Header Ads
Breaking News

ಜನರ ಸಮಸ್ಯೆ, ಭಾವನೆಗಳಿಗೆ ಸ್ಪಂಧಿಸುವ ಸರಕಾರ ನಮ್ಮಲ್ಲಿದೆ : ನಳಿನ್ ಕುಮಾರ್ ಕಟೀಲ್ ಹೇಳಿಕೆ

ಪುತ್ತೂರು: ಕೆಯುಐಡಿಎಫ್‍ಸಿ ಹಾಗೂ ಪುತ್ತೂರು ನಗರಸಭೆ ಇದರ ಜಂಟಿ ಸಹಯೋಗದಲ್ಲಿ ಎಡಿಬಿ ಯೋಜನೆಯಡಿ ರೂ. 112.08ಕೋಟಿ ವೆಚ್ಚದಲ್ಲಿ ಪುತ್ತೂರು ನಗರಕ್ಕೆ 24*7 ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಗೆ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿ ಶಿಲಾನ್ಯಾಸ ಮತ್ತು ಪುರಭವನದಲ್ಲಿ ಯೋಜನೆಗಳ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಯಿತು.

ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪುರಭವನದಲ್ಲಿ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ನಗರಪ್ರದೇಶಕ್ಕೆ ಸೀಮಿತವಾಗಿ ಕುಡಿಯುವ ನೀರು ಮತ್ತು ಕಸ ವಿಲೇವಾರಿ ಬಹಳ ದೊಡ್ಡ ಅಗತ್ಯದ ಕೆಲಸ. ನಮ್ಮಲ್ಲಿ ಹತ್ತಾರು ನದಿ ಪಾತ್ರಗಳು, ಸಮುದ್ರ ಇದ್ದರೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರೆ ಇದು ಆಶ್ಚರ್ಯ ಆಗುತ್ತದೆ. ಇದಕ್ಕೆ ಕಾರಣ ನಮ್ಮಲ್ಲಿನ ಅವೈಜ್ಞಾನಿಕ ಕಾಮಗಾರಿಗಳು ಎಂದ ಅವರು ಯಾವ ನಗರ ಹೇಗೆ ಬೆಳೆಯಬೆಕೆಂಬ ಮಾನಸಿಕತೆ ನಗರಸಭೆಯಲ್ಲಿ ಇರಬೇಕೆಂದರು. ನಗರದ ಅಭಿವೃದ್ಧಿಗಾಗಿ ನಗರಯೋಜನಾ ಪ್ರಾದೇಶಿಕ ಕಚೇರಿ, ಕಾನೂನುಗಳಿದ್ದರೂ ಕಟ್ಟಡಗಳಿಗೆ ಕೊಡುವ ಪರವಾನಿಗೆ ನಿಯಮಗಳು ಸರಿ ಇದೆಯೇ ಎಂಬುದನ್ನು ಗಮನಿಸಬೇಕು. ಪುತ್ತೂರು ನಗರಕ್ಕೆ ಮುಂದಿನ 30 ವರ್ಷಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ರೂ. 113. 08 ಕೋಟಿಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯೋಜನೆ ಯಶಸ್ವಿಯಾಗಲಿ ಪುತ್ತೂರಿನ ಜನತೆ ನಿರಂತರವಾಗಿ ಕುಡಿಯುವ ನೀರಿನ ಬಳಕೆ ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪುತ್ತೂರು ನಗರಸಭೆಗೆ ಎಸ್‍ಎಫ್‍ಸಿ ಅನುದಾನದಲ್ಲಿ ರೂ. 5 ಕೋಟಿ ಅನುದನ ಬಿಡುಗಡೆಯಾಗಿದ್ದು, ಇದರ ಜೊತೆಗೆ ರೂ. 35 ಕೋಟಿ ದ.ಕ ಜಿಲ್ಲೆಗೆ ಬಿಡುಗಡೆಯಾಗಿದೆ. ಇದರಿಂದ ರಸ್ತೆಯ ಗುಂಡಿಗಳ ದುರಸ್ಥಿ ಕಾರ್ಯ ನಡೆಯಲಿದೆ. ಮುಂದೆ ಇನ್ನಷ್ಟು ಅನುದಾನದ ಬರುವ ಭರವಸೆ ಇದೆ ಎಂದರು.

ಈ ಸಂದರ್ಭ ಪೌರಾಯುಕ್ತೆ ರೂಪಾ ಶೆಟ್ಟಿ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಉಪವಿಭಾಗದ ಹಿರಿಯ ಉಪವಿಭಾಗಾಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *