Header Ads
Header Ads
Breaking News

ನೆರೆ ಪೀಡಿತ ಪ್ರದೇಶಕ್ಕೆ ಸಂಸದೆ ಭೇಟಿ

ಉಡುಪಿ ಜಿಲ್ಲೆಯಲ್ಲಿ ಮಳೆಗೆ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಇಂದು ಭೇಟಿ ನೀಡಿದರು.ಪಡುಬಿದ್ರಿ ಪಾದೆಬೆಟ್ಟುವಿನಲ್ಲಿ ನೆರೆಗೆ ಸಿಕ್ಕಿ ಸಾವಿಗೀಡಾದ ಬಾಲಕಿ ನಿಧಿ ಸಾವಿಗೆ ಸಂಸದೆ ಸಂತಾಪ ವ್ಯಕ್ತಪಡಿಸಿದರು. ಅಂತೆಯೇ ಕಾರ್ಕಳದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ ಗ್ರಾ.ಪಂ ಸದಸ್ಯೆ ಶೀಲಾ ಕುಟುಂಬಕ್ಕೂ ಸಾಂತ್ವನ ಹೇಳಿದರು.ಇದೇ ಸಂಧರ್ಭದಲ್ಲಿ ಮಾತನಾಡಿದ ಅವರು ಸರ್ಕಾರ ತಕ್ಷಣ ಈ ಕಡೆ ಧಾವಿಸಬೇಕು. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಇಲ್ಲ, ಸತ್ತುಹೋಗಿದೆ. ಒಬ್ಬ ಮುಖ್ಯಮಂತ್ರಿ ಎಲ್ಲಾ ಖಾತೆ ನಿಭಾಯಿಸ್ತಿದಾರೆ. ಹದಿನೈದು ದಿನ ಕಾಂಗ್ರೇಸ್, ಜೆಡಿಎಸ್ ಶಾಸಕರು ರಿಸಾರ್ಟ್‌ನಲ್ಲಿದ್ರು, ಈಗ ದೆಹಲಿಯಲ್ಲಿ ಬೀಡುಬಿಟ್ಟಿದಾರೆ.ಯಾರು ಮಂತ್ರಿ ಆಗ್ಬೇಕು? ಯಾವ ಖಾತೆ ಯಾರಿಗೆ ಬ್ಯುಸಿಯಾಗಿದ್ದಾರೆ. ಇನ್ನೂ ಖಾತೆ ಹಂಚಿಕೆ ಜಗಳದಲ್ಲಿ ಕಾಂಗ್ರೆಸ್ ಜೆಡಿಎಸ್ ನಿರತವಾಗಿದೆ. ಸರ್ಕಾರ ಇಲ್ಲದೆ ಅಧಿಕಾರಿಗಳು ನಿಧಾನಗತಿಯ ಕೆಲಸ ಮಾಡ್ತಿದಾರೆ. ಮನೆಹಾನಿ, ತೋಟ ನಾಶಕ್ಕೂ ಸೂಕ್ತಪರಿಹಾರ ಕೊಡಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 

Related posts

Leave a Reply