Header Ads
Breaking News

ಪಾತ್‌ವೇ ಎಂಟರ್‌ಪ್ರೈಸಸ್, ಮರ್ಸಿ ಲೇಡಿಸ್ ಸೆಲೂನ್ ಸಹಯೋಗದಲ್ಲಿ ಮಿಸೆಸ್ ಇಂಡಿಯಾ ಮಿಸಸ್ ಮಂಗಳೂರು ಸ್ಪರ್ಧೆ

ಪ್ರತಿಭಾ ಸೌನ್ಕಿಮಟ್ ಇನಿಶಿಯೇಟಿವ್, ಪಾತ್‌ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಲೇಡಿಸ್ ಸೆಲೂನ್ ಸಹಯೋಗದಲ್ಲಿ ಮಿಸೆಸ್ ಇಂಡಿಯಾ ಮಿಸಸ್ ಮಂಗಳೂರು ಸ್ಪರ್ಧೆ ನಗರದ ಮೋತಿ ಮಹಲ್ ಹೋಟೆಲ್‌ನ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ದಿನವಾದ ಮಾರ್ಚ್ 8ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಪಾತ್‌ವೇ ಎಂಟರ್‌ಪ್ರೈಸಸ್ ಮಾಲಕ ದೀಪಕ್ ಗಂಗೂಲಿ ಹೇಳಿದರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಇದರ ಪೂರ್ವಭಾವಿಯಾಗಿ ಆಡಿಶನ್‌ಗಳು ಉತ್ತರ ಕನ್ನಡದಿಂದ ಕಾಸರಗೋಡಿನವರೆಗೂ ನಡೆಯಲಿದೆ. ಜನವರಿ ಅಂತ್ಯದಿಂದ ಈ ಪ್ರಕ್ರಿಯೆ ಆರಂಭವಾಗಲಿದ್ದು ಮೊದಲನೆಯದಾಗಿ ಕಾರವಾರ, ನಂತರ ಉಡುಪಿ, ಕುಂದಾಪುರ, ಮಂಗಳೂರು, ಕಾರ್ಕಳ ಮೂಡುಬಿದರೆ, ಕಳಸ, ಕಾಸರಗೋಡಿನಲ್ಲಿ ನಡೆಯಲಿದ್ದು, ಕೊನೆಯದಾಗಿ ಪುತ್ತೂರಿನಲ್ಲಿ ಆಡಿಶನ್ ನಡೆಯಲಿದೆ.ಇದರಲ್ಲಿ ಮದುವೆಯಾದ ಮಹಿಳೆಯರು ಸೂಕ್ತ ಅರ್ಹತೆಯೊಂದಿಗೆ ಭಾಗವಹಿಸಲಬಹುದು. ದೇಶದ ನಾನಾ ಭಾಗದ 15ಕ್ಕೂ ಅಧಿಕ ನುರಿತ ತೀರ್ಪುಗಾರರು ಸ್ಪರ್ಧಾಕೂಟದಲ್ಲಿ ಭಾಗವಹಿಸಲಿದ್ದಾರೆ. ಆಡಿಶನ್‌ನಲ್ಲಿ ಆಯ್ಕೆಯಾದವರಿಗೆ ಹಲವಾರು ಫ್ಯಾಶನ್ ಕುರಿತ ತರಬೇತಿಗಳನ್ನು ತರಬೇತುದಾರರ ಮೂಲಕ ನೀಡಲಾಗುತ್ತದೆ ಎಂದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮರ್ಸಿ ಲೇಡಿಸ್ ಸೆಲೂನ್‌ನ ಮಾಲಕಿ ಮರ್ಸಿ ವೀಣಾ ಡಿಸೋಜಾ, ಕ್ರೌನ್ ವಿಜೇತರಾದ ಜೂಲಿಯಟ್, ಶಿವಕನ್ಯಾ, ಸಂಘಟಕಿ ಅನಿಶಾ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *