Header Ads
Breaking News

ನ್ಯಾಷನಲ್ ಕನ್ಸ್ಯೂಮರ್ ಫೇರ್ ‘ಪುತ್ತೂರು ಉತ್ಸವ’ಕ್ಕೆ ಚಾಲನೆ

‘ನ್ಯಾಷನಲ್ ಕನ್ಸ್ಯೂಮರ್ ಫೇರ್’ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದ ಗದ್ದೆಯಲ್ಲಿ ಈ ಬಾರಿ ದ್ವಿತೀಯ ವರ್ಷ ಆಯೋಜನೆಗೊಂಡಿರುವ ಜನಾಕರ್ಷಣೆಯ ಮೆಗಾ ಮನರಂಜನಾ ಮೇಳ ಮತ್ತು ವಸ್ತು ಪ್ರದರ್ಶನ ‘ಪುತ್ತೂರು ಉತ್ಸವ’ಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು.

ದೀಪ ಬೆಳಗಿಸಿ ಉತ್ಸವವನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ದಸರಾ ನಾಡಹಬ್ಬ ಇಡೀ ನಾಡಿಗೇ ಸಂಭ್ರಮದ ಸಮಯ. ಇದೇ ಸಂದರ್ಭದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವರ ಎದುರು ಆಯೋಜಿಸಿರುವ ಪುತ್ತೂರು ಉತ್ಸವ ಈ ಭಾಗದ ಜನತೆಗೆ ಮನಸೋಲ್ಲಾಸದ ಜತೆಗೆ ಹರ್ಷೋತ್ಸವವಾಗಿ ಪರಿಣಮಿಸಲಿ ಎಂದು ಶುಭಹಾರೈಸಿದರು.

ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಾರ್ಯನಿರ್ವಹಣಾದಿಕಾರಿ ನವೀನ್ ಭಂಡಾರಿ, ಆಡಳಿತಾದಿಕಾರಿ ವಿಷ್ಣುಪ್ರಸಾದ್, ಪ್ರಮುಖರಾದ ಸವಣೂರು ಕೆ. ಸೀತಾರಾಮ ರೈ, ಕರುಣಾಕರ ರೈ, ಕೋಲ್ಪೆ ರಾಜಾರಾಮ ಶೆಟ್ಟಿ, ಬೂಡಿಯಾರು ರಾಧಾಕೃಷ್ಣ ರೈ, ಚಂದ್ರಹಾಸ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ರಾಜೇಶ್ ಬನ್ನೂರು ಮೊದಲಾದವರು ಪಾಲ್ಗೊಂಡರು.

ಎನ್‌ಸಿಎಫ್‌ನ ಆಡಳಿತ ನಿರ್ದೇಶಕ ಗೌತಮ್, ಉತ್ಸವದ ಆಯೋಜಕ ರಾಮದಾಸ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಉತ್ಸವದ ಆಯೋಜಕ ರಾಮದಾಸ್ ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಯಶಸ್ಸಿಯಾಗಿ ಎರಡನೇ ಬಾರಿಗೆ ಮೆಗಾ ಮೇಳವನ್ನು ಆಯೋಜಿಸಿದೆ. ವಿವಿಧ ಕಂಪೆನಿಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಮನರಂಜನಾ ಕ್ರೀಡೆಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. ಆಗಮಿಸುವ ಎಲ್ಲಾ ಜನತೆಗೆ ನಿಶ್ಚಿತ ಉಲ್ಲಾಸವನ್ನು ನೀಡಲಿದೆ ಎಂದು ಸಹಕಾರ ಕೋರಿದರು.

ಮೊದಲ ದಿನವೇ ಜನಸಂದಣಿ
ಆರಂಭದ ದಿನವೇ ಪುತ್ತೂರು ವೀಕ್ಷಣಾಸಕ್ತರ ಸಂಖ್ಯೆ ಕಂಡುಬಂತು. ವಿಶೇಷವಾಗಿ ಸೆಲೀ ಗ್ಯಾಲರಿ ಫೋಟೋ ತೆಗೆದುಕೊಳ್ಳುವ ದೃಶ್ಯ, ನೈಜತೆಯಿಂದ ಕೂಡಿದ ಫೋಟೋದಂತಿರುತ್ತವೆ. ಪ್ರಾಣಿಗಳನ್ನು ಹೋಲುವ ಯಾಂತ್ರೀಕೃತ ಮೃಗಗಳನ್ನು ವೀಕ್ಷಸುವ ದೃಶ್ಯ ಕಂಡುಬಂತು. ಆಕರ್ಷಕ ಚೆಂಡೆ ಮೇಳ ಉತ್ಸವದ ಚಾಲನೆಗೆ ಮೆರುಗು ನೀಡಿತ್ತು.

Related posts

Leave a Reply

Your email address will not be published. Required fields are marked *