Header Ads
Header Ads
Breaking News

ನಿಜವಾದ ಸೇವೆ ಮಾಡಬೇಕೆನ್ನುವ ಉದ್ದೇಶ ಇದ್ದರೆ ಲಯನ್ಸ್ ಗೆ ಬನ್ನಿ, ಹರಿಕೃಷ್ಣ ಪುನರೂರು

ಬಂಟ್ವಾಳ: ಕೇವಲ ಶೋಕಿ ಮಾಡುವುದಕ್ಕಲ್ಲ, ನಿಜವಾಗಿಯೂ ಸೇವಾ ಮಾಡಬೇಕೆನ್ನುವ ಉದ್ದೇಶ ಇರುವವರು ಮಾತ್ರ ಲಯನ್ಸ್ ಕ್ಲಬ್‌ಗೆ ಬನ್ನಿ. ಇದೊಂದು ಅಂತರಾಷ್ಟ್ರೀಯ ಸೇವಾ ಸಂಸ್ಥೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ, ಲಯನ್ಸ್ ಜಿಲ್ಲಾ ಗವರ್ನರ್ ಹರಿಕೃಷ್ಣ ಪುನರೂರು ಹೇಳಿದರು.
ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ ಇದರ ೨೦೧೭-೧೮ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸುವ ಮುನ್ನ ಅವರು ಮಾತನಾಡಿದರು. ಸೇವೆ ಮಾಡುವವರಿಗೆ ನಿರ್ದಿಷ್ಟವಾದ ವೇಷ ಭೂಷಣವೆಂಬುದಿಲ್ಲ. ಬದಲಾಗಿ ಸೇವೆ ಮಾಡುವ ಮನಸ್ಸು ಮಾತ್ರ ಬೇಕು. ನಿತ್ಯ ಒಂದಲ್ಲ ಒಂದು ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಬದುಕಿನುದ್ದಕ್ಕೂ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಕರ್ನಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಅನಂತಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ನಮಗೆ ಬರುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿಕೊಂಡಾಗ ಅದು ಅವಕಾಶವಾಗಿ ಮಾರ್ಪಡುತ್ತದೆ. ಕಳೆದು ಹೋದ ಸಮಯಕ್ಕೆ ಚಿಂತಿಸದೇ ನಮ್ಮ ಕಾರ್ಯದಲ್ಲಿ ಮುನ್ನಡೆದಾಗ ಹೊಸ ಅವಕಾಶಗಳು ಸಿಗಲು ಸಾಧ್ಯವಿದೆ ಎಂದರು.
ಲಯನ್ಸ್‌ನ ನೂತನ ಅಧ್ಯಕ್ಷರಾಗಿ ಜಗದೀಶ ಯಡಪಡಿತ್ತಾಯ, ಕಾರ್ಯದರ್ಶಿಯಾಗಿ ರಾಮಕೃಷ್ಣ ರಾವ್, ಕೋಶಾಧಿಕಾರಿಯಾಗಿ ರೋಹಿತಾಶ್ವ, ಲಯನೆಸ್ ಕ್ಲಬ್‌ನ ಅಧ್ಯಕ್ಷೆಯಾಗಿ ಚಿತ್ರಾ ಜೆ. ಯಡಪಡಿತ್ತಾಯ, ಕಾರ್ಯದರ್ಶಿಯಾಗಿ ಸುಜಾತ ರವಿಶಂಕರ್, ಕೋಶಾಧಿಕಾರಿಯಾಗಿ ವಸಂತಿ ಎಲ್. ಶೆಟ್ಟಿ ಅಧಿಕಾರ ಸ್ವೀಕರಿಸಿಕೊಂಡರು. ನಿಕಟಪೂರ್ವಾಧ್ಯಕ್ಷ ಲಕ್ಷ್ಮಣ್ ಅಗ್ರಬೈಲು, ಕಾರ್ಯದರ್ಶಿ ಉಮೇಶ್ ಆಚಾರ್, ಕೋಶಾಧಿಕಾರಿ ಶ್ರೀನಿವಾಸ ಪೂಜಾರಿ, ನಿಕಟಪೂರ್ವಾಧ್ಯಕ್ಷೆ ದೇವಿಕಾ ದಾಮೋದರ್ , ಶರ್ಮಿಳಾ ಸುಧಾಕರ್, ವೃಂದಾ ಎಸ್ ಕುಡ್ವ, ಜಿಲ್ಲಾ ಸಮಪುಟ ಕಾರ್ಯದರ್ಶಿ ವಸಂತ ಶೆಟ್ಟಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಿಕಟಪೂರ್ವಾಧ್ಯಕ್ಷ ಲಕ್ಷ್ಮಣ್ ಅಗ್ರಬೈಲು ಸ್ವಾಗತಿಸಿ, ನೂತನ ಕಾರ್ಯದರ್ಶಿ ರಾಮಕೃಷ್ಣ ರಾವ್ ವಂದಿಸಿದರು.

Related posts

Leave a Reply