Header Ads
Breaking News

ತುಂಬೆ ಡ್ಯಾಂನಲ್ಲಿ ಕುಸಿಯುತ್ತಿರುವ ಜಲಮಟ್ಟ:ರೇಷನಿಂಗ್ ವೇಳಾಪಟ್ಟಿ ಬದಲಾವಣೆ ಸಾಧ್ಯತೆ

ಮಂಗಳೂರು:ತುಂಬೆ ವೆಂಟೆಡ್ ಡ್ಯಾಂನಲ್ಲಿ ಜಲಮಟ್ಟ ವೇಗವಾಗಿ ಕುಸಿಯುತ್ತಿದೆ. ಸಂಗ್ರಹದಲ್ಲಿರುವ ನೀರು ಗರಿಷ್ಟ 20 ದಿನಗಳಿಗೆ ಮಾತ್ರ ಸಾಕಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ರೇಷನಿಂಗ್ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ ಇದೆ.
ಮುಂಗಾರು ಪೂರ್ವ ಬೇಸಿಗೆ ಮಳೆ ಬೀಳದೆ ಯಥಾಸ್ಥಿತಿ ಮುಂದುವರಿದರೆ ಈಗ ನಡೆಯುತ್ತಿರುವ ರೇಷನಿಂಗ್ ವೇಳಾಪಟ್ಟಿಯನ್ನು ಬದಲಾಯಿಸಿ ನೀರು ಪೂರೈಸುವ ದಿನಗಳನ್ನು ನಾಲ್ಕು ದಿನಗಳಿಂದ ಮೂರು ದಿನಗಳಿಗೆ ಇಳಿಸಬೇಕಾಗಿಬರಬಹುದು ಎಂದು ಅಂದಾಜಿಸಲಾಗಿದೆ. ವಾರದ ಹಿಂದೆ ದಿನಂಪ್ರತಿ 3 ಸೆ.ಮೀ. ನಷ್ಟು ನೀರು ಇಳಿಕೆಯಾಗುತ್ತಿತ್ತು. ಆದರೆ ಶುಕ್ರವಾರ ಒಂದೇ ದಿನ 9 ಸೆ.ಮೀ. ನೀರು ಇಳಿಕೆಯಾಗಿದೆ. ಇದು ಡ್ಯಾಂನಲ್ಲಿ ವೇಗವಾಗಿ ನೀರಿನ ಮಟ್ಟ ಇಳಿಯುವುದನ್ನು ಸೂಚಿಸುತ್ತದೆ. ಇದು ಹೀಗೆ ಮುಂದುವರಿದರೆ ಮಂಗಳೂರು ಮಹಾನಗರ ವ್ಯಾಪ್ತಿಯ ಜನರು ತೊಂದರೆ ಅನುಭವಿಸಬಹುದು.

Related posts

Leave a Reply

Your email address will not be published. Required fields are marked *