

ಉಳ್ಳಾಲ : ತೊಕ್ಕೊಟ್ಟು ಒಳಪೇಟೆಯ ಮನೆಯಿಂದ 15 ಪವನ್ ಚಿನ್ನ ಹಾಗೂ ರೂ.5000 ನಗದು ಕಳವುಗೈದಿರುವ ಘಟನೆ ಮಧ್ಯರಾತ್ರಿ ನಡೆದಿದೆ.
ತೊಕ್ಕೊಟ್ಟು ಒಳಪೇಟೆ ಓವರ್ ಬ್ರಿಡ್ಜ್ ಬಳಿಯ ಜಯರಾಜ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಮಂದಿ ಮಲಗಿದ್ದ ಸಂದರ್ಭ ಹಂಚು ತೆಗೆದು ಒಳನುಗ್ಗಿರುವ ಕಳ್ಳರು ಕಳವು ನಡೆಸಿದ್ದಾರೆ. ಸದ್ದು ಕೇಳಿದ ಮನೆಯಲ್ಲಿದ್ದ ಮಹಿಳೆಯೊಬ್ಬರು ಬೊಬ್ಬಿಡುವ ಸಂದರ್ಭ ಕಳ್ಳರು ಪರಾರಿಯಾಗಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.