Header Ads
Breaking News

ದರೋಡೆಕೋರರ ಬಂಧನಕ್ಕೆ ಗುಂಡಿನ ದಾಳಿ ಬಂಟ್ವಾಳ ಪೊಲೀಸರ ಕಾರ್ಯಾಚರಣೆ

 ದರೋಡೆ ಮತ್ತು ದನ ಕಳ್ಳತನ ಮಾಡಲು ಪ್ರಯತ್ನಿಸಿದವರ ಮೇಲೆ ಬಂಟ್ವಾಳ ಪೊಲೀಸ್‌ರಿಂದ ಗುಂಡಿನ ದಾಳಿ ನಡೆಸಿದ ಘಟನೆ ಗುರುವಾರ ತಡರಾತ್ರಿ ವೇಳೆ ನಡೆದಿದೆ.ಬೆಳ್ತಂಗಡಿ ಗೆರುಕಟ್ಟೆ ನಿವಾಸಿ ಕರಿಂ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಫೋನ್ ಕರೆಮಾಡಿ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಸುಮಾರು ೪ ರಿಂದ ೫ ಜನ ಕೈಯಲ್ಲಿ ಮಾರಕ ಆಯುದಗಳನ್ನು ಹಿಡಿದು ಕೊಂಡು ಓಡಾಡುತ್ತಿರುವುದಾಗಿ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಕಾರ್ಯಚರಣೆ ನಡೆಸಿ ಗುರುವಾಯನಕೆರೆ ಪೊಲೀಸ್ ಚೆಕ್ ಪೊಸ್ಟ್ ನಲ್ಲಿ ಕೆಂಪುಬಣ್ಣದ ಸ್ವಿಫ್ಟ್ ಕಾರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೆ ಬ.ಸಿ ರೋಡ್ ಕಡೆ ವೇಗವಾಗಿ ಹೊಗಲೆತ್ನಿಸಿದೆ. ಈ ಬಗ್ಗೆ ವೈರ್ ಲೆಸ್ ಮೂಲಕ ಬಂಟ್ವಾಳ ಪೊಲೀಸರಿಗೆ ತಿಳಿಸಿದ್ದು ತಕ್ಷಣ ಕಾರ್ಯ ಪ್ರವೃತ್ತರಾದ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಮಣಿಹಳ್ಳದ ಬಳಿ ಚೆಕ್ ಪೋಸ್ಟ್ ನಿರ್ಮಿಸಿ ಕೊಂಡು ವಾಹನ ತಪಾಸಣೆ ನಡೆಸುತ್ತಿರುವಾಗ ಪುಂಜಾಲಕಟ್ಟೆ ಪೊಲೀಸ್ ಚೆಕ್ ಪೋಸ್ಟ್‌ನಲ್ಲಿ ಕೂಡ ನಿಲ್ಲಿಸದೆ ಮುಂದೆ ಬರುತ್ತಿದ್ದ ಕಾರನ್ನು ಮದ್ವ ಚೆಕ್ ಪಾಯಿಂಟ್‌ನಲ್ಲಿ ಇದ್ದ ಸಿಬ್ಬಂದಿಯವರಾದ ಪಿಸಿ ಆದರ್ಶ ಮತ್ತು ಹೊಮ್ ಗಾರ್ಡ್ ಭಾಸ್ಕರ್ ರವರು ಕಾರನ್ನು ನಿಲ್ಲಿಸಿ ಎಂದು ಹೇಳಿದಾಗ ಕಾರನ್ನು ನಿಲ್ಲಿಸದೆ ಚಲಾಯಿಸಿಕೊಂಡು ಬೀ.ಸಿ ರೊಡ್ ಕಡೆ ಬರುತ್ತಿದದ್ದಾಗ ಮಣಿಹಳ್ಳ ಜಂಕ್ಷನ್ ನಲ್ಲಿ ಇಲಾಖಾ ವಾಹನವನ್ನು ರಸ್ತೆಗೆ ಅಡ್ಡ ಇಟ್ಟು ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕೆಂಪು ಬಣ್ಣದ ಸ್ವಿಫ್ಟ್ ಕಾರನ್ನು ದೂರದಲ್ಲಿರುವಾಗಲೆ ನಿಲ್ಲಿಸಲು ಸೂಚನೆ ನೀಡಿದಾಗ ವಾಹನವನ್ನು ಅತಿವೇಗದಿಂದ ಚಲಾಯಿಸಿ ಕೋಂಡು ಬಂದು ಸಿಬ್ಬಂದಿಯವರ ಮೆಲೆ ರಾಡ್ ಮತ್ತು ತಲವಾರಿನಿಂದ ಹಲ್ಲೆ ಮಾಡಲು ಪ್ರಯತ್ನಿಸಿದ್ದು ತಮ್ಮ ಮತ್ತು ಸಿಬ್ಬಂದಿಯವರ ರಕ್ಷಣೆಗಾಗಿ ಬಂಟ್ವಾಳ ನಗರ ಠಾಣೆ ಪಿ.ಎಸ್.ಐ ಚಂದ್ರಶೇಖರ ರವರು ತಮ್ಮ ಕೈಯಲ್ಲಿದ್ದ ಪಂಪ್ ಆಕ್ಷನ್ ವೆಪನ್‌ನಿಂದ ಕಾರಿನಮೇಲೆ ಮತ್ತು ಬಂಟ್ವಾಳ ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ರವರು ತಮ್ಮ ಪಿಸ್ತೂಲ್ ನಿಂದ ಕಾರಿನ ಮೇಲೆ ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದೆ.

 ಆರೋಪಿಗಳು ಕಾರನ್ನು ನಾವುರುಕಡೆಗೆ ಹೋಗಲು ತಿರುಗಿಸಿದಾಗ ಕಾರ್ ಚರಂಡಿಯಲ್ಲಿ ಸಿಕ್ಕಿಹಾಕಿ ಕೊಂಡಿದ್ದು ತಕ್ಷಣ ಹಿಂಬದಿಯಲ್ಲಿ ಕೂತಿದ್ದ ಇಬ್ಬರು ಪರಾರಿಯಾಗಿದ್ದಾರೆ ಪೊಲೀಸರು ಕಾರನ್ನು ಸುತ್ತುವರೆದು ಕಾರಿನಲ್ಲಿದ್ದ ಮೂರುಜನರನ್ನು ಹಿಡಿದು ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ಎರಡು ತಲವಾರು,ಒಂದು ರಾಡ್,ಮೆಣಸಿನಪುಡಿ,ಮಂಕಿ ಕ್ಯಾಪ್ ಹಗ್ಗಗಳಿರುವುದು ಕಂಡು ಬಂದಿದೆ. ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ಡಾಕಾಯತಿ ಮಾಡಲು ಮತ್ತು ದಾರಿಯಲ್ಲಿರುವ ಮನೆಯಲ್ಲಿ ದನ ಕಳ್ಳತನ ಮಾಡಲು ಹೋಗಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳ ಪೈಕಿ ಸುರತ್ಕಲ್ ನ ಮೊಹಮ್ಮದ್ ಮುಕ್ಸಿನ್ 23) ಮೇಲೆ ವಿವಿಧ ಠಾಣೆಗಳಲ್ಲಿ14 ಕ್ಕೂ ಹೆಚ್ಚು ಪ್ರಕರಣ ಗಳಿವೆ. ಕುಪ್ಪೆಪದವಿನ ಮೊಹಮ್ಮದ್ ಇರ್ಷಾದ್ (29) ಮಾರಿಪಳ್ಳದ ಸದ್ದಂ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕೊಲೆ ಯತ್ನದ ಪ್ರಕರಣ ವಿರುತ್ತದೆ. ದರೋಡೆಕೋರರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Related posts

Leave a Reply