Header Ads
Header Ads
Breaking News

ನ.30ರಂದು 7ನೇ ವರ್ಷದ ಸತ್ಯಧರ್ಮ ಜೋಡುಕರೆ ಬಯಲು ಕಂಬಳ

ಬಂಟ್ವಾಳ: ಕಕ್ಯಪದವು ಉಳಿಗ್ರಾಮದ ಶ್ರೀರಾಮಂಜನೇಯ ಗೆಳೆಯರ ಬಳಗ ಮೈರ ಇದರ ಆಶ್ರಯದಲ್ಲಿ ವೇದಮೂರ್ತಿ ಶ್ರೀ ರಾಘವೇಂದ್ರ ಭಟ್ ಕೊಡಂಬೆಟ್ಟು ಕಾರಿಂಜ ಇವರ ಶುಭಾಶೀರ್ವಾದದೊಂದಿಗೆ ಕಕ್ಯಪದವಿನ ಮೈರಾ-ಬರ್ಜೆಜಾಲು ಎಂಬಲ್ಲಿ 7 ನೇ ವರ್ಷದ ಸತ್ಯಧರ್ಮ ಜೋಡುಕರೆ ಬಯಲು ಕಂಬಳ ನ.30 ರಂದು ಶನಿವಾರ ನಡೆಯಲಿದೆ. 

ಪ್ರಗತಿಪರ ಕೃಷಿಕ ರವೀಂದ್ರ ಅಡಪ ದಡಿಂಬಿಲ ಕಂಬಳ ಉದ್ಘಾಟಿಸುವರು, ಕಂಬಳ ಕೋಣದ ಯಜಮಾನ ಸುರೇಶ್‍ಶೆಟ್ಟಿ ಮೀಯಾರು ಹಾಗೂ ಸೇವಾ ಸಹಕಾರಿ ಸಂಘ ಉಳಿ ಅಧ್ಯಕ್ಷ ಚೆನ್ನಪ್ಪ ಸಾಲ್ಯಾನ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು, ದಂತ ವೈದ್ಯ ಡಾ| ರಾಜಾರಾಮ್ ಕೋಮಗುಜೆ ಸಭಾಧ್ಯಕ್ಷತೆ ವಹಿಸುವರು ಎಂದು ಕಂಬಳ ಸಮಿತಿ ಪ್ರಧಾನಕಾರ್ಯದರ್ಶಿ ರಂಜಿತ್ ಮೈರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಅಶ್ವತ್ ಹೆಗ್ಡೆ ಬಳಂಜ ಅವರಿಗೆ ತುಳುನಾಡ ಮುತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ವಸಂತ ಕಕ್ಯಪದವು, ಸತ್ಯ ಧರ್ಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ರವಿ ಕಕ್ಯಪದವು, ಮಣಿಕಂಠ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *