Breaking News

ಬೆಂಜನಪದವು ಅಶ್ರಫ್ ಹತ್ಯಾ ಪ್ರಕರಣ, ಐವರು ಆರೋಪಿಗಳ ಬಂಧನ

ಮಂಗಳೂರು: ಎಸ್‌ಡಿಪಿ‌ಐ ಅಮ್ಮುಂಜೆ ವಲಯಾಧ್ಯಕ್ಷ ಅಶ್ರಫ್ ಕಲಾಯಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿ‌ಆರ್‌ಬಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ದ್ದಾರೆ.
ಅಭಿನ್, ಶಿವಪ್ರಸಾದ್, ರಂಜಿತ್, ಪವನ್ , ದಿವ್ಯರಾಜ್ , ಸಂತೋಷ್ ಎಂಬವರನ್ನು ಸಿಸಿ‌ಆರ್‌ಬಿ ಪೊಲೀ ಸರು ಬಂಧಿಸಿದ್ದಾರೆ. ಜೂ.೨೧ ರಂದು ಬಾಡಿಗೆಗೆಂದು ತೆರಳಿದ್ದ ಅಶ್ರಫ್ ಅವರನ್ನು ಬೆಂಜನಪದವು ಸಮೀಪ ಮೂರು ಬೈಕುಗಳಲ್ಲಿ ಬಂದಿದ್ದ ಆರು ಮಂದಿಯ ತಂಡ ಯದ್ವಾತದ್ವ ಕಡಿದು ಹತ್ಯೆ ನಡೆಸಿತ್ತು. ಅದಾಗಲೇ ಎಸ್‌ಡಿಪಿ‌ಐ ಸಂಸ್ಥಾಪನಾ ದಿನದ ಧ್ವಜಾರೋಹಣ ಮತ್ತು ಊರಿನಲ್ಲಿ ಶ್ರಮದಾನದಲ್ಲಿ ಭಾಗವಹಿಸಿದ್ದ ಅಶ್ರಫ್ ಗಂಟೆಯ ಅವಧಿಯಲ್ಲಿ ಹೆಣವಾಗಿ ಹೋಗಿದ್ದರು. ಕಲ್ಲಡ್ಕ ಗಲಾಟೆಯಿಂದ ಉದ್ವಿಘ್ನಗೊಂಡಿದ್ದ ಬಂಟ್ವಾಳ, ಎಸ್‌ಡಿಪಿ‌ಐ ಅಧ್ಯಕ್ಷನ ಸಾವಿನಿಂದ ಇನ್ನಷ್ಟು ಉದ್ವಿಘ್ನ ವಾತಾವರಣಕ್ಕೆ ಕಾರಣವಾಗಿತ್ತು. ಇದರಿಂದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಲಯ ಐಜಿಪಿ ಬಂಟ್ವಾಳ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲೂ ಮೇಜರ್ ಸರ್ಜರಿ ನಡೆಸಿ, ಕೆಲ ಅಧಿಕಾರಿಗಳು ರಜೆಯಲ್ಲಿ ಕಳುಹಿಸಿ ಅಗತ್ಯ ಬೇಕಾದ ಅಧಿಕಾರಿಗಳನ್ನು ನೇಮಿಸಿದ್ದರು. ಅಲ್ಲದೆ ಐದು ತನಿಖಾ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ನಿನ್ನೆ ಮಧ್ಯಾಹ್ನ ವೇಳೆ ಆರೋಪಿಗಳೆಲ್ಲರೂ ಸಿಸಿ‌ಆರ್ ಬಿ ಪೊಲೀಸರ ಮುಂದೆ ಶರಣಾಗತಿಯಾದರೂ, ಸಂಜೆ ವೇಳೆ ಬಂಧನ ತೋರಿಸಲಾಗಿದೆ.
ಮತ್ತೆ ಬಿಗುವಿನ ವಾತಾವರಣ : ಆರೋಪಿಗಳ ಬಂಧನವಾಗುತ್ತಿದ್ದಂತೆ ಬಂಟ್ವಾಳ, ಸುರತ್ಕಲ್, ಮಂಗಳೂರು, ಉಳ್ಳಾಲ, ಸುಳ್ಯ, ಪುತ್ತೂರು, ಮೂಡಬಿದ್ರೆ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸೆಕ್ಷನ್ ಜಾರಿಯಲ್ಲಿರುವು ದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಲ್ಲಲ್ಲಿ ವಾಹನಗಳ ತಪಾಸಣೆ ಹಾಗೂ ಗುಂಪಾಗಿ ತೆರಳದಂತೆ ನೋಡಿಕೊಳ್ಳುತ್ತಿದ್ದಾರೆ.
ಆರೋಪಿಗಳೆಲ್ಲರೂ ಸಂಘಟನೆಯ ಕಾರ‍್ಯಕರ್ತರೆಂದು ತಿಳಿದು ಬಂದಿದೆ. ಮೂಲದ ಪ್ರಕಾರ ಪಿ‌ಎಫ್‌ಐ ಕಾರ‍್ಯಕರ್ತ, ರಿಕ್ಷಾ ಚಾಲಕ ಇಕ್ಬಾಲ್ ಹತ್ಯೆಗೆ ಪ್ರತೀಕಾರವಾಗಿ ಆತನ ಕೊಲೆಯಲ್ಲಿ ಭಾಗಿಯಾಗಿದ್ದ ಇನ್ನೋರ್ವ ರಿಕ್ಷಾ ಚಾಲಕ ರಾಜೇಶ್ ಪೂಜಾರಿ ಎಂಬಾತ ಜೈಲಿನಿಂದ ಬಿಡುಗಡೆಗೊಂಡ ತಕ್ಷಣ ಆತನನ್ನು ಹತ್ಯೆ ನಡೆಸಲಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಅಶ್ರಫ್ ಕಲಾಯಿ ಅವರನ್ನು ಹತ್ಯೆ ನಡೆಸಲಾಗಿದೆ ಅನ್ನುವ ಮಾತುಗಳು ಕೇಳಿಬಂದಿವೆ. ಆದರೆ ಅಶ್ರಫ್ ಕಲಾಯಿ ಯಾವುದೇ ಪ್ರಕರಣಗಳಲ್ಲಿ ಗುರುತಿಸದಿದ್ದರೂ ಎಸ್‌ಡಿಪಿ‌ಐನಲ್ಲಿ ಸಕ್ರಿಯನಾಗಿರುವುದೇ ಹಿಂದೂ ಕಾರ‍್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದರು ಎನ್ನಲಾಗಿದೆ.

Related posts

Leave a Reply