Breaking News

ಜೂನ್ 4ರಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಉದ್ಘಾಟನೆ

ಪುತ್ತೂರು : ಪುತ್ತೂರಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ‘ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ’ ಸಂಘಟನೆಯ ಉದ್ಘಾಟನಾ ಸಮಾರಂಭವು ಜೂ.4ರಂದು ಪುತ್ತೂರಿನ ಬಸ್ ನಿಲ್ದಾಣದ ಬಳಿಯಿರುವ ಡಾ.ಶಿವರಾಮ ಕಾರಂತ ಪ್ರೌಢ ಶಾಲೆಯಲ್ಲಿ ನಡೆಯುವುದು ಎಂದು ಸಂಘಟನೆಯ ನಿಯೋಜಿತ ಅಧ್ಯಕ್ಷ ಗಿರಿಧರ್ ನಾಯ್ಕ್ ಅವರು ತಿಳಿಸಿದರು.
ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉದ್ಘಾಟನಾ ಸಮಾರಂಭ ಅಂದು ಬೆಳಿಗ್ಗೆ 10.00 ನಡೆಯುವುದು. ಶಾಸಕಿ ಶಕುಂತಳಾ ಶೆಟ್ಟಿ ಅವರು ಉದ್ಘಾಟಿಸುವರು. ಪುತ್ತೂರಿನ ಖ್ಯಾತ ವೈದ್ಯ ಡಾ. ಡಾ.ಎಂ.ಕೆ.ಪ್ರಸಾದ್, ಸುದ್ದಿ ಬಿಡುಗಡೆ ದಿನಪತ್ರಿಕೆಯ ಸಂಪಾದಕ ಡಾ.ಯು.ಪಿ, ಶಿವಾನಂದ, ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಎಸ್.ಆರ್.ಶಿವರಾಮ, ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಎಸ್‌ಐ ಸುಜಾತ ಸಾಲಿಯಾನ್, ಪುತ್ತೂರು ವಿಭಾಗದ ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಬೈರಪ್ಪ, ಡಾ.ಶಿವರಾಮ ಕಾರಂತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಿವರಾಮ ಭಟ್, ಸಂಪ್ಯ ಠಾಣಾ ಎಸ್‌ಐ ಅಬ್ದುಲ್ ಖಾದರ್ ಮತ್ತು ಪುತ್ತೂರು ತಾಲ್ಲೂಕು ಜೆಡಿ‌ಎಸ್ ಅಧ್ಯಕ್ಷ ಐ.ಸಿ.ಕೈಲಾಸ್ ಅವರು ಅತಿಥಿಗಳಾಗಿ ಭಾಗವಹಿಸುವರು ಎಂದರು.
ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯನ್ನು ಪುತ್ತೂರಿನಿಂದ ಆರಂಭಿಸಿ ರಾಜ್ಯವ್ಯಾಪಿ ವಿಸ್ತರಿಸಲಾಗುವುದು. ಸಂಘಟನೆಯ ಉದ್ಘಾಟನೆಯ ಬಳಿಕ ಪದಾಧಿಕಾರಿಗಳ ಘೋಷಣೆ ಮಾಡಲಾಗುವುದು. ಈಗಾಗಲೇ ಪುತ್ತೂರು,ಸುಳ್ಯ, ಬಂಟ್ವಾಳ ,ಕಡಬ ಮತ್ತು ಬಂಟ್ವಾಳದಲ್ಲಿ ತಾಲ್ಲೂಕು ಸಂಘಟನೆಗಳ ರಚನೆಯಾಗಿದೆ. ವಿಟ್ಲದಲ್ಲಿ ಪ್ರತ್ಯೇಕ ಸಮಿತಿ ರಚನೆಯೂ ನಡೆದಿದೆ. ಶಿವಮೊಗ್ಗದಲ್ಲಿ ಈಗಾಗಲೇ ಸಮಿತಿ ರಚನೆಯ ಪ್ರಕ್ರಿಯೆಗಳು ನಡೆದಿದೆ ಎಂದು ಗಿರಿಧರ್ ನಾಯ್ಕ್ ಅವರು ತಿಳಿಸಿದರು.
ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಪ್ರಮುಖರಾದ ಉಮೇಶ್ ತ್ಯಾಗರಾಜನಗರ,ಬಾಲಚಂದ್ರ ಸೊರಕೆ,ಉಮೇಶ್ ಭಕ್ತಕೋಡಿ,ಮಮತಾ ಆರ್.ಎಸ್.ನೆಲ್ಲಿಗುಂಡಿ, ಜಯರಾಮ್ ನೆಲ್ಲಿಗುಂಡಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Related posts

Leave a Reply