Header Ads
Breaking News

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಜಾತ್ರಾ ಮಹೋತ್ಸವ :ಶಯನೋತ್ಸವಕ್ಕೆ ಭಕ್ತರಿಂದ ಚೆಂಡು ಮಲ್ಲಿಗೆ ಸಮರ್ಪಣೆ

ಪುರಾಣ ಪ್ರಸಿದ್ದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಿನ್ನೆ ನಡೆದ ಶಯನೋತ್ಸವಕ್ಕೆ ಭಕ್ತರಿಂದ ಸುಮಾರು 1ಲಕ್ಷ ಕ್ಕಿಂತ ಹೆಚ್ಚು ಚೆಂಡು ಮಲ್ಲಿಗೆ ಸಮರ್ಪಣೆಯಾಯಿತು ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.

ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಪುರಾಣ ಪ್ರಸಿದ್ದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶಯನೋತ್ಸವ ಬಹಳ ಪ್ರಸಿದ್ದಿಯನ್ನು ಪಡೆದಿದೆ, ಶಯನೋತ್ಸವಕ್ಕೆ ಮಲ್ಲಿಗೆ ಅರ್ಪಿಸಿದರೆ ತಮ್ಮ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆಯಿಂದ ಸಾವಿರಾರು ಮಂದಿ ಮಲ್ಲಿಗೆಯನ್ನು ದುರ್ಗೆಗೆ ಅರ್ಪಿಸುತ್ತಾರೆ, ಜಾತ್ರಾ ಮಹೋತ್ಸವದ ಹಗಲು ರಥೋತ್ಸವದ ರಾತ್ರಿ ನಡೆಯುವ ದುರ್ಗೆಯ ಶಯನಕ್ಕೆ ಭಕ್ತರಿಂದ ಸಾವಿರಾರು ಚೆಂಡು ಮಲ್ಲಿಗೆ ಅರ್ಪಣೆಯಾಗುತ್ತದೆ, ಮಲ್ಲಿಗೆ ಅರ್ಪಿಸಲು ಮದ್ಯಾಹ್ನದಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದು, ಅರ್ಪಿಸಿದ ಮಲಿಗ್ಗೆಗೆ ದೇವಸ್ಥಾನದ ವತಿಯಿಂದ ರಶೀದಿ ನೀಡಲಾಗುತ್ತದೆ, ಅರ್ಪಿತವಾದ ಮಲ್ಲಿಗೆಯನ್ನು ದೇವಸ್ಥಾನದ ಗೋಪುರದಲ್ಲಿ ಜೋಡಿಸಿ ಶಯನದ ಸಂದರ್ಭ ದೇವಳದ ಗರ್ಭ ಗುಡಿಯಲ್ಲಿ ಜೋಡಿಸಲಾಗುತ್ತದೆ, ಇದರಿಂದ ದುರ್ಗೆಯು ತೃಪ್ತಿಯಾಗಿ ಭಕ್ತರು ಯಾವ ಉದ್ದೇಶದಿಂದ ಮಲ್ಲಿಗೆ ಸಲ್ಲಿಸುತ್ತಾರೋ ಆ ಉದ್ದೇಶವನ್ನು ದುರ್ಗೆ ಈಡೇರಿಸುತ್ತಾಳೆ ಎಂಬುದು ಜನರ ನಂಬಿಕೆ ಭಕ್ತರದ್ದು.

 ಬಾಳೆ ಹಗ್ಗದಿಂದ ಮಲ್ಲಿಗೆಯನ್ನು ಮಾತ್ರ ದೇವರಿಗೆ ಸಮರ್ಪಣೆ ಮಾಡಲಾಗುತ್ತಿದ್ದು, ನೂಲಿನಿಂದ ಕಟ್ಟಿದ ಮಲ್ಲಿಗೆ ಶಯನಕ್ಕೆ ನಿಷಿದ್ದವಾಗಿದೆ. ದೂರ ದೂರದ ಊರಿನ ಭಕ್ತರು ಬಂದು ಆ ದಿನ ಮಲ್ಲಿಗೆಯನ್ನು ಅರ್ಪಿಸುದು ಮಾತ್ರವಲ್ಲದೆ, ಮುಸ್ಲಿಮ್ ಧರ್ಮದವರು ಮಲ್ಲಿಗೆಯನ್ನು ಅರ್ಪಿಸುದು ಇಲ್ಲಿನ ವಿಶೇಷ, ದೇವಸ್ಥಾನದ ಶಯನೋತ್ಸವ ನಡೆದು ಮರುದಿನ ಕವಾಟೋದ್ಘಟನೆಯ ನಂತರ ಆಯಾಯ ಭಕ್ತರಿಗೆ ತಾವು ಅರ್ಪಿಸಿದ ಮಲ್ಲಿಗೆಯ ಅರ್ದದಷ್ಟನ್ನು ನೀಡಲಾಗುತ್ತದೆ, ನಿನ್ನೆ ದೇವಸ್ಥಾನಕ್ಕೆ ಭಕ್ತರಿಂದ ಸುಮಾರು1ಲಕ್ಷಕ್ಕಿಂತಲೂ ಹೆಚ್ಚು ಚೆಂಡು ಮಲ್ಲಿಗೆ ಅರ್ಪಣೆಯಾಗಿದ್ದು, ಮಾರುಕಟ್ಟೆ ದರ ಒಂದು ಚೆಂಡು ಮಲ್ಲಿಗೆಗೆ 150ರೂಪಾಯಿ ಇದ್ದು, ಸುಮಾರು 75 ಲಕ್ಷ ರೂಪಾಯಿಯ ಮಲ್ಲಿಗೆ ಹೂ ದೇವರಿಗೆ ಸಂದಾಯವಾದಂತಾಗಿದೆ ಏನೇ ಆಗಲಿ ಬಪ್ಪನಾಡಿನಲ್ಲಿ ನಡೆಯುವ ಶಯನೋತ್ಸವ ವಿಶೇಷತೆಯಿಂದ ಕೂಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

Related posts

Leave a Reply

Your email address will not be published. Required fields are marked *