Header Ads
Breaking News

ಪಡುಬಿದ್ರಿ ಸೇತುವೆ ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ..

ಕರ್ತವ್ಯ ಮರೆತ ಅಧಿಕಾರಿಗಳು.. ಜವಾಬ್ದಾರಿ ಮರೆತಜನಪ್ರತಿನಿಧಿಗಳು.. ಇವರ ಮಧ್ಯೆ ಸಮಸ್ಯೆಯ ಸುಳಿಗೆ ಸಿಲುಕಿದ ಜನ ಸಾಮಾನ್ಯರು..ಇದು ಎಲ್ಲಿ ಅಂತೀರ..ಬೇರೆಲ್ಲೂ ಅಲ್ಲ ಪಡುಬಿದ್ರಿಯ ಸೇತುವೆ ಬಳಿ ಕಳೆದ ಹತ್ತುವರ್ಷಗಳಿಂದಲೂ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಜನ.

ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭಗೊಂಡು ದಶಕಗಳೇ ಕಳೆದಿದೆ, ಗುತ್ತಿಗೆ ಕಂಪನಿಗೆ ಟೆಂಡರ್ ದಾಖಲೆಯಲ್ಲಿ ನೀಡಿದ ನಿಗದಿತ ಸಮಯ ಯಾವತ್ತೂ ಕಳೆದು ಹೋಗಿದೆ, ಆದರೂ ಈ ವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಅದರ ಪರಿಣಾಮವೇ ಈ ಹಿಂದೆ ಪಡುಬಿದ್ರಿ-ಎರ್ಮಾಳು ಗಡಿಭಾಗ ಸೇತುವೆ ಬಳಿ ಕೃತಕ ನೆರೆಯ ಪರಿಣಾಮ ಹೆದ್ದಾರಿ ಸಂಪರ್ಕವೇ ಕಡಿತಗೊಂಡು ಜನ ಅನುಭವಿಸಿದ ಸಮಸ್ಯೆ ಇದೀಗೂ ಜೀವಂತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹೆದ್ದಾರಿಯ ನಿತ್ಯ ಸಂಚಾರಿ ವಾಮನ್ ಎಚ್, ಚತುಷ್ಪಥ ಕಾಮಗಾರಿ ವಿಳಂಬ ಮಾಡಿದ ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವೆ, ಹೆದ್ದಾರಿ ಸಂಪೂರ್ಣಗೊಳಿಸದ ಹಿನ್ನಲೆಯಲ್ಲಿ ಹೆಜಮಾಡಿ ಹಾಗೂ ಸುರತ್ಕಲ್ ಟೋಲ್‍ಗೇಟ್ ಮುಚ್ಚಿಸುವೆ ಎಂಬೆಲ್ಲಾ ಮಾದ್ಯಮಗಳಿಗೆ ಹೇಳಿಕೆ ನೀಡಿದ ಈ ಭಾಗದ ಸಂಸದೆ ಶೋಭಾ ಕರಂದ್ಲಾಜೆಯಾಗಲೀ ಸ್ಥಳೀಯ ಶಾಸಕ ಲಾಲಾಜಿ ಮೆಂಡನ್ ಆಗಲೀ ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದರಿಂದ ಅಧಿಕಾರಿಗಳು ತಮ್ಮ ಕರ್ತವ್ಯ ಮರೆಯುವಂತ್ತಾಗಿದೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *