Header Ads
Breaking News

ನೋವಿನಲ್ಲೇ ದಿನ ಕಳೆಯುತ್ತಿರುವ ಬಡ ಕುಟುಂಬ : ವೈದ್ಯಕೀಯ, ಆರ್ಥಿಕ ನೆರವಿಗಾಗಿ ಸಹಾಯಹಸ್ತ ಬಯಸುತ್ತಿರುವ ಕುಟುಂಬ

ಒಂದು ಕಡೆ ಕಡು ಬಡತನ… ಇನ್ನೊಂದೆಡೆ ನೋವಿನಲ್ಲೇ ದಿನ ಕಳೆಯುತ್ತಿರುವ ಕುಟುಂಬ… ದುಡಿಯುವ ಹುಮ್ಮಸ್ಸಿದ್ದರೂ ಅನಾರೋಗ್ಯದಿಂದ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ.ಕೈಯಲ್ಲಿ ದುಡಿಮೆಯಿಲ್ಲ ಪತಿ ಮತ್ತು ಮಗಳ ಪರಿಸ್ಥಿತಿ ನೆನೆದು ಕಣ್ಣೀರು ಹಾಕುತ್ತಿರುವ ಪತ್ನಿ ಇಂತಹ ಕಷ್ಟದ ಬದುಕು ಸಾಗಿಸುತ್ತಿರುವ ಕಾಟಿಪಳ್ಳದ ಹರೀಶ್ ಬಂಗೇರ ತುಳಸಿ ದಂಪತಿಯ ಕರುಣಾಜನಕ ಕಥೆಯಿದು.

ಒಂದು ಕಡೆ ಎಳವೆಯಿಂದಲೇ ಮೆದುಳಿನ ನರದ ಸಮಸ್ಯೆಯಿಂದ ಕುಳಿತಲ್ಲಿಯೇ ಕೈಕಾಲಿನ ಸ್ವಾಧೀನ ಕಳೆದುಕೊಂಡಿರುವ ಮಗಳು. ಇನ್ನೊಂದು ಕಡೆ ದುಡಿಯುವ ಹುಮ್ಮಸ್ಸೂ ಇದ್ದರೂ ಮೆದುಳಿನಲ್ಲಿ ಆದ ಕ್ಯಾನ್ಸರ್ ಗೆಡ್ಡೆಯಿಂದ ಇದೀಗ ಮನೆಯಲ್ಲಿಯೇ ಕುಳಿತುಕೊಳ್ಳುವ ಪರಿಸ್ಥಿತಿ ಕೈಯಲ್ಲಿ ದುಡಿಮೆಯಿಲ್ಲ. ಪತಿ ಹಾಗೂ ಮಗಳ ಪರಿಸ್ಥಿತಿಯನ್ನು ಸದಾ ನೆನೆದು ಕಣ್ಣೀರು ಹಾಕುವ ಪತ್ನಿ ಇಂತಹ ಕಷ್ಟದ ಸ್ಥಿತಿಯಲ್ಲಿ ಬದುಕುತ್ತಿರುವ ಕರುಣಾಜನಕ ಕುಟುಂಬದ ಕಥೆ. ಬೆಳ್ತಂಗಡಿಯ ನಿವಾಸಿ ಪ್ರಸ್ತುತ ಸುರತ್ಕಲ್ ನ ಚೊಕ್ಕಬೆಟ್ಟುವಿನಲ್ಲಿ ವಾಸವಿದ್ದ ಇದೀಗ ಕಾಟಿಪಳ್ಳ ಚರ್ಚ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿರುವ ಹರೀಶ್ ಬಂಗೇರ ಹಾಗೂ ತುಳಸಿ ದಂಪತಿಗಳ ದುಖಃದ ಜೀವನ. ಹರೀಶ್ ಬಂಗೇರ (42) ಅವರು ಚೊಕ್ಕಬೆಟ್ಟುವಿನ ಬಳಿ ಮನೆಯಲ್ಲಿದ್ದ ಸಂದರ್ಭದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಮನೆಯ ಜವಬ್ದಾರಿಯನ್ನು ನೋಡಿಕೊಳ್ಳುತ್ತಿದ್ದವರು. ಅವರಿಗೆ ಪತ್ನಿ ತುಳಸಿ ಹಾಗೂ ಇಬ್ಬರು ಹೆಣ್ಣು ಮಕ್ಕಳು. ಎರಡನೇ ಹೆಣ್ಣು ಮಗು ಎಳವೆಯಿಂದಲೇ ಮೆದುಳಿನ ನರ ವೀಕ್ ಆದ ಕಾರಣದಿಂದ ತನ್ನ ಎಡಕೈ ಕಾಲಿನ ಬಲವನ್ನೇ ಕಳೆದುಕೊಂಡು ಎಲ್ಲವೂ ಕುಳಿತಲ್ಲಿಯೇ ಹಾಗೂ ಮಾತನಾಡದ ಪರಿಸ್ಥಿತಿ. ತುಳಸಿ ಅವರ ಎರಡನೇ ಹೆರಿಗೆಯಲ್ಲಿ ಸಮಸ್ಯೆಯಾದ ಕಾರಣ ಆಪರೇಷನ್ ಮಾಡಿದ ಮಗುವು ಹಾಗೂ ತಾಯಿ ಬದುಕುಳಿಯುವ ಸಾಧ್ಯತೆ ಬಹಳ ಕಮ್ಮಿ ಇತ್ತು.

