Header Ads
Header Ads
Breaking News

ಮಂಜೇಶ್ವರ ಪ್ರೆಸ್ ಕ್ಲಬ್ ವತಿಯಿಂದ ವಿಜೃಂಭಣೆಯ ಇಫ್ತಾರ್ ಕೂಟ

ಮಂಜೇಶ್ವರ : ಮಂಜೇಶ್ವರ ಪ್ರೆಸ್ ಕ್ಲಬ್ ವತಿಯಿಂದ ಇಫ್ತರ್ ಕೂಟ ನಡೆಸಲಾಯಿತು. ಹೊಸಂಗಡಿ ಹಿಲ್ ಸೈಡ್ ಅಡಿಟೋರಿಯಂ ನಲ್ಲಿ  ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪ್ಪಾಡಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಕುಂಬಳೆ ವೃತ್ತ ನಿರೀಕ್ಷಕ ವಿ ವಿ ಮನೋಜ್ ಉದ್ಘಾಟಿಸಿದರು. ಹೊಸಂಗಡಿ ನಗರ ಜುಮಾ ಮಸೀದಿ ಇಮಾಂ ಎನ್ ಎಂ ಅಬ್ದುಲ್ಲ ಮದನಿ ರಂಜಾನ್ ಸಂದೇಶ ನೀಡಿದರು.ಮಂಜೇಶ್ವರ ಠಾಣಾಧಿಕಾರಿ ಅನೂಪ್ ಕುಮಾರ್, ಕಾಸರಗೋಡು ಜಿಲ್ಲಾ ಪಂ. ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್, ಅಬಕಾರಿ ವೃತ್ತ ನಿರೀಕ್ಷಕ ರೋಬಿನ್ ಬಾಬು, ಮಂಗಲ್ಪಾಡಿ ಪಂ. ಅಧ್ಯಕ್ಷ ಹಮೀದ್ ಬಂದ್ಯೋಡ್, ಯು ಕೆ ಗ್ರೂಫ್ ಚೇಯರ್ಮ್ಯಾನ್ ಯು ಕೆ ಯೂಸುಫ್, ಮಂಗಲ್ಪಾಡಿ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಬಿ ಎಂ ಮುಸ್ತಫ, ಕೆ ಜೆ ಯು ರಾಜ್ಯ ಕಾರ್ಯದರ್ಶಿ  ಸಿ ಕೆ ನಾಸರ್, ಸಿ ಪಿ ಐ ಜಿಲ್ಲಾ ಜೊತೆ ಕಾರ್ಯದರ್ಶಿ ಬಿ ವಿ ರಾಜನ್, ಮಂಗಲ್ಪಾಡಿ ಆರೋಗ್ಯಾಧಿಕಾರಿ ಮೋಹನ್, ಯೂತ್ ಲೀಗ್ ವಲಯಾಧ್ಯಕ್ಷ ಸೈಫುಲ್ಲ ತಂಘಲ್, ಡಿ ವೈ ಎಫ್ ಐ ಮಂಜೇಶ್ವರ ಬ್ಲೋಕ್ ಅಧ್ಯಕ್ಷ ಪ್ರಶಾಂತ್ ಕನಿಲ, ಮಂಜೇಶ್ವರ ಗ್ರಾ. ಪಂ. ಸದಸ್ಯ ಫೈಸಲ್ ಮಚ್ಚಂಪ್ಪಾಡಿ, ಮಂಜೇಶ್ವರ ಗ್ರಾಹಕರ ವೇದಿಕೆ ಅಧ್ಯಕ್ಷ ಮುರಳೀಧರ ಭಟ್, ಎಸ್ ಡಿ ಪಿ ಐ ನೇತಾರ ಹಮೀದ್ ಹೊಸಂಗಡಿ, ಪತ್ರಕರ್ತರಾದ ಸಲಾಂ ವರ್ಕಾಡಿ, ಸಾಯುಭದ್ರ ರೈ, ಲತೀಫ್ ಪಾರಕಟ್ಟ, ಸನಿಲ್ ಕುಮಾರ್, ರವಿ ಪ್ರತಾಪ್ ನಗರ, ರತನ್ ಹೊಸಂಗಡಿ, ಛಾಯಾಗ್ರಾಹಕ ದೀಪಕ್ ಮೊದಲಾದವರು ಮಾತನಾಡಿದರು.ಈ ಸಂದರ್ಭ ಬಿ ಮೊಹಮ್ಮದ್, ಇಕ್ಬಾಲ್,ಉದ್ಯಮಿ ಉಸ್ಮನ್ ಕಡಂಬಾರ್ ಎಂಬಿವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಅಕ್ಕಿ ಕಾಳಿನಿಂದ ಮಕ್ಕಾ ಮದೀನ ಚಿತ್ರ ಬಿಡಿಸಿದ ಇಚ್ಲಂಗೋಡ್ ನಿವಾಸಿ ವೆಂಕಟೇಶ ಆಚಾರ್ಯರಿಗೆ ವೃತ್ತ ನಿರೀಕ್ಷಕ ಸ್ಮರಣಿಕೆ ನೀಡಿ ಗೌರವಿಸಿದರು.ಮಂಜೇಶ್ವರ ಪ್ರೆಸ್ ಕ್ಲಬ್ ಕಾರ್ಯದರ್ಶಿ ರಹ್ಮಾನ್ ಉದ್ಯಾವರ ಸ್ವಾಗತಿಸಿ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಅನೀಸ್ ಉಪ್ಪಳ ವಂದಿಸಿದರು

Related posts

Leave a Reply