Header Ads
Header Ads
Breaking News

ಜನರೊಂದಿಗಿರುವುದಾಗಿ ಹೇಳುವ ಎಡರಂಗ ಸರಕಾರ ಮಾಫಿಯಾಗಳ ಜೊತೆಯಾಗಿದೆ ?: ಪಿ ಸಿ ವಿಷ್ಣುನಾಥ್

ಮಂಜೇಶ್ವರ: ಜನರೊಂದಿಗಿದ್ದೇವೆ ಎಂಬುದಗಿ ಜಾಹೀರಾತುಗಳನ್ನು ಪ್ರಕಟಿಸುತ್ತಿರುವ ರಾಜ್ಯ ಸರಕಾರ ಮಾಫಿಯಾಗಳಿಗೆ ಸಹಾಯಕವಗುವ ರೀತಿಯ ನಿಲುವನ್ನು ಹೊಂದಿರುವುದಾಗಿ ಎ ಐ ಸಿ ಸಿ ಕಾರ್ಯದರ್ಶಿ ಶಾಸಕ ಪಿ ಸಿ ವಿಷ್ಣುನಾಥ್ ಹೇಳಿದರು.ಅವರು ಐಕ್ಯ ರಂಗ  ನೇತೃತ್ವದಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡುತಿದ್ದರು.ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತಿದ್ದು, ಸಾಮಾಗ್ರಿಗಳ ಬೆಲೆ ಗಗನಕ್ಕೇರುತ್ತಿದೆ, ಮಹಿಳೆಯರ ಮಕ್ಕಳ ದೌರ್ಜನ್ಯಕ್ಕೆ ಕೊನೆ ಇಲ್ಲಂತಾಗಿದೆ. ಇಂತದ್ದನ್ನು ನಿಯಂತ್ರಿಸ ಬೇಕಾದ ರಾಜ್ಯ ಸರಕಾರ ಇದೀಗ ಗಾಢವಾದ ನಿದ್ರೆಗೆ ಜಾರಿರುವುದಾಗಿ ಅವರು ದೂರಿದರು. ಜೊತೆಯಾಗಿ ಕೇಂದ್ರ ಸರಕಾರದ ಕಾರ್ಯ ವಿಅಖರಿಯನ್ನು ಟೀಕಿಸಿದರು. ಐಕ್ಯ ರಂಗದ ಅಧ್ಯಕ್ಷ ಚೆರ್ಕಳಂ ಅಬ್ದುಲ್ಲ ಅಧ್ಯಕ್ಷತೆ ವಹಿಸಿದರು. ನೇತಾರರ ಸಹಿತ ಹಲವಾರು ಮಂದಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿಯಲ್ಲಿ ಪಾಲ್ಗೊಂಡರು. ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿತು.

Related posts

Leave a Reply