Header Ads
Header Ads
Breaking News

ಭಗವತಿ ಪ್ರೇಮ್ ಡ್ರಜ್ಜರ್ ಸ್ಥಳಾಂತರಿಸಲು ಆಗ್ರಹ : ಕೂಡಲೇ ಡ್ರಜ್ಜರ್ ತೆರವುಗೆ ಗುಡ್ಡೆಕೊಪ್ಲ, ದೊಡ್ಡಕೊಪ್ಲ ಮೊಗವೀರ ಸಭಾದ ಆಗ್ರಹ

ನವಮಂಗಳೂರು ಬಂದರಿನ ಟಗ್‌ನಿಂದ ಮುಂಬಯಿ ಮೂಲದ ಮರ್ಕೆಟರ್ ಸಂಸ್ಥೆಯ ಭಗವತಿ ಪ್ರೇಮ್ ಎಂಬ ಡ್ರಜ್ಜರ್‌ನ್ನು ಎಳೆದು ತಂದು ಗುಡ್ಡೆಕೊಪ್ಲ ಮತ್ತು ದೊಡ್ಡಕೊಪ್ಲ ಗ್ರಾಮದ ನಡುವಿನ ದಡಕ್ಕೆ ತಂದು ನಿಲ್ಲಿಸಿದೆ. ಅದನ್ನು ಇಲ್ಲಿಂದ ತೆರವು ಮಾಡಿಸಿಬೇಕೆಂಬ ಮನವಿಯನ್ನು ಜಿಲ್ಲಾಧಿಕಾರಿಗಳು ಮತ್ತು ನವಮಂಗಳೂರು ಬಂದರು ಮಂಡಳಿ ಹಾಗೂ ಜನಪ್ರತಿನಿಧಿಗಳಿಗೆ ಸಲ್ಲಿಸಲಾಗಿದೆ. ಈ ಬೇಡಿಕೆಯ ಬಗ್ಗೆ ಸಂಬಂಧಪಟ್ಟವರು ಈವರೆಗೆ ಯಾವುದೇ ಕಾಳಜಿವಹಿಸುತ್ತಿಲ್ಲ. ಇದರಿಂದ ಮೀನುಗಾರಿಕೆಯನ್ನೇ ಅವಲಂಬಿಸಿರುವ ನಮ್ಮ ಗ್ರಾಮದ ಮೀನುಗಾರರು ಆತಂಕಕ್ಕೊಳಗಾಗಿದ್ದಾರೆ ಎಂದು ಗುಡ್ಡೆಕೊಪ್ಲ ಮೊಗವೀರ ಸಭಾದ ಶರತ್ ಗುಡ್ಡೆಕೊಪ್ಲ ತಿಳಿಸಿದರು. ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಆನಂತರ ಕೇಶವ್ ಕುಂದರ್ ಅವರು ಮಾತನಾಡಿ, ಡ್ರಜ್ಜರ್‌ನಿಂದ ಮೀನುಗಾರರಿಗೆ ತುಂಬಾ ತೊಂದರೆ ಆಗಿದೆ. ಈ ಹಡಗನ್ನು ಇಲ್ಲಿಂದ ಸ್ಥಳಾಂತರಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಹೇಳಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಗಿರಿಧರ್ ಕೋಟ್ಯಾನ್, ಸಚೇಂದ್ರ ಗುರಿಕಾರ್, ನರೇಶ್ ಮುಂತಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *