Header Ads
Header Ads
Breaking News

ದೇರಳಕಟ್ಟೆಯ ಕಣಚೂರು ಕಾಲೇಜ್ ಆಫ್ ಫಿಸಿಯೋಥೆರಫಿ, ನರ್ಸಿಂಗ್ ಸೈನ್ಸಸ್ ಹಾಗೂ ಅಲೈಡ್ ಹೆಲ್ತ್ ಸೈನ್ಸ್‌ನ ನೂತನ ಶೈಕ್ಷಣಿಕ ವಿಭಾಗ ಉದ್ಘಾಟನೆ

 

ಕಣಚೂರು ಕಾಲೇಜ್ ಆಫ್ ಫಿಸಿಯೋಥೆರಫಿ, ನರ್ಸಿಂಗ್ ಸೈನ್ಸಸ್ ಹಾಗೂ ಅಲೈಡ್ ಹೆಲ್ತ್ ಸೈನ್ಸ್‌ನ ನೂತನ ಶೈಕ್ಷಣಿಕ ವಿಭಾಗ ವಕ್ಪ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಉದ್ಘಾಟಿಸಿದರು. ನಂತರ ಮಾತನಾಡಿ, ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಂತಹ ವ್ಯವಸ್ಥೆ ದಕ್ಷಿಣದಲ್ಲಿಅಪರೂಪವಾಗಿದ್ದು ಕನಿಷ್ಠ ಐನೂರು ಬೆಡ್ ವ್ಯವಸ್ಥೆ ಇದ್ದರೂ ಕಾಲೇಜು, ಆಸ್ಪತ್ರೆ ಮಾಡುತ್ತೇವೆ ಎಂದರೂ ಸರಕಾರ ಅದಕ್ಕೆ ಅವಕಾಶ ಕೊಡುತ್ತದೆ. ಹಾಗಿದ್ದರೂ ಕಣಚೂರು ಸಂಸ್ಥೆಯ ಅಧ್ಯಕ್ಷರು ಸಾವಿರದ ಇನ್ನೂರು ಬೆಡ್‌ಗಳಿರುವ ಸುಸಜ್ಜಿತ ಮೆಡಿಕಲ್ ಕಾಲೇಜು ಆಸ್ಪತ್ರೆ ಆರಂಭಿಸಿದ್ದು ನಿಜಕ್ಕೂ ಇಲ್ಲಿ ಶಿಕ್ಷಣ ಪಡೆಯುವ ವೈದ್ಯಕೀಯ ಸೇರಿದಂತೆ ಎಲ್ಲ ವಿಭಾಗದ ವಿದ್ಯಾರ್ಥಿಗಳ ಅದೃಷ್ಟ ನಾನು ರಾಜಕೀಯ ಸೇರಬೇಕು ಎಂದು ಬಯಸಿದ ವ್ಯಕ್ತಿ ಅಲ್ಲ. ನನಗೆ ಅದರ ಬಗ್ಗೆ ಒಲವು ಕೂಡಾ ಇರಲಿಲ್ಲ. ರಾಜಕೀಯಕ್ಕೆ ಬಂದ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಜನಬೆಂಬಲ ಪ್ರೀತಿ ವಿಶ್ವಾಸ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಹೇಳಿದರು.

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಳಿತ ನಿರ್ದೇಶಕ ಹಾಜಿ ಯು.ಕೆ. ಮೋನು ಪ್ರಾಸ್ತಾವಿಕ ಮಾತುಗಳನ್ನಾಡಿ ಜಮೀರ್ ಅಹ್ಮದ್ ಖಾನ್ ಅವರಿಗೆ ಅಲ್ಪಸಂಖ್ಯಾತರ ಬಗೆಗಿನ ಕಾಳಜಿ ನಿಜಕ್ಕೂ ಮೆಚ್ಚಬೇಕಿದೆ. ನಾನು ಕಿಂಚಿತ್ತಾದರೂ ಎಲ್ಲ ಸಮಾಜಕ್ಕೆ ಸಹಾಯ ಮಾಡಿದ್ದೇನೆ. ನಿಮ್ಮ ಜೊತೆ ನಾನು ಸದಾ ಕಾಲ ಇದ್ದು ಸಮಾಜಕ್ಕೆ ನಿರಂತರ ಸಹಾಯ ಮಾಡುತ್ತೇನೆ ಎಂದರು.

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹ್ಮಾನ್, ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಡಾ. ಇಫ್ತಿಕಾರ್ ಅಲಿ, ಕಣಚೂರು ಮೆಡಿಕಲ್ ಕಾಲೇಜು ಡೀನ್ ಡಾ. ಎಚ್. ಎ. ವಿರೂಪಾಕ್ಷ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವಾ, ಜೆಡಿಎಸ್ ಮುಖಂಡ ಎ.ಎ. ಹೈದರ್ ಪರ್ತಿಪ್ಪಾಡಿ, ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಎನ್. ಎಸ್. ಕರೀಂ, ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Related posts

Leave a Reply