Header Ads
Header Ads
Breaking News

ಟಿಪ್ಪುವಿನ ದಾಳಿಯಿಂದಾಗಿ ರಕ್ಷಣೆಗೊಳಪಟ್ಟ ಕೈಸ್ತ ಸಮಾಜ:3 ಬಂಟ ಮನೆತನದವರಿಗೆ ಫಲ ತಾಂಬಲ ಕೊಟ್ಟು ವಿಶೇಷ ಗೌರವ

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಬಗ್ಗೆ ಪ್ರತೀ ವರ್ಷ ಪರ- ವಿರುದ್ಧದ ವಾದಗಳು ಕೇಳಿಬರುತ್ತಲೇ ಇವೆ. ಆತ ಮತಾಂಧ ದಾಳಿಕೋರ ಎಂದು ವಿರೋಧಿಸುವವರು ಒಂದೆಡೆಯಾದರೆ, ಟಿಪ್ಪು ಸುಲ್ತಾನ್ ವೀರ, ಸ್ವಾತಂತ್ರ ಹೋರಾಟಗಾರ ಎಂಬ ವಾದ ಮಂಡಿಸುವವರೂ ಇದ್ದಾರೆ. ಈ ಮಧ್ಯೆ ಟಿಪ್ಪುವಿನಿಂದ ದಾಳಿಗೊಳಗಾದ ಸಂದರ್ಭ ತಮ್ಮನ್ನು ರಕ್ಷಿಸಿದ ಮೂರು ಕುಟುಂಬಗಳಿಗೆ ಕೈಸ್ತ ಬಾಂಧವರು ಪ್ರತೀ ವರ್ಷ ಗೌರವ ಸಲ್ಲಿಸುವ ಸಂಪ್ರದಾಯ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯಲ್ಲಿ ನಡೆಯುತ್ತಿದೆ ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.ಇದು ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ಕಿರೆಂ ರೆಮದಿ ಅಮ್ಮನವರ ಇಗರ್ಜಿ ಐಕಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಈ ಚರ್ಚ್ ಮಂಗಳೂರು ಡಯಾಸಿಸ್‌ನ ಪ್ರಾಚೀನ ಚರ್ಚ್‌ಗಳಲ್ಲಿ ಒಂದು. ಈ ಚರ್ಚ್‌ನಲ್ಲಿ ಪ್ರತಿ ವರ್ಷ ವಾರ್ಷಿಕ ಹಬ್ಬದ ದಿನ ಮೂರು ಪ್ರತಿಷ್ಟಿತ ಹಿಂದೂ ಮನೆತನದವರಿಗೆ ಬಾಳೆ ಹಣ್ಣು, ವೀಳ್ಯದೆಲೆ, ಅಡಿಕೆ ಕೊಟ್ಟು ವಿಶೇಷ ಗೌರವ ಸಲ್ಲಿಸಲಾಗುತ್ತದೆ. ದಾಮಸ್ಕಟ್ಟೆಯಲ್ಲಿರುವ ಕಿರೆಂ ರೆಮದಿ ಅಮ್ಮನವರ ಚರ್ಚ್ ಎಂದೇ ಪ್ರಸಿದ್ಧಿ ಹೊಂದಿರುವ ಈ ಚರ್ಚ್ ಸ್ಥಳೀಯ ಕ್ರೈಸ್ತರಿಂದ ನಿರ್ಮಾಣ ಆಗಿತ್ತು. ಟಿಪ್ಪು ಸುಲ್ತಾನ್ ಕೆನರಾ ಕ್ರೈಸ್ತರ ಮೇಲೆ ದಾಳಿ ಮಾಡಿದ್ದ ಸಂದರ್ಭಧಲ್ಲಿ ಕಿರೆಂ ಚರ್ಚ್ ಅನ್ನು ನಾಶ ಪಡಿಸಲು ಮುಂದಾಗಿದ್ದ. ಆಗ ಸ್ಥಳೀಯ ಬಂಟ ಸಮುದಾಯದ ಮೂರು ಮನೆತನಗಳಾದ ಐಕಳ ಬಾವ, ತಾಳಿಪಾಡಿ ಗುತ್ತು ಹಾಗೂ ಏಳಿಂಜೆ ಅಂಗಡಿಗುತ್ತು ಕುಟುಂಬದವರು ಟಿಪ್ಪು ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಈ ಸಂದರ್ಭ ಸಾವಿರಾರು ಕ್ರೈಸ್ತರನ್ನು ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ಬಂಧನದಲ್ಲಿಟ್ಟಿದ್ದ. ಟಿಪ್ಪು ಸೆರೆಯಲ್ಲಿ ಕೊಂಡೊಯ್ಯುವ ಸಂದರ್ಭದಲ್ಲಿ ಕ್ರೈಸ್ತ ಸಲ್ದಾನಾ ಕುಟುಂಬದ ಹುಡುಗನ ರಕ್ಷಣೆಗೋಸ್ಕರ ಬಂಟ ಮನೆತನದವರು ಆತನನ್ನು ತಮ್ಮ ಮನೆಯಲ್ಲಿ ಅಡಗಿಸಿಟ್ಟಿದ್ದರು. ನಂತರ ತಮ್ಮ ಕುಟುಂಬದ ಸದಸ್ಯನಂತೆ ಕಿವಿಗೆ ಚಿನ್ನದ ಒಲೆಗಳನ್ನು ಹಾಕಿ ಶೆಟ್ಟಿ ಕುಟುಂಬದವನಂತೆ ಬಿಂಬಿಸಿದರು. ಆ ನಂತರ ಹಲವಾರು ವರ್ಷಗಳ ಬಳಿಕ ಬಂಧನ ಮುಕ್ತಗೊಂಡ ಕ್ರೈಸ್ತ ಕುಟುಂಬದ ಸದಸ್ಯರು ಹಿಂತಿರುಗಿದಾಗ ಅವರಿಗೆ ಆ ಹುಡುಗನನ್ನು ಒಪ್ಪಿಸಲಾಗಿತ್ತು. ಈ ಕಾರಣದಿಂದ ಕಿರೆಂ ರೆಮದಿ ಚರ್ಚ್‌ನ ವಾರ್ಷಿಕ ಹಬ್ಬದಂದು ಪ್ರತೀ ವರ್ಷ ಈ ಮೂರು ಮನೆತನದವರಿಗೆ ಬಾಳೆಹಣ್ಣು, ಅಡಿಕೆ ಗೊನೆ, ವೀಳ್ಯದೆಲೆ ನೀಡಿ ವಿಶೇಷ ಗೌರವ ನೀಡಲಾಗುತ್ತದೆ.

