Header Ads
Header Ads
Breaking News

ಮಂಗಳೂರಿನಲ್ಲಿ ಮಳೆ ಅವಾಂತರ ಹಿನ್ನೆಲೆ ನೆರೆ ಪೀಡಿತ ಪ್ರದೇಶಗಳಿಗೆ ಸಂಸದ, ಶಾಸಕ ಭೇಟಿ

ಮಂಗಳೂರಿನಲ್ಲಿ ಮುಂಗಾರು ಮಳೆ ಮೊದಲ ದಿನವೇ ಆರ್ಭಟಿಸಿದ್ದು, ಮಂಗಳೂರಿನಲ್ಲಿ ಕೃತಕ ನೆರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನೆರೆ ಪೀಡಿತ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಮಂಗಳೂರಿನಲ್ಲಿ ಮಂಗಳವಾದ ಮಳೆಯಿಂದಾಗಿ ಕೃತಕ ನೆರೆ ಆವರಿಸಿದ್ದು, ಇಂದು ತುಸು ಬಿಸಿಲಿನ ವಾತಾವರಣ ಕಂಡುಬರುತ್ತಿದೆ. ನಿನ್ನೆ ಮಳೆಯಿಂದಾಗಿ ಜಲಾವೃತ್ತಗೊಂಡ ಪ್ರದೇಶಕ್ಕೆ ಇಂದು ಬೆಳಿಗ್ಗೆಯಿಂದಲೇ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು, ಪರಿಶೀಲನೆ ನಡೆಸಿದ್ದರು. ನೆರೆ ಪೀಡಿತ ಮತ್ತು ಅಪಾರ ಹಾನಿಗೊಳಗಾದ ಪ್ರದೇಶಗಳಾದ ಎಕ್ಕೂರು, ಅತ್ತಾವರ, ಬಿಜೈ, ಅನೆಗುಂಡಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇದೇ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಮಳೆಯ ಅವಾಂತರದಿಂದ ಮಂಗಳೂರು ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ತೊಂದರೆಗೊಳಗಾದವರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ಅಲ್ಲದೆ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಸುಮಾರು ೭೫ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಂಗಳೂರು ಮಹನಗರ ಪಾಲಿಕೆಯ ನಿರ್ಲಕ್ಷದಿಂದ ಈ ರೀತಿಯ ಅವಾಂತರ ಸೃಷ್ಠಿಯಾಗಿದೆ. ಮಳೆಗಾಲಕ್ಕೆ ಮುಂಚಿತವಾಗಿ, ಚರಂಡಿ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ಅಗದೆ ಇರುವುದು ಪ್ರಮುಖ ಕಾರಣ ಎಂದ ಅವರು. ಜಿಲ್ಲಾಡಳಿತದಿಂದ ಮತ್ತು ಜಿಲ್ಲಾ ಬಿಜೆಪಿಯಿಂದ ವ್ಯವಸ್ತೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಇದೀಗ ನೆರೆ ಪೀಡಿತ ಪ್ರದೇಶಗಳಲ್ಲಿ ನೀರು ತಗ್ಗಿದ್ದು, ಪರಿಹಾರದ ಕಾರ್ಯಾಚರಣೆ ಮುಂದುವರಿದಿದೆ.

Related posts

Leave a Reply