Header Ads
Header Ads
Breaking News

ಮಂಗಳೂರಿನಲ್ಲಿ ಕರಾಲಿ ಕನ್ನಡ ಚಿತ್ರ ಬಿಡುಗಡೆ, ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ಪ್ರದರ್ಶನ

ವೇದಾಂತ್ ಪ್ರೋಡಕ್ಷನ್ ಲಾಂಚನದಲ್ಲಿ ಮೂಡಿ ಬಂದ ಕರಾಲಿ ಚಿತ್ರ ಇಂದು ಮಂಗಳೂರಿನ ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ.
ಈ ಚಿತ್ರ sಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಬೆಂಗಳೂರಿನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ದಕ್ಷಿಣ ಮೂರ್ತಿ ಇವರು ನಿರ್ದೇಶಿಸಿರುವ ಹಾಗೂ ನಿರ್ಮಾಣವನ್ನೂ ಮಾಡಿದ್ದಾರೆ. ಪವನ್ ಕರ್ಕೇರಾ ಇವರ ಛಾಯಾಗ್ರಹಣದಲ್ಲಿ ಈ ಚಿತ್ರ ಮೂಡಿ ಬಂದಿದೆ. ರಾಜ್ಯ ಪ್ರಶಸ್ತಿ ವಿಜೇತ ಸಿ. ರವಿಚಂದ್ರ್ರನ್‌ರವರ ಸಂಕಲನವಿದೆ. ಆರ್ಯಮಾನ್ ಪ್ರದೀಪ್‌ರವರು ಸಂಗೀತ ನಿರ್ದೆಶನ ನೀಡಿದ್ದಾರೆ. ಅಲ್ಲದೆ ಖ್ಯಾತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್‌ರ ಶಿಷ್ಯ ಕಥಾ ನಾಯಕನಾಗಿ ಮಂಗಳೂರಿನ ಪ್ರತಿಭೆ ಸಾಹೀಲ್ ರೈ ನಟಿಸಿದ್ದು, ನಾಯಕಿಯಾಗಿ ಪ್ರೇರಣಾ ಮತ್ತು ಮುಖ್ಯ ಪಾತ್ರದಲ್ಲಿ ಶಾಲಿನಿ ಭಟ್ ಮತ್ತು ವಿಕಾಸ್ ಇವರು ಕಾಣಿಸಿಕೊಂಡಿದ್ದಾರೆ.
ಇನ್ನೂ ಕರಾಲಿ ಕನ್ನಡ ಚಿತ್ರವು ವಿಭಿನ್ನ ಶೈಲಿಯಲ್ಲಿ ಮೂಡಿ ಬಂದಿದ್ದು, ಎಲ್ಲರ ಮನಮುಟ್ಟುವ ಕಥೆಯೊಂದಿಗೆ ಸಮಾಜಕ್ಕೆ ಉನ್ನತ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯದ ಎಲ್ಲೆಡೆ ಈ ಚಿತ್ರ ಮೇ ೧೯ರಂದು ತೆರೆಕಂಡಿದ್ದು ಬೆಂಗಳೂರಿನಲ್ಲಿ ಹೌಸ್‌ಪುಲ್ ಪ್ರದರ್ಶನಗೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಮಂಗಳೂರಿನ ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ಶುಕ್ರವಾರ ಅಂದರೆ ಇಂದು ಪ್ರದರ್ಶನ ಕಾಣಲಿದೆ ಎಂದು ಚಿತ್ರ ತಂಡ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದೆ.
ವರದಿ: ಶರತ್

Related posts

Leave a Reply