Header Ads
Header Ads
Breaking News

ಫಾದರ್ ಮುಲ್ಲರ್ ನಲ್ಲಿ ವಿಶ್ವ ವೈದ್ಯರ ದಿನಾಚರಣೆ

ಉಳ್ಳಾಲ: ಸರಕಾರಿ ವೈದ್ಯಕೀಯ ವ್ಯವಸ್ಥೆಯಲ್ಲೂ ಎಲ್ಲಾ ರೀತಿಯ ಔಷಧೀಯ ಪದ್ಧತಿಗಳು ಜಾರಿಯಾಗಬೇಕಿದೆ , ಈ ಮೂಲಕ ರೋಗಿಗಳು ವಿವಿಧ ರೀತಿಯ ಪ್ರಯೋಜನವನ್ನು ಪಡೆಯಲು ಸಾಧ್ಯ ಎಂದು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಜೇಶ್ವರಿ ದೇವಿ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆ ಫಾದರ್ ಮುಲ್ಲರ‍್ಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಆಡಿಟೋರಿಯಂನಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಆಯುರ್ವೇದ, ಹೋಮಿಯೋಪತಿ ಹಾಗೂ ಅಲೋಪತಿ ಔಷಧಿ ವ್ಯವಸ್ಥಯಿಂದ ಜನರಲ್ಲಿ ಗೊಂದಲವಿದೆ. ಇದರ ಕುರಿತ ಗೊಂದಲ ನಿವಾರಣೆ ವೈದ್ಯರುಗಳಿಂದ ಸಾಧ್ಯ. ಹೋಮಿಯೋಪತಿ ವೈದ್ಯಕೀಯ ವ್ಯವಸ್ಥೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಇದ್ದು, ಸರಕಾರಿ ವ್ಯವಸ್ಥೆಯಲ್ಲಿಯೂ ಆಯುರ್ವೇದ ಪದ್ಧತಿಗೆ ಆಯುಷ್ ಇಲಾಖೆಯಂತೆ, ಹೋಮಿಯೋಪತಿ ವಿಭಾಗವೂ ಸೇರಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾದರ್ ಮುಲ್ಲರ‍್ಸ್ ಹೋಮಿಯೋಪತಿ ಆಸ್ಪತ್ರೆ ನಿರ್ದೇಶಕ ಫಾ.ರಿಚರ್ಡ್ ಕೊಯೆಲ್ಹೋ ವಹಿಸಿದ್ದರು.
ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಶಿವಪ್ರಸಾದ್ ಕೆ ಉಪಸ್ಥಿತರಿದ್ದರು.
ಫಾ.ಸಿಲ್ವೆಸ್ಟರ್ ಸ್ವಾಗತಿಸಿದರು. ಡಾ.ಅಂಜಲಿ ಮನಾಯಿಲ್ ಮತ್ತು ಡಾ.ಶೃತಿ ನಾಯರ್ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಆಡಳಿತ ಅಧಿಕಾರಿ ಫಾ.ವಿನ್ಸೆಂಟ್ ಸಲ್ದಾನ್ಹ ವಂದಿಸಿದರು.

Related posts

Leave a Reply