Header Ads
Header Ads
Breaking News

ಮಂಜೇಶ್ವರ:ದಾರಿ ಮಾಡುವ ನೆಪದಲ್ಲಿ ಕುಡಿಯುವ ನೀರಿಗೆ ಕನ್ನ

ಉಪ್ಪಳ ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡು ವ್ಯಾಪ್ತಿಯಲ್ಲಿರುವ ಪಚ್ಲಂಪ್ಪಾರ ಪರಿಶಿಷ್ಟ ಜಾತಿ ಕಾಲನಿಗೆ ಹಲವಾರು ವರ್ಷಗಳಿಗೆ ಮುಂಚಿತವಾಗಿ ಪಂಚಾಯತ್‌ನ ವತಿಯಿಂದ ನಿರ್ಮಿಸಲಾಗಿದ್ದ ಕೊಳವೆ ಬಾವಿ ಹಾಗೂ ಪೈಪನ್ನು ಖಾಸಗಿ ವ್ಯಕ್ತಿಯೊಬ್ಬರು ಮನೆಯ ಕಡೆ ತೆರಳಲು ದಾರಿ ಮಾಡುವ ನೆಪದಲ್ಲಿ ಪಂಚಾಯತಿನಿಂದ ಅಂಗೀಕಾರವನ್ನು ಪಡೆದಿರುವುದಾಗಿ ಸುಳ್ಳು ಹೇಳಿ ನಾಶ ಮಾಡಿದ್ದಾರೆ ಎಂದು ಕಾಲನಿವಾಸಿಗಳು ಆರೋಪಿಸಿದ್ದಾರೆ.ಪೈಪುಗಳನ್ನು ಒಡೆದು ಹಾಕಿ ಕೊಳವೆ ಬಾವಿಯನ್ನು ಮುಚ್ಚಲಾಗಿದೆ. ತುಂಡರಿಸಲಾದ ಪೈಪುಗಳನ್ನು ಅಲ್ಲೇ ಬದಿಯಲ್ಲಿ ಇರಿಸಲಾಗಿದೆ. ಸುಮಾರು ೬೫ ಪರಿಶಿಷ್ಟ ಜಾತಿ ಕಾಲನಿಯ ಕುಟುಂಬಗಳಿಗೆ ನೀರಿನ ಆಶ್ರಯವಾಗಿದ್ದ ಈ ಕೊಳವೆ ಬಾವಿಯನ್ನು ನಾಶಪಡಿಸಿದ ಬಳಿಕ ಕಾಲನಿವಾಸಿಗಳು ನೀರಿಲ್ಲದೆ ಪರಿತಪಿಸುವಂತಹ ಪರಿಸ್ಥಿತಿ ಬಂದೊದಗಿದೆ.

ಈ ಬಗ್ಗೆ ಕಾಲನಿವಾಸಿಗಳು ಪಂಚಾಯತ್ ಸದಸ್ಯ ಹಾಗೂ ಅಧ್ಯಕ್ಷರಲ್ಲಿ ವಿಚಾರಿಸಿದಾಗ ಕೊಳವೆ ಬಾವಿಯನ್ನು ತೆಗೆಯಲು ನಾವು ಯಾವುದೇ ಅಂಗೀಕಾರವನ್ನು ನೀಡಿಲವೆಂಬುದಾಗಿ ಹೇಳಿರುವುದಾಗಿ ಕಾಲನಿವಾಸಿಗಳು ಹೇಳುತಿದ್ದಾರೆ. ಈ ಬಗ್ಗೆ ಎಸ್‌ಎಂಎಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿ ಮತ್ತು ಮಂಗಲ್ಪಾಡಿ ಗ್ರಾಮ ಪಂಚಾಯತ್‌ಗೆ ದೂರು ನೀಡಲಾಗಿರುವುದಾಗಿ ಹೇಳಲಾಗಿದೆ.

ಸಂಬಂಧಪಟ್ಟವರು ಕೂಡಲೇ ಈ ಕೊಳವೆ ಬಾವಿಯನ್ನು ಇದ್ದಲ್ಲಿಯೇ ಸ್ಥಾಪಿಸಿ ಕೊಡಬೇಕು. ಅದೇ ರೀತಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ಕಾಲನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

Related posts

Leave a Reply