Header Ads
Header Ads
Breaking News

ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕು,ಅದು ಯುದ್ಧಕ್ಕೆ ಕಾರಣವಾಗಬಾರದು : ಪೇಜಾವರ ಶ್ರೀ

ಪುಲ್ವಾಮದಲ್ಲಿ 40ಕ್ಕೂ ಅಧಿಕ ಸೈನಿಕರು ಹುತಾತ್ಮರಾಗಿರುವುದು ದುಃಖಕರ ಸಂಗತಿ. ಸರ್ಕಾರ ಈ ಬಗ್ಗೆ ಸ್ಪಂದಿಸಿ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕು. ಆದರೆ ಅದು ಯುದ್ಧಕ್ಕೆ ಕಾರಣವಾಗಬಾರದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಧರ್ಮಾನುಷ್ಠಾನದಿಂದ ಯೋಗಿಗಳಿಗೆ ಏನು ಫಲ ಲಭಿಸುತ್ತದೆಯೋ ಅಷ್ಟು ಪುಣ್ಯ ದೇಶ ಮತ್ತು ಸಮಾಜಕ್ಕೆ ಪ್ರಾಣಾರ್ಪಣೆ ಮಾಡಿದವರಿಗೆ ಸಿಗುತ್ತದೆ ಎಂಬುದನ್ನು ಮಹಾಭಾರತ ಉಲ್ಲೇಖಿಸಿದೆ. ಹೀಗಾಗಿ ಹುತಾತ್ಮರಿಗೆ ದೇವರು ಚಿರಶಾಂತಿ ನೀಡಲಿ ಎಂದು ಪ್ರಾರ್ಥಸುತ್ತೇನೆ ಎಂದರು.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಉತ್ತಮವಾದ ಜನಪರ ಬಜೆಟ್ ಮಂಡಿಸಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅಭಿನಂದಿಸುತ್ತೇನೆ. ಗಂಗೆ ಶುದ್ಧೀಕರಣ ಕಾರ್ಯ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಇದನ್ನು ಸ್ವತಃ ಕುಂಭಮೇಳದಲ್ಲಿ ಕಂಡಿದ್ದೇನೆ ಎಂದರು. ಕೇಂದ್ರ ಸರ್ಕಾರ ರಾಮಮಂದಿರಕ್ಕೆ ಸುಗ್ರೀವಾಜ್ಞೆ ಜಾರಿಗೊಳಿಸಿದರೆ ಮುಖಭಂಗವಾಗಬಹುದು. ಮಂದಿರ ನಿರ್ಮಾಣ ಕಾರ್ಯ ತಡವಾಗಬಹುದು. 4ತಿಂಗಳ ಕಾಲಾವಕಾಶಬೇಕು ಎಂಬ ಅಭಿಪ್ರಾಯವನ್ನು ಕಾನೂನು ತಜ್ಞರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಮೀರಿ ಹೋಗುವುದು ಸರಿಯಲ್ಲ ಎಂಬ ಭಾವನೆ ಕೇಂದ್ರ ಸರ್ಕಾರಕ್ಕಿದೆ. ಈ ಹಿನ್ನೆಲೆಯಲ್ಲಿ ಕಾದು ನೋಡುವ ತಂತ್ರ ಅನುಸರಿಸಲಾಗಿದೆ ಎಂದರು.

Related posts

Leave a Reply

Your email address will not be published. Required fields are marked *