Header Ads
Breaking News

ಪುತ್ತೂರಿನಲ್ಲಿ ಪಿಎಫ್‍ಐ ವತಿಯಿಂದ ಯುಪಿಎ ನಡೆಸುತ್ತಿರುವ ಮಾನಹಾನಿ ಅಭಿಯಾನದ ವಿರುದ್ಧ ಪ್ರತಿಭಟನೆ

ಪುತ್ತೂರು: ಭೇಟಿ ಹಠಾವೋ ಮಂತ್ರ ಜಪಿಸುತ್ತಿರುವ ಯೋಗಿ ಆದಿತ್ಯನಾಥ ಯುಪಿ ಸರಕಾರ ಹೆಣ್ಣು ಮಕ್ಕಳನ್ನು ಅತ್ಯಂತ ಭಯಾನಕವಾಗಿ ನಡೆಸಿಕೊಳ್ಳುವ ಮೂಲಕ ಇಡೀ ಜಗತ್ತಿನ ಮುಂದೆ ಬೆತ್ತಲಾಗಿದೆ ಎಂದು ಪಿಎಫ್‍ಐ ರಾಜ್ಯ ನಾಯಕ ಶಾಫಿ ಬೆಳ್ಳಾರೆ ಹೇಳಿದರು.

ಅವರು ಪುತ್ತೂರಿನ ಮಿನಿ ವಿಧಾನಸೌಧದ ಎದುರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ನಡೆದ ಯುಪಿಎ ಸರಕಾರ ನಡೆಸುತ್ತಿರುವ ಮಾನಹಾನಿ ಅಭಿಯಾನದ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ಪಿಎಫ್‍ಐ ತಾಲೂಕು ಅಧ್ಯಕ್ಷ ಜಾಬಿರ್ ಅರಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವ ಸಮೂಹ ತಲೆತಗ್ಗಿಸುವ ಪ್ರಕರಣನ್ನು ಮುಚ್ಚಿಹಾಕಿ ಏನೂ ನಡೆದಿಲ್ಲ ಎಂದು ವರ್ತಿಸುವ ಮೂಲಕ ಆರೋಪಿಗಳ ಪರ ಬೆಂಬಲ, ಸಮರ್ಥನೆ ಮಾಡಿಕೊಳ್ಳುವ ಸರಕಾರ ಇದ್ದರೆ ಅದು ಯೋಗಿ ಆದಿತ್ಯನಾಥ ಸರಕಾರ ಎಂದು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಲತೀಫ್, ಅಬ್ದುಲ್ ಕಲಾಂ ಸುಳ್ಯ, ಪಿಎಫೈನ ಉಮ್ಮರ್ ಕೂರ್ನಡ್ಕ, ಎಸ್‍ಡಿಪಿಐನ ಸಿದ್ದೀಕ್ ಪುತ್ತೂರು ಮೊದಲಾದವರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *