Header Ads
Breaking News

ನೀರಿನಲ್ಲಿ ನಡೆಯುವ ಬಂಡಿ ಉತ್ಸವದೊಂದಿಗೆ ಕುಕ್ಕೆ ಜಾತ್ರೆ ಮುಕ್ತಾಯ

ಮಹಾತೋಬಾರ ಕುಕ್ಕೆ ಸುಬ್ರಮಣ್ಯ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವವು ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೋತ್ಸವಗಳು ಸಂಪನ್ನಗೊಂಡಿತು. ವೈದಿಕ ವಿಧಾನಗಳನ್ನು ನೆರವೇರಿಸಿದ ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ಇಳಿಸಲಾಯಿತು.ಆ ಬಳಿಕ ದೇವಳದಲ್ಲಿ ಮಹಾ ಹೋಮ ನೆರವೇರಿತು. ಉತ್ಸವದ ನಿಮಿತ್ತ ಮಧ್ಯಾಹ್ನ ನಂತರ ದೇವಳದ ಹೊರಾಂಗಣ ದ ಸುತ್ತಲೂ ನೀರನ್ನು ತುಂಬಿಸಲಾಯಿತು. ರಾತ್ರಿ ಮಹಾಪೂಜೆಯ ಬಳಿಕ ದೀಪಾರಾಧನೆಯುಕ್ತ ಪಲ್ಲಕ್ಕಿ ಉತ್ಸವ ನೀರಿನಲ್ಲಿ ನೆರವೇರಿತು. ನಂತರ ನೀರಿನಲ್ಲಿ ಶ್ರೀ ದೇವರ ಶೇಷ ವಾಹಣಯುಕ್ತ ಬಂಡಿ ರಥೋತ್ಸವ ನಡೆಯಿತು. ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವಗಳು ಸಮಾಪ್ತಿಯಾಯಿತು. ಉತ್ಸವವನ್ನು ಸಹಸ್ರಾರು ಭಕ್ತರು ನೋಡಿ ಕೃತಾರ್ಥ ರಾದರು.ಶ್ರೀ ದೇವಳದ ಆನೆ ಯಶಸ್ವಿಯು ಹೊರಾಂಗಣ ದಲ್ಲಿ ನೀರು ತುಂಬಿಸಿದುದರಿಂದ ತುಂಬಾ ಸಂಭ್ರಮಪಟ್ಟಿತು. ನೀರಿನೊಂದಿಗೆ ಹೊರಳಾಡಿ ಸಂತೋಷಪಡುವುದರೊಂದಿಗೆ ಭಕ್ತಾಧಿಗಳಿಗೂ ಹೆಚ್ಚಿನ ಸಂತೋಷ ನೀಡಿತು. ನೀರಿನಲ್ಲಿ ಪುಟಾಣಿ ಮಕ್ಕಳು ಒದ್ದೆಯಾಗಿ ಆಟವಾಡಿದರು. ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ & ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಡಾ. ಯತೀಶ್ ಉಳ್ಳಾಲ್, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ದೇವಳದ ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಹನ್ ರಾಂ ಸುಳ್ಳಿ, ಪಿ.ಜಿ.ಎಸ್.ಎನ್.ಪ್ರಸಾದ್, ಮನೋಹರ್ ರೈ ಕಡಬ, ಪ್ರಸನ್ನ ದರ್ಬೆ, ವನಜಾ ಪಿ.ಭಟ್,&ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.ಶ್ರೀ ಕ್ಷೇತ್ರದ ಜಾತ್ರೆಯ ಅವಧಿಯಲ್ಲಿ ಶ್ರೀ ದೇವಳದ ವಿಶೇಷ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರ ನಡೆಯುವುದಿಲ್ಲ. ಶನಿವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಮುಕ್ತಾಯಗೊಂಡಿರುವುದರೊಂದಿಗೆ ಜಾತ್ರೆ ಮುಕ್ತಾಯಗೊಂಡಿರುವುದರೊಂದಿಗೆ ಡಿ.27 ರಿಂದ ಸರ್ಪ ಸಂಸ್ಕಾರ ಸೇವೆಯು ಪುನರಾರಂಭಗೊಂಡಿತು.

Related posts

Leave a Reply

Your email address will not be published. Required fields are marked *