ತಮಗೆ ಸಹಕಾರ ನೀಡಿದ ನೆನಪಿಗೋಸ್ಕರ ಪ್ರತೀ ವರ್ಷದಂತೆ ಈ ಬಾರಿಯೂ ರಕ್ಷಣೆ ಮಾಡಿದ ಮೂರು ಕುಟುಂಬಗಳಿಗೆ ಭುಧವಾರ ಬಾಳೆಗೊಣೆ ವೀಳ್ಯದೆಲೆ ಅಡಿಕೆ ನೀಡಿ ಗೌರವಿಸಲಾಯಿತು. ಈ ಬಾರಿ ಪರಿಸರ ಜಾಗ್ರತಿಯನ್ನು ಮೂಡಿಸುವ ಸಲುವಾಗಿ ಬಾಳೆಗೊನೆ ಜೊತೆ ಮೂರು ಗಿಡಗಳನ್ನು ನೀಡಲಾಯಿತು, ಐಕಳಬಾವದ ಜಯಪಾಲ ಶೆಟ್ಟಿ, ತಾಳಿಪಾಡಿಗುತ್ತುವಿನ ದಿನೇಶ್ ಶೆಟ್ಟಿ, ಸುಕುಮಾರ್ ಶೆಟ್ಟಿ ಹಾಗೂ ಏಳಿಂಜೆ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಶಂಭು ಶೆಟ್ಟಿ ಗೌರವ ಸ್ವೀಕರಿಸಿದರು. ಮಂಗಳೂರು ಕಥೋಲಿಕ್ ಧರ್ಮ ಪ್ರಾಂಥ್ಯದ ಧಮಾಧ್ಯಕ್ಷರಾದ ಬಿಷಪ್ ರೆ. ಡಾ. ಪೀಟರ್ ಪೌಲ್ ಸಲ್ಡಾನಾ ಮುಂದಾಳತ್ವದಲ್ಲಿ ದಾಮಸ್ಕಟ್ಟೆ ಕಿರೆಂ ಚರ್ಚ್ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೊ, ಕಿರೆಂ ಚರ್ಚ್ ಸಹಾಯಕ ಧರ್ಮಗುರು ರೆ.ಫಾ. ಜಯಪ್ರಕಾಶ್, ಚರ್ಚ್ ಪಾಲನಾ ಮಂಡಲಿಯ ಉಪಾಧ್ಯಕ್ಷ ಬರ್ಟನ್ ಸಿಕ್ವೇರಾ, ಕಾರ್ಯದರ್ಶಿ ಅನಿತಾ ಡಿಸೋಜ, ಸಂತಾನ್ ಡಿಸೋಜ ಮತ್ತಿತರರು ಸಂಪ್ರದಾಯದಂತೆ ಗೌರವ ಸಲ್ಲಿಸಿದರು. ಎನೇ ಆಗಲಿ ತೀಪ್ಪುವಿನ ದಾಳಿಯಿಂದಾಗಿ ರಕ್ಷಣೆಗೊಳಪಟ್ಟ ಕೈಸ್ತ ಸಮಾಜ ಈ ಸಂಪ್ರದಾಯವನ್ನು ಮುಂದುವರಿಕೊಂಡು ಬಂದಿರು ವಿಶೇಷವೇ ಸರಿ.

Related posts

Leave a Reply