Header Ads
Breaking News

ದ.ಕ. ಜಿಲ್ಲಾ ಜಾತ್ಯಾತೀತ ಜನತಾ ದಳ ಮಹಿಳಾ ಘಟಕ : ಮಹಿಳಾ ಸಮಾವೇಶ ಮತ್ತು ಮಹಿಳಾ ದಿನಾಚರಣೆ, ಸಾಮರಸ್ಯ ಸಂಗಮ

ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಜನತಾ ದಳ ಮಹಿಳಾ ಘಟಕದ ವತಿಯಿಂದ ಮಹಿಳಾ ಸಮಾವೇಶ, ಮಹಿಳಾ ದಿನಾಚರಣೆ ಮತ್ತು ಸಾಮರಸ್ಯ ಸಂಗಮವು ಮಾರ್ಚ್ 21ರಂದು ಕದ್ರಿಯಲ್ಲಿರುವ ಲಯನ್ಸ್ ಅಶೋಕ ಸೇವಾಭವನದಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುಮತಿ ಎಸ್. ಹೆಗ್ಡೆ ಅವರು, ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರ ಹಕ್ಕುಗಳಿಗಾಗಿ ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಮಹಿಳೆಯರ ಮಧ್ಯೆ ಸಂಘಟಿತ ಶಕ್ತಿ ರೂಪುಗೊಳ್ಳಲು ಸ್ಪೂರ್ತಿ ನೀಡತಕ್ಕತಹ ದಿನ. ಇದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರ ಮಧ್ಯೆ ಸಂಘಟನೆಯನ್ನು ಬಲಿಷ್ಠಗೊಳಿಸಲು ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದತೆ, ಸಾಮರಸ್ಯ ನಶಿಸಿ ಹೋಗುವಂತಹ ಸಂದರ್ಭದಲ್ಲಿ ಸೌಹಾರ್ದತೆಯನ್ನು ಇನ್ನಷ್ಟು ಬಲಿಷ್ಟಗೊಳಿಸಬೇಕು ಜನತೆಯ ಮಧ್ಯೆ ಸಾಮರಸ್ಯವನ್ನು ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಸಾಮರಸ್ಯ ಸಂಗಮವನ್ನು ಆಯೋಜಿಸಲಾಗಿದೆ. ಇನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ವೈ,.ಎಸ್. ವಿ ದತ್ತ ಆಗಮಿಸಲಿದ್ದಾರೆ. ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲೀಲಾವತಿ ಆರ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಬಿ.ಎಮ್. ಫಾರೂಕ್, ಎಸ್.ಎಲ್ ಬೋಜೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪದಾಧಿಕಾರಿಗಳಾದ ಚೂಡಾಮಣಿ, ವಿಣಾ ಜೆ. ಶೆಟ್ಟಿ, ಶ್ರೀಮಣಿ, ಕವಿತಾ, ಸುಕನ್ಯಾ, ನಿರ್ಮಲಾ ಉಪಸ್ಥಿತರಿದ್ದರು

Related posts

Leave a Reply

Your email address will not be published. Required fields are marked *