Header Ads
Header Ads
Breaking News

ಪುತ್ತೂರು ಅರಣ್ಯ ಇಲಾಖೆಯಿಂದ ಮರ ತೆರವು ಕಾರ್ಯ

ಮಳೆ ಗಾಳಿಯ ಅಬ್ಬರಕ್ಕೆ ಬುಡ ಸಮೇತ ವಾಲಿ ನಿಂತ ಎರಡು ಬೃಹತ್ ಮರಗಳಿಗೆ ಅರಣ್ಯ ಇಲಾಖೆ ಮುಕ್ತಿ ನೀಡಿದೆ. ಈ ಬಗ್ಗೆ ಕಳೆದೆರಡು ದಿನದ ಹಿಂದೆ ಸಮಗ್ರ ವರದಿಯನ್ನು v4   ನ್ಯೂಸ್ ಬಿತ್ತರಿಸಿತ್ತು.ವರದಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಮರ ತೆರವು ಕಾರ್ಯ ಮಾಡಿದ್ದಾರೆ.


ಪುತ್ತೂರಿನ ಉಪನೋಂದಣಿ ಕಚೇರಿಯ ಆವರಣದಲ್ಲಿರುವ ಬೃಹತ್‌ಗಾತ್ರದ ಮೇಫ್ಲವರ್ ಮರವೊಂದು ಶುಕ್ರವಾರ ರಾತ್ರಿ ಸುರಿದ ಮಳೆ-ಗಾಳಿಯ ವೇಳೆ ಬುಡಸಮೇತ ಎದ್ದು ದಾರಿ ಬದಿಗೆ ವಾಲಿ ನಿಂತಿತ್ತು. ಪುತ್ತೂರು ಪ್ರೆಸ್‌ಕ್ಲಬ್ ಕಟ್ಟಡಕ್ಕೆ ತಾಗಿ ನಿಂತಿರುವ ಇನ್ನೊಂದು ಮರದ ಆಧಾರದಲ್ಲಿ ಬುಡಸಮೇತ ವಾಲಿ ನಿಂತು ವಾರ್ತಾ ಇಲಾಖೆಯ ಕಟ್ಟಡ ಹಾಗೂ ಇಲ್ಲಿ ಸದಾ ಕಾಲ ಉಪನೋಂದಣಿ ಕಚೇರಿಗೆ ಬರುವ ಜನತೆಯ ಪಾಲಿಗೆ ಆತಂಕ ಉಂಟು ಮಾಡಿತ್ತು.ಇದೀಗ ಅರಣ್ಯ ಇಲಾಖೆ ವಾರ್ತಾಭವನಕ್ಕೆ ತಾಗಿ ನಿಂತ ಮರ ಹಾಗೂ ಗಾಳಿಯ ಅಬ್ಬರಕ್ಕೆ ವಾಲಿನಿಂತ ಮರಗಳನ್ನು ತೆರವುಗೊಳಿಸಿ ಕಟ್ಟಡದ ಅಪಾಯಕ್ಕೆ ಹಾಗೂ ಜನತೆಯ ಆತಂಕಕ್ಕೆ ಕೊನೆ ಹಾಡಿದೆ. ಶುಕ್ರವಾರ ರಾತ್ರಿ ಮಳೆ ಗಾಳಿಯ ಅಬ್ಬರಕ್ಕೆ ಈ ಮರ ವಾಲಿನಿಂತಿದ್ದು, ತಕ್ಷಣವೇ ಮರವನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ ಅರಣ್ಯ ಇಲಾಖೆ ಹಾಗೂ ನಗರಸಭೆಯ ನಡುವಿನ ಜವಾಬ್ದಾರಿ ಸಮಸ್ಯೆಯಿಂದ ಮರ ತೆರವಿಗೆ ತಡವಾಗಿತ್ತು. ಈ ಬಗ್ಗೆ ವ೪ ನ್ಯೂಸ್‌ನಲ್ಲಿ ವರದಿಯನ್ನು ಬಿತ್ತರಿಸಿದ್ದೇವು. ವರದಿ ಸ್ಪಂದಿಸಿದ ಅರಣ್ಯ ಇಲಾಖೆಅಪಾಯಕಾರಿ ಸ್ಥಿತಿಯಲ್ಲಿದ್ದ ಈ ಮರಗಳನ್ನು ತೆರವುಗೊಳಿಸುವಲ್ಲಿ ಯಶ್ವಸಿಯಾಗಿದೆ.

Related posts

Leave a Reply