಲೋಚನೆ ಹಾಗು ಉದ್ಯೋಗ ಮೇಳ

ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜೀಲ್ಲಾ ಪಂಚಾಯತ್ ಉತ್ತರ ಕನ್ನಡ ಮತ್ತು ತಾಲೂಕ ಪಂಚಾಯತ್ ಹಾಗು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಆಶ್ರಯದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿಯಲ್ಲಿ ಭಟ್ಕಳ ತಾಲೂಕಿನ ಗ್ರಾಮೀಣ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಭಟ್ಕಳ ತಾಲೂಕಿನ ಶಿರಾಲಿಯ ಜನತಾ ಮಹಾವಿಧ್ಯಾಲಯದಲ್ಲಿ ಆಪ್ತ ಸಮಾಲೋಚನೆ ಹಾಗು ಉದ್ಯೋಗ ಮೇಳವನ್ನು ಹಮ್ಮಿಕೋಳ್ಳಲಾಯಿತು
ಭಟ್ಕಳದ ಶಿರಾಲಿಯ ಜನತಾ ವಿಧ್ಯಾಲಯದಲ್ಲಿ ಆಪ್ತ ಸಮಾಲೋಚನೆ ಹಾಗು ಉದ್ಯೋಗ ಮೇಳ ಕಾರ್ಯಕ್ರಮವನ್ನು ಭಟ್ಕಳ ತಾಲೂಕ ಪಂಚಾಯತ್ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಉದ್ಗಾಟಿಸಿ ಮಾತನಾಡಿ “ಈ ಕಾರ್ಯಕ್ರಮವು ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ತುಂಬ ಊಪಯೋಗವಾಗುವಂತ ಕಾರ್ಯಕ್ರಮವಾಗಿದೆ. ಗ್ರಾಮೀಣ ಭಾಗದಲ್ಲಿ ಯುವಕರು ಊದ್ಯೋಗಳಿಲ್ಲದೆ, ತುಂಬ ತೊಂದರೆಯನ್ನು ಅನುಭವಿಸುವ ಯುವಕ ಯುವತಿಯರನ್ನು ನಾವು ನೊಡಬಹುದು. ಇಂತಹ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿದೆ.”ಎಂದು ಹೇಳಿದರು.
ಇದೆ ಸಂದರ್ಬದಲ್ಲಿ ಮಾತನಾಡಿದ ಉತ್ತರ ಕನ್ನಡ ಜೀಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆರ್.ಜಿ ನಾಯ್ಕ ಮಾತನಾಡಿ ಈ ಹಿಂದೆ ಹವಾರು ಕಡೆ ಉದ್ಯೋಗ ಮೇಳ ನಡೆದಿದೆ ಆದರೆ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ದೊರಕಿದ್ದು ಮಾತ್ರ ವಿರಳ ಯಾಕೆಂದರೆ ಅಂತಹ ಉದ್ಯೋಗ ಮೇಳಗಳಲ್ಲಿ ಯಾರಿಗೆ ಪ್ರತಿಭೆ ಇರುತ್ತದಯೊ ಯಾರಲ್ಲಿ ಅನುಭವ ವಿರುತ್ತದೆಯೊ ಅಂತವರಿಗೆ ಉದ್ಯೋಗ ದೊರೆಯುತ್ತದೆ ಆದರೆ ನಾವು ಈಗ ನಡೆಸುತ್ತಿರುವ ಆಪ್ತ ಸಮಾಲೋಚನೆ ಹಾಗು ಉದ್ಯೋಗ ಮೇಳ ಹಿಂದೆ ನಡೆದಿರುವ ಉದ್ಯೋಗ ಮೇಳದಂತೆ ನಡೆಯುದಿಲ್ಲ ಇಲ್ಲಿ ಗ್ರಾಮೀಣ ಬಾಗದ ಯುವಕ ಯುವತಿಯರಿಗೆ ಅನೇಕ ಕೌಶಲ್ಯಾದಾರಿತ ತರಬೇತಿಯನ್ನು ನೀಡಿ ಯುವಕ ಯುವತಿಯರ ಕೌಶಲ್ಯವನ್ನು ಉನ್ನತಿಕರಿಸಿ ಅವರಿಗೆ ಉದ್ಯೋಗವನ್ನು ನೀಡುವ ಕೆಂದ್ರಸರಕಾರದ ಯೋಜನೆಯಾಗಿದೆ ಯಾವುದೆ ಯುವಕ ಯುವತಿಯರು ಉದ್ಯೋಗ ಮಾಡುವ ಮನೋಬಾವದರಾಗಿದ್ದರೆ ನಾಲ್ಕು ಚೌಕಟ್ಟಿನಲ್ಲಿ ಬದುಕುವ ಮನೋಬಾವವನ್ನು ಮೋದಲು ಬೀಡಬೇಕಾಗುತ್ತದೆ ಉದ್ಯೋಗ ಬೇಕಾದರೆ ನೀವುಗಳು ನಿಮ್ಮ ಊರನ್ನು ಬಿಟ್ಟು ಪರ‌ಊರಿಗೆ ಹೋಗಿ ಕೆಲಸ ಮಾಡಲು ಸಿದ್ದರಿರಬೇಕಾಗುತ್ತದೆ ಯಾಕೆಂದರೆ ನಿಮ್ಮ ಊರಿನಲ್ಲಿ ಊದ್ಯೋಗ ಅವಕಾಶಗಳು ತುಂಬ ಕಡಿಮೆ ನೀವು ಬಾವಿ ಒಳಗೆ ಇರುವ ಕಪ್ಪೆಯಂತಾಗ ಬಾರದು ಜಗತ್ತು ವಿಶಾಲವಾಗಿದೆ ಆದ್ದರಿಂದ ನೀವು ನಿಮ್ಮನ್ನು ಜಗತ್ತಿನ ಮುಂದೆ ತೆರೆದುಕೊಳ್ಳಬೇಕಾಗಿದೆ ಆದ್ದರಿಂದ ಯುವಶಕ್ತಿಗಳಾದ ನೀವು ಈ ಆಪ್ತ ಸಮಾಲೋಚನೆ ಹಾಗು ಉದ್ಯೋಗ ಮೇಳವನ್ನು ಸದುಪಯೋಗ ಮಾಡಿಕೊಂಡು ನಿಮ್ಮ ಜೀವನವನ್ನು ಸುಸೂತ್ರವಾಗಿ ರೂಪಿಸಿಕೊಳ್ಳಿ.”ಎಂದು ಹೇಳಿದರು.
ಆಪ್ತ ಸಮಾಲೋಚನೆ ಹಾಗು ಉದ್ಯೋಗ ಮೇಳದಲ್ಲಿ ಅನೇಕ ಸರಕಾರವನ್ನು ಪ್ರತಿನಿದಿಸುವ ಸಂಸ್ಥೆಗಳಾದ ಕಾಪಿ ಕೆಪೆ ಡೆ ಹಳಿಯಾಳ, ಟಿಂ ಲಿಸ್ ಬೆಂಗಳೂರು, ನ್ಯಾಷನಲ್ ಅಕಾಡೆಮಿ ಪೋರ್ ಸ್ಕಿಲ್ ಡೆವಲಪ್ ಮೆಂಟ್, ಸಿಂಡ್ ಆರ್ ಸಿಟಿ ಕುಮಟಾ ಸ್ಕೋಡ್ ವೇಸ್ ಸಂಸ್ಥೆ ಶಿರಸಿ ಹೀಗೆ ಅನೇಕ ಸಂಸ್ಥೆಗಳು ಬಂದಿದ್ದು ನಿರೂದ್ಯೋಗಿ ಯುವಕ ಯುವತಿಯರಲ್ಲಿ ಆಶಾಕಿರಣವನ್ನು ಮೂಡಿಸಿತು ಮೇಳದಲ್ಲಿ‌ಐದುನೂರಕ್ಕೂ ಅಧಿಕ ಉದ್ಯೋಗ ಆಕಾಕ್ಷಿಗಳು ಬಾಗವಹಿಸಿದ್ದರು
ಈ ಸಂದರ್ಬದಲ್ಲಿತಾಲೂಕ ಪಂಚಾಯತ್ ಮುಖ್ಯಾಧಿಕಾರಿಗಳಾದ ಸಿ.ಟಿ. ನಾಯ್ಕ, ತಾಲೂಕ ಪಂಚಾಯತ್ ಸದಸ್ಯರಾದ ಮಾಲತಿ ಮೋಹನ ದೇವಾಡಿಗ, ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಡಿ.ಜೆ ಕಾಮತ್,ಸಂಜಿವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಭಟ್ಕಳ ತಾಲೂಕ ಸಂಯೋಜಕರಾದ ಗೋಪಾಲ್ ನಾಯ್ಕ ಬೆಳ್ಕೆ, ಶಾರದಾ ನಾಯ್ಕ ಅನೇಕ ಸಂಸ್ಥೆಯ ಪ್ರತಿನಿದಿಗಳು ಮುಂತಾದವರು ಉಪಸ್ಥಿತರಿದ್ದರು
ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply