Header Ads
Header Ads
Header Ads
Header Ads
Header Ads
Header Ads
Breaking News

ಬೋಂದೆಲ್ ಸಂತ ಲಾರೆನ್ಸರ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ

ಬೋಂದೇಲ್ ಸಂತ ಲಾರೆನ್ಸರ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ ಆಗಸ್ಟ್ 10ರವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಲಾಯಿತು. ಇದೇ ವೇಳೆ ಫಾ. ಲಿಯೋ ವೇಗಸ್ ದೀಪ ಬೆಳಗಿಸಿ ಶುಭಹಾರೈಸಿದರು. ಬಳಿಕ ದಾಯ್ಜಿವರ್ಲ್ಡ್ ಸಮೂಹ ಸಂಸ್ಥೆ ಮುಖ್ಯಸ್ಥ ವಾಲ್ಟರ್ ನಂದಳಿಕೆ ಧ್ವಜಾರೋಹನ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಬೋಂದೆಲ್ ನಲ್ಲಿರುವ ಧಾರ್ಮಿಕ ಶ್ರದ್ದಾಕೇಂದ್ರ ಧರ್ಮದ ಜಾಗೃತಿ ಮೂಡಿಸುತ್ತಿದ್ದು, ಸರ್ವಧರ್ಮಿಯರ ಕ್ಷೇತ್ರವೆಂಬಂತಿದೆ. ಎಲ್ಲಾ ಧರ್ಮದವರು ಸಂತ. ಲಾರೆನ್ಸರ ಕ್ಷೇತ್ರದಲ್ಲಿ ನಿವೇದನೆಗಳನ್ನು ಸಲ್ಲಿಸುತ್ತಾರೆ. ವಾರ್ಷಿಕ ಮಹೋತ್ಸವ ಶಾಂತಿ ಹಾಗೂ ಸೌಹಾರ್ದತೆಯ ಸಂದೇಶವನ್ನು ಸಾರುತ್ತದೆ ಎಂದರು. ಈ ಸಂದರ್ಭ ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರುಗಳಾದ ಫಾ. ಆಂಡ್ರ್ಯು ಲಿಯೋ ಡಿಸೋಜ, ಸಹಾಯಕ ಧರ್ಮಗುರುಗಳಾದ ಫಾ. ಸಿರಿಲ್ ಲೋಬೊ, ಫಾ. ಕ್ಲಿಫರ್ಡ್, ಉಪಾಧ್ಯಕ್ಷ ಹನ್ಬರ್ಟ್ ಪಿಂಟೊ, ಕಾರ್ಯದರ್ಶಿ ಫ್ರಾನ್ಸಿಸ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *