Header Ads
Header Ads
Header Ads
Breaking News

ಮಂಜೇಶ್ವರ : ಮರಳು ಸಾಗಾಟದ ಲಾರಿಗಳ ಅಟ್ಟಹಾಸ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡು ತೂಮಿನಾಡು ರಸ್ತೆಯಿಂದ ಲಕ್ಷಮ್‌ವೀಡು ಕಾಲನಿ ರಸ್ತೆಯ ಚರಂಡಿಯ ಹೊದಿಕೆ ