Header Ads
Header Ads
Breaking News

ಬೃಹತ್ ಅಲೆಗೆ ಮಗುಚಿ ಬಿದ್ದ ದೋಣಿ. ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ. ಮಲ್ಪೆಯ ಪಡುಕೆರೆಯಲ್ಲಿ ನಡೆದ ದುರ್ಘಟನೆ.

ಮಲ್ಪೆಯ ಪಡುಕೆರೆ ತೀರದಲ್ಲಿ ದೋಣಿ ಎಳೆಯುತ್ತಿರುವ ವೇಳೆ ಬೃಹತ್ ಅಲೆ ಅಪ್ಪಳಿಸಿದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಸಮುದ್ರ ಪಾಲಾದ ಘಟನೆ ನಡೆದಿದೆ. ಮೃತರನ್ನು ಉದ್ಯಾವರ ಪಿತ್ರೋಡಿಯ ನಿತೇಶ್ ಎಂದು ಗುರುತಿಸಲಾಗಿದ್ದು, ಅವರಿಗೆ7ತಿಂಗಳ ಹಿಂದೆ ವಿವಾಹವಾಗಿತ್ತು. ನಿಶಾಂತ್ ಎಂಬುವವರು ನೀರು ಪಾಲಾಗಿದ್ದು,ನಾಪತ್ತೆಯಾಗಿದ್ದಾರೆ.ಸುಮಾರು 200ಮೀ ದೂರದಲ್ಲಿ ಎಂಬತ್ತಕ್ಕೂ ಅಧಿಕ ಮಂದಿ ದೋಣಿಯನ್ನು ದಡಕ್ಕೆ ಎಳೆಯುವ ವೇಳೆ ಬೃಹತ್ ಅಲೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಇಬ್ಬರು ಯುವಕರು ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು, ಓರ್ವನ ಮೃತ ದೇಹ ಅಲ್ಲೇ ಸಮೀಪ ಪ್ತೆಯಾಗಿದ್ದು, ಇನ್ನೋರ್ವ ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ಮಲ್ಪೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Related posts

Leave a Reply