Header Ads
Header Ads
Breaking News

ಬೀಡಿ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತು ನೀಡಿ : ಪುತ್ತೂರಿನಲ್ಲಿ ಜೆಡಿಎಸ್‍ನಿಂದ ಪ್ರತಿಭಟನೆ

ಪುತ್ತೂರು:ಬಡ ಬೀಡಿ ಕಾರ್ಮಿಕರಿಗೆ ಸಿಗಬೇಕಾದ ಕನಿಷ್ಠ ಕೂಲಿ ಹಾಗೂ ತಟ್ಟಿ ಭತ್ತೆಯನ್ನು ಕಂಪನಿಗಳು ನೀಡದಿದ್ದರೆ ಎಲ್ಲಾ ಕಂಪನಿಗಳಿಗೂ ಬೀಗ ಜಡಿದು ಹೋರಾಟ ಮಾಡಲಾಗುವುದು. ಬೀಡಿ ಕಾರ್ಮಿಕರ ನ್ಯಾಯಕ್ಕಾಗಿ ನಾವು ಜೈಲಿಗೆ ಹೋಗಲೂ ನಾವು ಸಿದ್ದ ಎಂದು ಜೆಡಿಎಸ್ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಕಲ್ಲೇಗ ಎಚ್ಚರಿಸಿದರು.

ಬೀಡಿ ಕಂಪನಿಗಳು ಕಾರ್ಮಿಕರಿಗೆ ಕನಿಷ್ಠ ಕೂಲಿ ಹಾಗೂ ತುಟ್ಟಿ ಭತ್ತೆ ನೀಡದೆ ಶೋಷಣೆ ಮಾಡುತ್ತಿರುವ ವಿರುದ್ದ ಜೆಡಿಎಸ್ ಹಾಗೂ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಜಂಟಿ ಆಶ್ರಯದಲ್ಲಿ ಡಿ.24ರಂದು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕರಾವಳಿ ಭಾಗದ ಬಹುತೇಕ ಮಹಿಳೆಯರು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದು ಬೀಡಿ ಕಾರ್ಮಿಕರಿಗೆ ಸರಕಾರ ಪ್ರತಿ ಸಾವಿರ ಬೀಡಿಗೆ 220 ರೂಪಾಯಿ ವೇತನ ನಿಗಧಿಪಡಿಸಿದೆ. ಆದರೆ ಕಂಪನಿಗಳು ಕೇವಲ 162 ರೂಪಾಯಿ ನೀಡುತ್ತಿದ್ದಾರೆ. 2015ರಲ್ಲಿ ರಾಜ್ಯ ಸರಕಾರ ಬೀಡಿ ಕಾರ್ಮಿಕರಿಗೆ ರೂ.12.75 ತುಟ್ಟಿ ಭತ್ಯೆಯನ್ನು ಏರಿಕೆ ಮಾಡಿದೆ. ಅದನ್ನು ಕಂಪನಿಗಳಿ ಕಾರ್ಮಿಕರಿಗೆ ನೀಡದೆ ವಂಚನೆ ಮಾಡುತ್ತಿದ್ದಾರೆ. ನಾವು ಕಂಪನಿಗಳ ಯಾವುದೇ ಲಾಭಿಗೆ ಮಣಿಯದೆ ಕಾರ್ಮಿಕರಿಗೆ ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಸಲಿದ್ದೇವೆ ಎಂದು ಎಚ್ಚರಿಸಿದರು.

ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಅಧ್ಯಕ್ಷ ಗಿರಿಧರ್ ನಾಯ್ಕ್ ಮಾತನಾಡಿ, ಬೀಡಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಇದೀಗ ಜೆಡಿಎಸ್ ಹಾಗೂ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಜಂಟಿಯಾಗಿ ಹೋರಾಟ ಮುಂದುವರಿಸಲಾಗಿದೆ. ಬೀಡಿ ಕಂಪನಿಗಳು 15 ದಿನಗಳಲ್ಲಿ ಕನಿಷ್ಠ ವೇತನ ಹಾಗೂ ತುಟ್ಟಿ ಭತ್ಯೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‍ನ ಮುಖಂಡರಾದ ರಾಧಾಕೃಷ್ಣ ಸಾಲಿಯಾನ್, ಶಿವು ಸಾಲಿಯಾನ್, ಹರೀಶ್ ಕೊಟ್ಟಾರಿ, ಜಾಫರ್ ವಿಟ್ಲ, ಕರೀಂ ಪಳ್ಳತ್ತೂರು, ನಝೀರ್ ಬಪ್ಪಳಿಗೆ, ಅದ್ದು ಪಡೀಲ್, ಇಬ್ರಾಹಿಂ ಕಲ್ಲರ್ಪೆ, ಇಬ್ರಾಹಿಂ ಪರ್ಪುಂಜ, ಜಯರಾಜ್ ಅಮೀನ್, ಪದ್ಮಮಣಿ, ಪ್ರಜ್ಞಾ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply