Header Ads
Header Ads
Breaking News

ಜನಪ್ರತಿನಿಧಿಗಳ ಪೊಳ್ಳು ಭರವಸೆಗೆ ಎದ್ದು ನಿಲ್ಲದ “ಅರ್ಬಿ ಸೇತುವೆ” : ಹೊಳೆ ನೀರಿನ ಮಧ್ಯೆಯೇ “ಭಂಡಾರ”ದ ಸಾಗಾಟ

ಹಲವು ವರ್ಷಗಳ ಇತಿಹಾಸವಿರುವ, ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಲಿಸುವ ಕಾಲು ಸೇತುವೆಯೊಂದು ಕಳೆದ 5 ವರ್ಷಗಳ ಹಿಂದೆ ಕುಸಿದು ಬಿದ್ದಿದ್ದು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಪೊಳ್ಳು ಭರವಸೆಯನ್ನು ನೀಡಿದ್ದರೂ ಕೂಡಾ ಇನ್ನು ಕೂಡಾ ಎದ್ದು ನಿಂತಿಲ್ಲ” ಅರ್ಬಿ ಸೇತುವೆ”. ಅಷ್ಟಕ್ಕೂ ಈ ಸಮಸ್ಯೆ ಕಂಡು ಬಂದಿದ್ದು ಎಲ್ಲಿ ಅಂತೀರಾ..? ಹಾಗಾದ್ರೆ ಈ ಸ್ಟೋರಿ ನೋಡಿ..

ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಆನೆಗುಡ್ಡೆ-ವಾಲ್ಪಾಡಿ ಎಂಬ 2 ಗ್ರಾಮಗಳಿಗೆ ಸಂಪರ್ಕವನ್ನು ಕಲ್ಪಿಸುತ್ತಿದ್ದ, ಇದೀಗ ಬಿದ್ದು ಹೋಗಿರುವ ಈ “ಅರ್ಬಿ ಸೇತುವೆ”ಯ ಆಚೆ ಮತ್ತು ಈಚೆ ಬದಿಯ ಪರಿಸರದಲ್ಲಿ ಸುಮಾರು 60 ಕುಟುಂಬಗಳು ವಾಸಿಸುತ್ತಿವೆ. ಇವರೆಲ್ಲರೂ ಆಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆಕಡೆಗೆ ತಮ್ಮ ದಿನ ನಿತ್ಯದ ಕೆಲಸಗಳಿಗೆ ಮಾತ್ರವಲ್ಲದೆ ಶಾಲಾ-ಕಾಲೇಜು, ದೇವಸ್ಥಾನಕ್ಕೆ ಈ ಸೇತುವೆಯ ಮೇಲ್ಭಾಗದಲ್ಲಿಯೇ ನಡೆದುಕೊಂಡು ಹೋಗಿ ಬರುತ್ತಿದ್ದರು. ಇದಲ್ಲದೆ ಆನೆಗುಡ್ಡೆಯಿಂದ ದರೆಗುಡ್ಡೆ ಪಂಚಾಯತ್ ವ್ಯಾಪ್ತಿಗೂ ಹೋಗಬೇಕಾದರೆ ಈ ಸೇತುವೆಯ ಮೂಲಕವೂ ಆಗುತ್ತದೆ. ಹೀಗೆ 2 ಪಂಚಾಯತ್‍ಗಳಿಗೂ ಸಂಪರ್ಕವನ್ನು ಜೋಡಿಸುವ ಈ ಸೇತುವೆಯು ಕಳೆದ 5 ವರ್ಷಗಳ ಹಿಂದೆ ಬಿದ್ದ ಮಳೆಯ ಸೆಳೆತಕ್ಕೆ ಸಿಕ್ಕಿ ನೀರಿನಲ್ಲಿ ಕೊಚ್ಚಿ ಹೋಗಿ ತನ್ನ ಅಸ್ವಿತ್ವವನ್ನೇ ಕಳೆದುಕೊಂಡಿತು. ಈ ಮೂಲಕ ಆ ಪರಿಸರದ ಜನರಿಗೆ ಮಳೆಗಾಲದಲ್ಲಿ ಆಚೆಯಿಂದ ಈಚೆಗೆ ದಾಟುವಿಕೆಗೆ ಅಡ್ಡಿಯಾಯಿತು. ಇದನ್ನರಿತ ಪರಿಸರದ ಜನರು ತಮ್ಮ ಈ “ಅರ್ಬಿ ಸೇತುವೆ”ಯನ್ನು ಮತ್ತೆ ಮೊದಲಿನ ಸ್ಥಿತಿಯಲ್ಲೇ ನಿರ್ಮಾಣ ಮಾಡಬೇಕೆಂದು ಜನಪ್ರತಿನಿಧಿಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಜಲಾನಯನ ಇಲಾಖೆಯವರು ಸಣ್ಣ ಕಾಮಗಾರಿಯನ್ನು ಮಾಡಿದ್ದರೂ ಅದೇ ವರ್ಷದ ಮಳೆಗೆ ಕೊಚ್ಚಿ ಹೋಗಿದೆ. ನಂತರ ಅಲ್ಲಿಯೇ ಜನರು ಸೇರಿ “ಕಟ್ಟಪುಣಿ”ಯನ್ನು ನಿರ್ಮಿಸಿದ್ದು ಜೋರಾಗಿ ಮಳೆ ಬಂತೆಂದರೆ ಕಟ್ಟಪುಣಿಯ ಮೇಲೆಯೇ ನೀರು ಬೀಳುವುದರಿಂದ ಸಮಸ್ಯೆಯಾಗುತ್ತದೆ.

ಅಲ್ಲದೆ ಕೇವಲ ಒಂದು ಕಿ.ಮೀ. ಅಂತರದಲ್ಲಿರುವ ವಾಲ್ಪಾಡಿ ಪರಿಸರಕ್ಕೆ ಬರಬೇಕಾದರೂ ಆನೆಗುಡ್ಡೆಯಾಗಿ ನಾಲ್ಕೈದು ಕಿ.ಮೀ.ಸುತ್ತು ಬಂದು ಬರಬೇಕಾದ ಪರಿಸ್ಥಿತಿ. ಅಂದು ಶಾಸಕರಾಗಿದ್ದ ಕೆ.ಅಭಯಚಂದ್ರ ಅವರು ತಾತ್ಕಾಲಿಕವಾಗಿ ಸೇತುವೆಯನ್ನು ನಿರ್ಮಾಣ ಮಾಡಿ ಜನರ ಓಡಾಡಕ್ಕೆ ವ್ಯವಸ್ಥೆ ಮಾಡಬೇಕೆಂದು 10 ಲಕ್ಷದ ಅನುದಾನವನ್ನು ಇಟ್ಟಿದ್ದರು. ಆದರೆ ಅದು ಅನುದಾನ ಸಾಕಾಗಲ್ಲ ತಮಗೆ ಕೋಟಿ ಯೋಜನೆಯ ಸೇತುವೆಯೇ ಬೇಕೆಂದು ಸ್ಥಳೀಯ ಕೆಲವು ರಾಜಕೀಯ ವ್ಯಕ್ತಿಗಳು ಗಲಾಟೆ ಮಾಡಿದ್ದರು ಇದರಿಂದ ತಾತ್ಕಾಲಿಕ ನಿರ್ಮಾಣದ ಸೇತುವೆಯ ಕನಸೂ ನನಸಾಗಿಲ್ಲ. ನಂತರ ಎಂಪಿ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ಥಳಕ್ಕೆ ಭೇಟಿ ನೀಡಿ “ಕೋಟಿ”ಯಲ್ಲಿ ಸೇತುವೆ ನಿರ್ಮಾಕ್ಕೆ ಸೈ ಎಂದಿದ್ದರೂ ಆದರೆ ಈವರೆಗೆ “ಕೋಟಿ”ಯಲ್ಲಿ ನಿರ್ಮಾಣವಾಗುವ ಸೇತುವೆ ಮಾತ್ರ ಪೊಳ್ಳು ಭರವಸೆಯಲ್ಲೇ ಉಳಿದಿದ್ದು ಜನರು ಮಾತ್ರ “ಕೋಟಿ”ಯಲ್ಲಿ ನಿರ್ಮಾಣವಾಗುವ ಸೇತುವೆಗಾಗಿ ಕಾಯುತ್ತಿದ್ದಾರೆ.

ನೀರಿನ ಮಧ್ಯೆಯೇ “ಭಂಡಾರ”ದ ಸಾಗಾಟ : ಇದೇ ಪರಿಸರದಲ್ಲಿ ಬ್ರಹ್ಮ ಬೇದರ್ಕಳ ಗರಡಿಯೊಂದಿದೆ. ಇಲ್ಲಿ ಪ್ರತಿ ವರ್ಷವೂ “ಸೋಣದ ಕೋಲ” ನಡೆಯುತ್ತದೆ ಇದಕ್ಕೆ ಭಂಡಾರವನ್ನು ಸೇತುವೆಯ ಈ ಕಡೆಯ ನರಸಿಂಹ ಭಟ್ಟರ ಮನೆಯಿಂದ ಗರಡಿಗೆ ಹೊತ್ತುಕೊಂಡು ಹೋಗಬೇಕು. ಹಿಂದೆ ಸೇತುವೆಯ ಮೇಲಿನಿಂದ ಹೊತ್ತುಕೊಂಡು ಹೋಗಲಾಗುತ್ತಿತ್ತು ಆದರೆ ಇದೀಗ ಸೇತುವೆ ಬಿದ್ದ ಮೇಲೆ ಜನರು ತಮ್ಮ ಜೀವದ ಹಂಗು ತೊರೆದು ತುಂಬಿ ಹರಿಯುತ್ತಿರುವ ನದಿಯ ನೀರಿನ ಮಧ್ಯದಲ್ಲೇ “ಭಂಡಾರ”ದ ಸಾಗಾಟ ಮಾಡಿ ದೈವ ಭಕ್ತಿಯನ್ನು ಮೆರೆಯುತ್ತಿದ್ದಾರೆ.

Related posts

Leave a Reply

Your email address will not be published. Required fields are marked *