Header Ads
Header Ads
Breaking News

ಪಡುಬಿದ್ರಿಯಲ್ಲಿ ಕೃತಕ ನೆರೆನೀರಿಗೆ ಬಿದ್ದ ಬಾಲಕಿಯ ಶವ ಪತ್ತೆ!

ನಿನ್ನೆ ದಿನ ಶಾಲೆಯಿಂದ ಅಕ್ಕಳೊಂದಿಗೆ ಮನೆಗೆ ಮರಳುತ್ತಿದ್ದ ಬಾಲಕಿ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನ ಸೆಳೆತಕ್ಕೆ ಸಿಕ್ಕಿ ನೀರುಪಾಲಾಗಿದ್ದು, ಬುಧವಾರ ಮುಂಜಾನೆ ಸಾರ್ವಜನಿಕ ಯುವಕರೇ ನೀರಿಗಿಳಿದು ಹುಡುಕಾಟ ನಡೆಸಿ ಬಾಲಕಿಯ ಶವವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಮುಂಜಾನೆ ಇದೇ ರಸ್ತೆಯಾಗಿ ಸಹೋದರಿಯರಿಬ್ಬರು ಬೇರೆ ಬೇರೆ ಸೈಕಲೇರಿ ಹೆದ್ದಾರಿವರಗೆ ಬಂದು, ಹೆದ್ದಾರಿ ಸಮೀಪದ ಮನೆಯೊಂದರ ಅಂಗಳದಲ್ಲಿ ಸೈಕಲಿಟ್ಟು ಅಟೋ ರಿಕ್ಷಾದ ಮೂಲಕ ಪಡುಬಿದ್ರಿಯ ಎಸ್.ವಿ,ಬಿ.ಪಿ. ಶಾಲೆ ಸೇರಿದ್ದರು. ಎಡೆಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲಾಢಳಿತದ ಸೂಚನೆಯಂತೆ ಶಾಲೆಗೆ ಸುಮಾರು ಮೂರು ಗಂಟೆಯ ಸುಮಾರಿಗೆ ರಜೆ ಸಾರಲಾಗಿತ್ತು. 

ಮತ್ತೆ ಅಟೋ ರಿಕ್ಷಾವೇರಿ ಬಂದ ಸಹೋದರಿಯರಾದ ನಿಧಿ ಹಾಗೂ ನಿಶಾ ಮತ್ತೆ ಸೈಕಲೇರಿ ಅದೇ ಒಳರಸ್ತೆಯಾಗಿ ನೀರಿನ ಸೆಳೆತವನ್ನು ಗಮನಿಸಿದೆ ಮುಂದೋಗಿದ್ದಾರೆ. ದುರಾದೃಷ್ಟವೋ ಎಂಬಂತ್ತೆ ಇಬ್ಬರ ಸೈಕಲ್‌ಗಳು ನೀರಿನ ಸೆಳೆತಕ್ಕೆ ಗದ್ದೆಗೆ ಉರುಳಿದೆ. ಬ್ಯಾಗ್ ಸಹಿತ ಮಳೆಯಿಂದ ರಕ್ಷಣೆಗಾಗಿ ಜಾಕೇಟ್ ಹಾಕಲಾದ ನಿಧಿ ಮುಳುಗಿದವಳು ಬ್ಯಾಗ್ ಬಾರ ಹಾಗೂ ಬಿಗಿಯಾದ ಜಾಕೇಟ್ ಕೈಯಾಡಿಸಲೂ ಅವಕಾಶ ನೀಡದಂತ್ತಿದ್ದರಿಂದ ಕೆಲ ಹೊತ್ತಲ್ಲೇ ಇಹಲೋಕ ತ್ಯಜಿಸಿದ್ದಾಳೆ.ಘಟನೆ ನಡೆದು ಅರ್ಧ ಗಂಟೆಯಲ್ಲಿ ಪೊಲೀಸರು ಬಂದು ಹೋಗಿದ್ದರೂ, ಬಾಲಕಿಯ ಪತ್ತೆಗಾಗಿ ತುರ್ತಾಗಿ ಕಾರ್ಯಚರಿಸ ಬೇಕಾಗಿದ್ದ ಅಗ್ನಿಶಾಮಕ ದಳ ನಾಲ್ಕು ಗಂಟೆ ವಿಳಂಬವಾಗಿ ಆಗಮಿಸಿದ್ದರೂ ಅವರಲ್ಲಿ ಯಾವುದೇ ಉಪಯುಕ್ತ ಸಲಕರಣೆಗಳು ಇಲ್ಲದ ಕಾರಣ, ಮತ್ತಷ್ಟು ವಿಳಂಬವಾಗಿದ್ದು ಆ ಬಳಿ ಸಾರ್ವಜನಿಕರ ಸಹಕಾರದಿಂದ ನೀರಿಗಿಳಿದ ತಂಡ ಗರುಡ ಪಾತಾಳ ಸಲಕರಣೆ ಮೂಲಕ ಆ ಬಾಲಕಿಯರ ಎರಡು ಸೈಕಲ್‌ಗಳನಷ್ಟೇ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದು, ಆ ಬಳಿಕ ಕತ್ತಲೆಯಾಗಿದ್ದರಿಂದ ಕಾರ್ಯಚರಣೆಗೆ ಬ್ರೇಕ್ ನೀಡಲಾಯಿತು. ಮಾಹಿತಿಯ ಕೊರತೆಯಿಂದ ಘಟನೆ ನಡೆದ ದಿನ ಕಾರ್ಯಾಚರಣೆಗೆ ವಿಳಂಬ ಆಗಿದೆ ಎನ್ನುವ ಜಿಲ್ಲಾಢಳಿತ, ಮರುದಿನ ಏಕೆ ವಿಳಂಬ ಮಾಡಿದೆ ಎಂಬುದು ಸಾರ್ವಜನಿಕರ ಪ್ರಶ್ನೆ. ಮುಂಜಾನೆ ಆರು ಗಂಟೆಯ ಸುಮಾರಿಗೆ ಘಟನಾ ಸ್ಥಳದಲ್ಲಿ ಸಾರ್ವಜನಿಕರು ಸೇರ ತೊಡಗಿದ್ದು, ಜಿಲ್ಲಾಢಳಿತದ ಎನ್.ಡಿ.ಆರ್.ಎಫ್. (ರಾಷ್ಟ್ರೀಯ ವಿಪತ್ತು ನಿರ್ವಾಹನ ದಳ) ಕ್ಕಾಗಿ ಕಾಯುತ್ತಿದ್ದರಾದರೂ ಅವರ ಪತ್ತೆಯಾಗದ ಕಾರಣ ೬-೩೦ರ ಸುಮಾರಿಗೆ ಸುಮಾರಿಗೆ ೨೦ ಯುವಕರ ತಂಡ ಸ್ವತಃ ಕಾರ್ಯಚರಣೆಗಿಳಿದಿದ್ದಾರೆ. ಎಂಟರ ಸುಮಾರಿಗೆ ಜಿಲ್ಲಾಢಳಿತ ನಿರ್ಧೇಶನದ ತಂಡ ಬಂದು ಕಾರ್ಯಚರಣೆಗೆ ಇಳಿಯುತ್ತಿದಂತೆ ಯುವಕರು ಶವಪತ್ತೆ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ.ಶವ ದೊರಕಿದರೂ ಆಸ್ಪತ್ರೆಗೆ ಸಾಗಿಸಲು ಆಂಬುಲೈನ್ಸ್ ಇಲ್ಲದ ಕಾರಣ ಪೊಲೀಸ್ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಲಾಯಿತು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply