Header Ads
Header Ads
Breaking News

ಪಾದೂರು ಕಚ್ಚಾತೈಲ ವಿಸ್ತರಣಾ ಘಟಕದ ವಿರುದ್ಧ ಜನಾಕ್ರೋಶ : ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಪ್ರತಿಭಟನೆ

ಪಾದೂರು ಕಚ್ಚಾತೈಲ ವಿಸ್ತಾರಣಾ ಕಾರ್ಯವನ್ನು ಜನರನ್ನು ಕತ್ತಲಲ್ಲಿಟ್ಟು ನಡೆಸಲಾಗುತ್ತಿದೆ. ಈ ಘಟಕದ ಸಮಸ್ಯೆಯಿಂದಾಗಿ ಜನರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದರ ಹೊರತಾಗಿಯೂ ಇದನ್ನು ವಿಸ್ತರಿಸುವುದರ ವಿರುದ್ಧ ನೂರಾರು ಮಂದಿ ಸಂತ್ರಸ್ಥರು ಸಹಿತ ಸಾರ್ವಜನಿಕರನ್ನು ಸೇರಿಸಿಕೊಂಡು ಬ್ರಹತ್ ಪ್ರತಿಭಟನಾ ಜಾಥಕ್ಕೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಚಾಲನೆ ನೀಡಿದ್ದಾರೆ. ಆ ಬಳಿಕ ಮಾತನಾಡಿದ ಅವರು, ಕಾಪು ತಾಲೂಕಿನ ಪಾದೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿದ್ದ ಕಚ್ಚಾ ತೈಲ ಸಂಗ್ರಹಣಾ ಘಟಕ (ಐಎಸ್ಪಿಆರ್‌ಎಲ್) 2ನೇ ಹಂತದ ವಿಸ್ತರಣಾ ಕಾರ್ಯ ಸಂಸ್ಥೆಯು ಕೈಗೊಂಡಿದ್ದು ಇದರ ಪರಿಣಾಮದಿಂದ ಆಸುಪಾಸಿನ ಎಲ್ಲಾ ಮನೆಗಳಿಗೆ ಹಾನಿ ಹಾಗೂ ಹಲವಾರು ಕುಟುಂಬಗಳು ನಿರ್ವಸಿತರಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದರು, (ಬೈಟ್)ಬಳಿಕ ಮಾತನಾಡಿದ ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಇದೊಂದು ಜನೋಪಯೋಗಿ ಪ್ರಾಜೆಕ್ಟ್ ಎಂದು ಜನರು ತಮ್ಮ ಜಮೀನುಗಳನ್ನು ಸರಕಾರಕ್ಕೆ ಬಿಟ್ಟುಕೊಟ್ಟು ಜುಜುಬಿ ಪರಿಹಾರ ಪಡೆದು ಕೈ ಸುಟ್ಟುಕೊಂಡಿದ್ದಾರೆ. ಎರಡನೇ ಹಂತದಲ್ಲಿ ಊರಿನ ಜನರು ಊರನ್ನೇ ಬಿಡುವ ಪರಿಸ್ಥತಿ ಉದ್ಭವಿಸಬಹುದು. ಕೇಂದ್ರಸರಕಾರ ಕೆಲವೇ ಉದ್ಯಮಿಗಳ ಪರವಾಗಿದ್ದು ಸ್ಥಳೀಯ ಜನರನ್ನು ಕತ್ತಲಲ್ಲಿಟ್ಟು ಮೋಸ ಮಾಡುತ್ತಿದೆ ಎಂದು ಕೆಂಡ ಕಾರಿದರು.(ಬೈಟ್)

Related posts

Leave a Reply

Your email address will not be published. Required fields are marked *