ಮಗುವಿನ ಹೆರಿಗೆಯಾದ ತಕ್ಷಣವೇ ಮಗುವನ್ನು ಐಸಿಯುನಲ್ಲಿಡಲಾಗಿತ್ತು. ತಾಯಿ ಒಂದು ದಿನ ಬಿಟ್ಟು ಪ್ರಜ್ಞೆ ಬಂದದ್ದು ಡಾಕ್ಟರ್ ನವರು ತಾಯಿ ಮಗು ಬದುಕಿದ್ದೇ ಪವಾಡ ಎಂದು ಉದ್ಘರಿಸಿದ್ದರು. ಆ ಬಳಿಕ ಮಗುವಿನ ಮೆದುಳಿನ ಸಮಸ್ಯೆಯನ್ನು ಡಾಕ್ಟರ್ ಹರೀಶ್ ಬಂಗೇರ ಅವರಲ್ಲಿ ತಿಳಿಸಿದ್ದರು ಮಗುವಿಗೆ ಬೆಳವಣಿಗೆ ಆದರೂ ಕೈಕಾಲು ಬಲಹೀನ ಹಾಗೂ ನಡೆಯುವುದು ಕಷ್ಟವೆಂದು ತಿಳಿಸಿದ್ದರು. ಅಲ್ಲದೇ ಎರಡನೇ ವರ್ಷದಲ್ಲಿ ಕಣ್ಣಿನ ಆಪರೇಶನ್ ಕೂಡಾ ನಡೆಸಿದ್ದಾರೆ. ಆದರೆ ಪದೇ ಪದೇ ಪಿಡ್ಸ್ ಸಮಸ್ಯೆ ಎದುರಾಗುತ್ತಿದ್ದು ವೈದ್ಯಕೀಯ ಚಿಕಿತ್ಸೆಗಾಗಿ ಹಣ ವ್ಯಯಿಸಿ ಕೈಯೆಲ್ಲಾ ಬರಿದಾಗಿ ದಿಕ್ಕೇ ತೋಚದಾಗಿದೆ. ಬಳಿಕ ಪಿಸಿಯೋಥೆರೆಪಿ ಎಲ್ಲಾ ವೈದ್ಯಕೀಯ ಚಿಕಿತ್ಸೆ ನಡೆಸಿ ದಂಪತಿಗಳಿಬ್ಬರು ಸೋತು ಹೋಗಿದ್ದರು. ವೈದ್ಯರು ಕೂಡಾ ಕೈಚೆಲ್ಲಿದ್ದಾರೆ. ಇದ್ದ ದೈವ ದೇವರುಗಳಿಗೆ ಕೈಮುಗಿದರೂ ಎಲ್ಲಾ ಚಿಕಿತ್ಸೆಯನ್ನು ನೀಡಿದರೂ ಕೂಡಾ ಏನೂ ಪ್ರಯೋಜವಾಗಿಲ್ಲ. ಮಗಳು ಎಲ್ಲರಂತೆ ಇರಲೂ ಸಾಧ್ಯವಿಲ್ಲ ಎಂದು ದಂಪತಿಗಳಿಬ್ಬರು ಬಹಳ ನೊಂದುಕೊಂಡರು. ಮಗಳ ಆಗುಹೋಗುಗಳನ್ನು
ನೋಡಿಕೊಳ್ಳುವ ಜವಬ್ದಾರಿಯನ್ನು ದಂಪತಿಗಳು ಮತ್ತು ಇನ್ನೊಂದು ಮಗಳು, ಹಾಗೂ ತುಳಸಿ ಅವರ ತಾಯಿ ವಹಿಸಿಕೊಂಡರು. 1ವರ್ಷದ ಹಿಂದೆ ತಮ್ಮ ಮೊದಲ ಮಗಳಿಗೆ ಹೇಗೋ ಕಷ್ಟಪಟ್ಟು ಸಾಲಮಾಡಿ ಮದುವೆ ಮಾಡಿದ ಬಳಿಕ ಐದು ತಿಂಗಳು ಕಳೆದ ಬಳಿಕ ಕುಟುಂಬಕ್ಕೆ ಮತ್ತೊಂದು ಆಘಾತ ಸಿಡಿಲು ಬಡಿದಂತಾಗಿದೆ.

ಕುಟುಂಬದ ಆಧಾರ ಸ್ತಂಭವಾಗಿದ್ದ ಹರೀಶ್ ಬಂಗೇರ ಅವರಿಗೆ ಮೆದುಳಿನಲ್ಲಿ ಕ್ಯಾನ್ಸರ್ ಗೆಡ್ಡೆ ವಿಚಾರ ತಿಳಿದು ಕುಟುಂಬಕ್ಕೆ ದಿಕ್ಕೇ ತೋಚದಾಗಿದೆ. ಹರೀಶ್ ಬಂಗೇರ ಅವರಿಗೆ ಇದ್ದಕ್ಕಿದ್ದ ಹಾಗೇ
ಯಾವಾಗಲೊಮ್ಮೆ ಕೈಕಾಲು ಮರಗಟ್ಟುವ ಅನುಭವವಾಗುತ್ತಿದ್ದು ಒಮ್ಮೆಕೆಲಸ ಮಾಡುತ್ತಿದ್ದಾಗ ಕೈ ಕಾಲ ಬಲ ಸ್ವಾಧೀನ ಕಳೆದುಕೊಂಡಾಗ ಕೆಲಸದವರೆಲ್ಲ ಸೇರಿ ಅವರನ್ನು ವೆನ್ಲಾಕ್‌ಆಸ್ಪತ್ರೆಗೆ ಸೇರಿಸಿದರು ಬಳಿಕ ಅತ್ತಾವರ ಆಸ್ಪತ್ರೆಗೆ ವರ್ಗಾಯಿಸಿದರು. ಆ ಬಳಿಕ ತಪಾಸಣೆ ಎಲ್ಲಾ ನಡೆಸಿದ ಬಳಿಕ ತಿಳಿದು ಬಂದದ್ದು ಮೆದುಳಿನಲ್ಲಿ ಗೆಡ್ಡೆ ಇರುವುದೆಂದು ತದನಂತರ ಗೆಡ್ಡೆಯನ್ನು ಪರೀಕ್ಷಿಸಿದಾಗ ಕ್ಯಾನ್ಸರ್ ಗೆಡ್ಡೆ ಇರುವುದು ತಿಳಿದು ಬಂತು. ಆ ಬಳಿಕ ನ್ಯೂರೋ ಸರ್ಜರಿ ಮಾಡಿದ ಬಳಿಕ ಗೆಡ್ಡೆಯನ್ನು ಆಪರೇಷನ್ ಮಾಡಿ ತೆಗೆದು ಇದೀಗ ಕೆಲಸಕ್ಕೂ ಹೋಗಲಾರದೇ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯ ಖರ್ಚು ಎಂದು ಸರಿಸುಮಾರು 2 ಲಕ್ಷ ಖರ್ಚು ವೆಚ್ಚವಾಗಿದ್ದು ಸಾಲ ಸೋಲ ಮಾಡಿ ಹಣಕಟ್ಟಿ ಹೇಗೋ ಆಸ್ಪತ್ರೆಯಿಂದ ಬಿಡುಗಡೆಯಾಗಿ ಇದೀಗ ಮನೆಯಲ್ಲಿಯೇ ಮಗಳೊಂದಿಗೆಯೇ ಇದ್ದು ದಿನಾಲೂ ನೋವಿನ ಬೇನೆಯಲ್ಲಿಯೇ ಬದುಕುತ್ತಿದ್ದಾರೆ. ಅಲ್ಲದೇ ಎಡಕಾಲು ಎಡಗೈ ಕೂಡಾ ಸ್ಪರ್ಶದ ಅನುಭವವನ್ನು ಕಳೆದುಕೊಂಡಿದೆ. ರೆಡಿಯೋ ಥೆರೆಪಿ, ಪಿಸಿಯೋಥೆರಿಪೀ ಎಂದು ಎಲ್ಲಾ ವೈದ್ಯಕೀಯ ಚಿಕಿತ್ಸೆ ಮಾಡಲಾಗಿದೆ. ಆದರೆ ಇದೀಗ ಜೀವನ ನಿರ್ವಹಣೆಗಾಗಿ ಪತ್ನಿ ತುಳಸಿ ಅವರ ಮನೆಗೆಲಸಕ್ಕೆ ತೆರಳಿ ಮಗಳನ್ನು ಪತ್ನಿಯನ್ನು ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ಪತಿ, ಮಗಳ ಪರಿಸ್ಥಿತಿಯನ್ನು ನೋಡಿ ಅಳುತ್ತಾ ದಿನಕಳೆಯುವಂತಾಗಿದೆ.

ಪ್ರಸ್ತುತ ಹರೀಶ್ ಬಂಗೇರ ಹಾಗೂ ಮಗಳು ದಿವ್ಯಾ ಮನೆಯಲ್ಲಿಯೇ ಇದ್ದು ಮನೆಯ ಜವಬ್ದಾರಿಯನ್ನು ಪತ್ನಿ ತುಳಸಿ ಅವರೇ ನೋಡುಕೊಳ್ಳುತ್ತಿದ್ದು ಮನೆ ಬಾಡಿಗೆ, ಮನೆಯ ಖರ್ಚು ವೈದ್ಯಕೀಯ ಖರ್ಚು ಅಂತ ತಿಂಗಳಿಗೆ ಸರಿಸುಮಾರು 30,000ಸಾವಿರ ಬೇಕಾಗುತ್ತದೆ. ಆದರೂ ಕುಟುಂಬದ ಪರಿಸ್ಥಿತಿಯನ್ನು ಮನಗಂಡು ಸ್ಥಳೀಯರಾದ ಸುನಿಲ್ ಕುಮಾರ್ ಅವರು ತಮ್ಮಿಂದಾದ ಸಹಾಯ ಹಸ್ತವನ್ನು ನೀಡುತ್ತಿದ್ದಾರೆ. ಆದರೆ ಕುಟುಂಬದ ಆಧಾರ ಸ್ತಂಭ ಹರೀಶ್ ಬಂಗೇರ ಅವರು ಕೆಲಸ ನಿರ್ವಹಿಸಿ ಕುಟುಂಬದ ನಿರ್ವಹಣೆಯನ್ನು ನಡೆಸಲು ನೆರವಿನ ಹಸ್ತ ಚಾಚುತ್ತಿದ್ದಾರೆ. ಸಹೃದಯರು ಇವರ ಕಷ್ಟಕ್ಕೆ ಸ್ಪಂದಿಸಿ ಸಹಾಯ ಮಾಡುವರೆಂಬ ಭರವಸೆಯಲ್ಲಿ ದಿನದೂಡುತ್ತಿದ್ದಾರೆ.

ಸಹೃದಯ ದಾನಿಗಳು ನೆರವು ಮಾಡಲು:

Ac Holder Name: Thulasini

AC.No: 520291000011245

IFSC code: CORP0003140

MICR Code: 575017050

Bank: Corporation Bank.

Branch: Kuluru- Mangalore

ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ
ಹರೀಶ್ ಬಂಗೇರ

Mob: 8971840916

Related posts

Leave a Reply

Your email address will not be published. Required fields are marked *