Header Ads
Header Ads
Breaking News

ಪೂಜಾರಿಯವರ ಬಗ್ಗೆ ಅವಾಚ್ಯ ಶಬ್ಧ, ರೈ ವಿರುದ್ಧ ಬಿಲ್ಲವ ಸಮಾಜ ಸೇವಾ ಸಂಘ ಖಂಡನಾ ನಿರ್ಣಯ

ಬಂಟ್ವಾಳ: ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಬಗ್ಗೆ ಅವಾಚ್ಯ ಶಬ್ಧ ಬಳಸಿ ಮಾತನಾ ಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ವಿರುದ್ಧ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಖಂಡನಾ ನಿರ್ಣಯ ಕೈಗೊಂಡಿದೆ.
ಬಿ.ಸಿ.ರೋಡಿನ ಗಾಣದಪಡ್ಪು ನಾರಾಯಣ ಗುರು ಸಭಾಭವನದಲ್ಲಿ ನಿನ್ನೆ ನಡೆದ ಬಿಲ್ಲವ ಸಮಾಜ ಸೇವಾ ಸಂಘದ ಸಭೆಯಲ್ಲಿ ಸಚಿವರ ವಿರುದ್ಧ ಭಾರೀ ಅಸಮಾಧಾನ ವ್ಯಕ್ತಪಡಿಸಿದೆ.
ಮಾಜಿ ಕೇಂದ್ರ ಸಚಿವ, ಮಾಜಿ ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿಯವರು ಈ ದೇಶ ಕಂಡ ಶುದ್ಧ ಹಸ್ತದ ಪ್ರಾಮಾಣಿಕ ರಾಜಕಾರಣಿ. ಎಲ್ಲಾ ಜಾತಿ-ಧರ್ಮದ ಬಡವರ, ಶೋಷಿತರ ಪರವಾಗಿ ಧ್ವನಿ ಎತ್ತಿದವರು. ಇಂದಿರಾ ಗಾಂಧಿ ಕುಟುಂಬದೊಂದಿಗೆ ಅತ್ಯಂತ ನಿಕಟ ಸಂಕರ್ಪ ಹೊಂದಿರುವ ಪೂಜಾರಿಯವರನ್ನು ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ಪಕ್ಷದ ವರಿಷ್ಠರು ಅತ್ಯಂತ ಗೌರವದಿಂದ ಕಾಣುತ್ತಾರೆ ಎಂದು ಪೂಜಾರಿಯವರಿಗೆ ಸಚಿವರಿಂದಾದ ನಿಂದನೆಯ ಬಗ್ಗೆ ತೀವ್ರವಾಗಿ ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪರಂಪರೆಯಲ್ಲೇ ಅತ್ಯಂತ ಗೌರವಿಸಲ್ಪಡುವ ಪೂಜಾರಿಯವರು ಸಾರ್ವಜನಿಕ ವಲಯದಲ್ಲಿ ಚಾರಿತ್ರ್ಯದ ವ್ಯಕ್ತಿತ್ವವುಳ್ಳವರು. ಈ ದೇಶದ ಸಾರ್ವಭೌಮತ್ವದ ಇತಿಹಾಸ ಹಾಗೂ ಪರಂಪರೆಯನ್ನು ಸರಿಯಾಗಿ ಅರಿತುಕೊಳ್ಳದ ಸಚಿವರು ಮಂಗಳೂರಿನ ಸುರತ್ಕಲ್‌ನ ಸಭಾಂಗಣವೊಂದರಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಸಚಿವ ರೈಯವರು ಪೂಜಾರಿಯವರ ಬಗ್ಗೆ ತುಚ್ಛವಾಗಿ ಮಾತನಾಡಿ ನಿಂದಿಸಿದ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸಂಘದ ಪದಾಧಿಕಾ ರಿಗಳು ಆಗ್ರಹಿಸಿದರು.
ಸಿದ್ಧವಾದ ಸ್ವಾಭಿಮಾನಿ ವೇದಿಕೆ:
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೆಲವೊಂದು ಏಕ ಪಕ್ಷೀಯ ನಡವಳಿಕೆಯಿಂದ ಬೇಸತ್ತ ಹಿರಿಯ ಕಾಂಗ್ರೆಸ್ಸಿಗರ ಗುಂಪೊಂದು ಕಳೆದ ನಾಲ್ಕು ವರ್ಷಗಳಿಂದ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದೆ. ಕೆಲವೊಂದು ಮುಖಂಡರು ಈಗಾಗಲೇ ಪಕ್ಷ ತೊರೆದಿದ್ದು, ಇನ್ನು ಕೆಲವರು ಪಕ್ಷದಿಂದ ಒಂದು ಕಾಲು ಹೊರ ಇಟ್ಟಿದ್ದಾರೆ. ಕೆಲವರಂತೂ ಕೆಪಿಸಿಸಿಗೆ ದೂರು ನೀಡುವ ಹಂತಕ್ಕೂ ಈ ವಿವಾದ ಬೆಳೆದಿತ್ತು. ಒಂದೊಂದು ಕಾರಣದಿಂದಾಗಿ ಅವಮಾನಕ್ಕೊ ಳಗಾದ ಪಕ್ಷದ ಮುಖಂಡರ, ಕಾರ್ಯಕರ್ತರು ಇದೀಗ ಪಕ್ಷದಲ್ಲೇ ಉಳಿದು ಕೊಂಡು ಸ್ವಾಭಿಮಾನಿ ವೇದಿಕೆಯೊಂದನ್ನು ಕಟ್ಟಿಕೊಳ್ಳಲು ಚಿಂತನೆ ನಡೆಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯಾಗಿ ರೂಪಿಸುವ ತಂತ್ರಗಾರಿಕೆ ಕೂಡ ನಡೆಯುತ್ತಿದೆ.

Related posts

Leave a Reply