Header Ads
Breaking News

ಫೆ.16ರಿಂದ 19ರ ವರೆಗೆ ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನ ದ್ವಿತೀಯ ವರ್ಷದ ವರ್ದ್ಯುಂತ್ಯುತ್ಸವ

ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದ ದ್ವಿತೀಯ ವರ್ಷದ ವರ್ದ್ಯುಂತ್ಯುತ್ಸವ ಹಾಗೂ ವಿವಿಧ ಧಾರ್ಮಿಕಗಳು ಫೆಬ್ರವರಿ 16ರಿಂದ ಆರಂಭಗೊಂಡು 19ರ ವರೆಗೆ ನಡೆಯಲಿದೆ. 

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ಮಾಹಿತಿ ನೀಡಿದರು. ದ್ವಿತೀಯ ವರ್ಷದ ವರ್ದ್ಯುಂತ್ಯುತ್ಸವದ ಹಿನ್ನಲೆಯಲ್ಲಿ 9ರಂದು ಆದಿತ್ಯವಾರ ಉಡುಪಿ ದೇವಾಡಿಗರ ಸಮಾಜ ಸೇವಾ ಸಂಘದಿಂದ ಹೊರಟು ಶ್ರೀ ದೇವಿ ಸನ್ನಿದಿಗೆ ಕಾಲು ನಡಿಗೆಯಲ್ಲಿ ನಮ್ಮ ನಡೆ ಅಮ್ಮನೆಡೆಗೆ ಕಾರ್ಯಕ್ರಮ ನಡೆಯಲಿದೆ. 16ರರಂದು ವಿವಿಧ ಸಂಸ್ಥೆಗಳಿಂದ ಬೃಹತ್ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಶೋಭಾಯಾತ್ರೆ ಕಚ್ಚೂರು ಸೇತುವೆ ಬಳಿಯಿಂದ ಹೊರಡಳಿದೆ. 17ರಂದು ಸೋರ್ಯೋದಯದಿಂದ ಸೂರ್ಯೋಸ್ತದವರೆಗೆ ಸಮಾಜದ ಪ್ರತಿಭಾನ್ವಿತ ಕಲಾವಿದರಿಂದ ಸ್ಯಾಕ್ಸೂಫೋನ್ ವಾದನ ಸೇವೆ ನಡೆಯಲಿದೆ. 18ರಂದು ವಿವಿಧ ಭಜನಾ ತಂಡಗಳಿಂದ ಸೂರ್ಯೋದಯದಿಂದ ಸೂರ್ಯೋಸ್ತದವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. 19ತರಂದು ದೇವಿ ಸನ್ನಿದಿಯಲ್ಲಿ ಸಾಮೂಹಿಕ ಚಂಡಿಕಾಯಾಗ, ತುಲಾಭಾರ ಸೇವೆ, ವಧುವರರ ಅನ್ವೇಷನಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10ಕ್ಕೆ ಬಾರ್ಕೂರು ಅಜ್ಜಿಮನೆ ಬುಡ್ಡು ರಾಮ ಸೇರಿಗಾರ್ ಸಭಾ ಭವನದಲ್ಲಿ ದೇವಾಡಿಗ ಸಮಾಜೋತ್ಸವ ಕಾರ್ಯಕ್ರಮ ನಡೆಯಲಿದ್ದು ಸಮಿತಿಯ ಗೌರವಾದ್ಯಕ್ಷ ಧರ್ಮಪಾಲ ದೇವಾಡಿಗರ ಉಪಸ್ಥಿತಿಯಲ್ಲಿ ಅನೇಕ ಸಾಧಕ ಗಣ್ಯರಿಗೆ ಸನ್ಮಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

Related posts

Leave a Reply

Your email address will not be published. Required fields are marked *