Header Ads
Header Ads
Breaking News

ಡಿ.1ರಿಂದ ಎಲ್ಲಾ ಟೋಲ್‌ಗೇಟ್‌ನಲ್ಲಿ ಫಾಸ್ಟ್‌ಟ್ಯಾಗ್ ಜಾರಿ : ಸರ್ವ ಪಕ್ಷಗಳಿಂದ ರಾಜಕೀಯ ಮುಕ್ತ ಪ್ರತಿಭಟನೆಗೆ ಸಿದ್ಧತೆ

ಮಂಜೇಶ್ವರ: ಡಿಶಂಬರ್  1 ರಿಂದ ದೇಶದ ಎಲ್ಲ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕ ಗಡಿ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಟೋಲ್ ಗೇಟ್‌ನಲ್ಲಿ ಆಸುಪಾಸಿನ ಐದು ಕಿಲೋ ಮೀಟರ್ ಆಸುಪಾಸಿನ ಜನರಿಗೆ ಈ ಮೊದಲು ನೀಡಿದಂತೆ ವಿನಾಯಿತಿಯನ್ನು ಮುಂದುವರಿಸಬೇಕು ಇಲ್ಲದೆ ಇದ್ದರೆ ಡಿಸಂಬರ್ 1 ರಂದು ಟೋಲ್‌ಗೇಟ್ ಬಳಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಸರ್ವ ರಾಜಕೀಯ ಮುಖಂಡರುಗಳ ಹಾಗು ಇತರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಹತ್ತರವಾದ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ ಟ್ಯಾಗ್ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರಂಭದ ಹೋರಾಟವೆಂಬಂತೆ ಸರ್ವ ಪಕ್ಷ ನೇತಾರರು ಮಂಗಳೂರು ಸಂಸದ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಪ್ರಾಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ನೀಡಲು ತೀರ್ಮಾನಿಸಲಾಗಿದೆ. ಬೇಡಿಕೆ ಈಡೇರದಿದ್ದರೆ ಬೃಹತ್ ಪ್ರತಿಭಟನೆ ನಡೆಸಲು ನೇತಾರರು ತೀರ್ಮಾನಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಸ್ಥಳೀಯ ಶಾಸಕ, ಸಂಸದರನ್ನು ಕೂಡಾ ಸೇರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಟೋಲ್ ಗೇಟ್ ನ ಐದು ಕಿಲೋ ಮೀಟರ್ ಸುತ್ತಳತೆಯಿಂದ ಸಂಚರಿಸುವ ಗೂಡ್ಸ್ ಟೆಂಪೋ, ಟ್ಯಾಕ್ಸಿ, ಖಾಸಗಿ ವಾಹನಗಳಿಗೆ ವಿನಾಯಿತಿ ನೀಡಬೇಕೆನ್ನುವ ಪ್ರಧಾನ ಬೇಡಿಕೆ ಮುಂದಿಟ್ಟು ಬೃಹತ್ ಪ್ರತಿಭಟನೆ ನಡೆಸಲು ಸರ್ವಪಕ್ಷ ಸಭೆ ತೀರ್ಮಾನಿಸಿದೆ.

ಸಭೆಯಲ್ಲಿ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ನೇತಾರರು ಪಾಲ್ಗೊಂಡಿರುವುದು ವಿಶೇಷವಾಗಿತ್ತು . ಸಭೆಯಲ್ಲಿಹೋರಾಟ ಸಮಿತಿ ನೇತಾರರಾದ ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಖ್ ತಲಪಾಡಿ , ಹರ್ಷಾದ್ ವರ್ಕಾಡಿ. ಸೈಫುಲ್ಲಾ ತಂಘಳ್ ,ಬಿಜೆಪಿ ನೇತಾರ ಹರೀಶ್ ಚಂದ್ರ ಮಂಜೇಶ್ವರ, ಮುಸ್ಲಿಂ ಲೀಗ್ ನೇತಾರರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *