Header Ads
Breaking News

ದೇರಳಕಟ್ಟೆಯ ನಿಟ್ಟೆ ವಿ.ವಿ.ಯಲ್ಲಿ ರಾಷ್ಟ್ರೀಯ ಏಕತಾ ಶಿಬಿರ-2020ಕ್ಕೆ ಚಾಲನೆ

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟಿಯ ಸೇವಾ ಯೋಜನೆ ಬೆಂಗಳೂರು ವತಿಯಿಂದ ದೇರಳಕಟ್ಟೆ ನಿಟ್ಟೆ ಪರಿಗಣಿತ ವಿ.ವಿಯಲ್ಲಿ ಮುಂದಿನ ಏಳು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ  ಏಕತಾ ಶಿಬಿರ-2020 ಕ್ಕೆ ಚಾಲನೆ ದೊರಕಿತು.

ದೇರಳಕಟ್ಟೆಯ ವಿ.ವಿ ಆಡಿಟೋರಿಯಂನಲ್ಲಿ ನಡೆದ ರಾಷ್ಟ್ರೀಯ  ಏಕತಾ ಶಿಬಿರ- 2020ಕ್ಕೆ ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಜಿ ಕಲ್ಪನಾ ಐಎಎಸ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಷ್ಟ್ರೀಯ  ಸೇವಾ ಯೋಜನೆ ಎಂದರೆ ಕ್ಯಾಂಪಸ್ ಗಳನ್ನು ಗುಡಿಸುವುದು, ಗಿಡಗಳನ್ನು ನೆಡುವುದು ಮಾತ್ರವಲ್ಲ ಜೀವನದ ವೇದಿಕೆಗೆ ಅಂಕಗಳನ್ನು ಗಳಿಸುವುದರ ಜೊತೆಗೆ ಆತ್ಮವಿಶ್ವಾಸದ ಹೆಜ್ಜೆಗಳ ಜತೆಗೆ ಮುನ್ನಡೆಯಲು ಜ್ಞಾನ ಗಳಿಸುವಿಕೆ. ರಾಷ್ಟç ಬೆಳೆಸುವ ಉದ್ದೇಶದಿಂದ ಶಿಬಿರಗಳಿಗೆ ಸರಕಾರ ಬಂಡವಾಳ ಹೂಡುವಿಕೆ ಮಾಡುತ್ತಿರುವುದರಿಂದ, ಇಲಾಖೆಯ ನಿರ್ದೇಶನದಂತೆ ಪರಿವಿಧಿಯೊಳಗೆ ಕಾರ್ಯಕ್ರಮಗಳು ನಡೆಯಲಿ. ರಾಷ್ಟ್ರೀಯ  ಸೇವಾ ಯೋಜನೆ ವಿದ್ಯಾರ್ಥಿಗಳು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಸಂಪೂರ್ಣ ಜ್ಞಾನ ಒದಗಿಸುವುದು ಎಂದರು.

ನಿಟ್ಟೆ ಪರಿಗಣಿತ ವಿ.ವಿಯ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳನ್ನು ಸೇವಾ ಚಟುವಟಿಕೆಗಳಲ್ಲಿ ತೊಡಗಿಸುವುದರ ಮುಖೇನ, ಸಮಾಜದ ಬೆಳವಣಿಗೆಯಲ್ಲಿ ಅವರ ಪಾತ್ರವನ್ನು ಹೇಳುವ ಕಾರ್ಯ ಶಿಬಿರದಿಂದ ಆಗಲಿ. ಜೀವನದಲ್ಲಿ ಶಿಸ್ತು ಮುಖ್ಯ ಅನ್ನುವುದನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವ ಮುಖೇನ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ ಎಂದರು.

ನಿಟ್ಟೆ ವಿ.ವಿ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ನಿಟ್ಟೆ ವಿ.ವಿಯಲ್ಲಿ ಕ್ಷೇಮ ಸೇವಾದಳ ಆರಂಭವಾಗಿದೆ. ಆಸ್ಪತ್ರೆಗೆ ಬರುವ ಬಡ, ಗ್ರಾಮೀಣ ರೋಗಿಗಳಿಗೆ ಸಹಕಾರವಾಗುವಂತೆ ಘಟಕ ಕಾರ್ಯಾಚರಿಸುತ್ತಿದೆ. ಏಳು ದಿನಗಳ ಕಾಲ ಶಿಬಿರಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದ0ತೆ ಸಂಸ್ಥೆ ಕಾರ್ಯನಿರ್ವಹಿಸುವ ಜವಾಬ್ದಾರಿ ಇದೆ ಎಂದರು.

ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ. ಗಣನಾಥ್ ಶೆಟ್ಟಿ ಎಕ್ಕಾರ್ ಮುಖ್ಯ ಅತಿಥಿಯಾಗಿದ್ದರು. ನಿಟ್ಟೆ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ. ಆರ್.ಸುಮಲತಾ ಶೆಟ್ಟಿ, ನಿಟ್ಟೆ ವಿ.ವಿ ಕುಲಸಚಿವೆ ಪ್ರೊ. ಅಲ್ಕಾ ಕುಲಕರ್ಣಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *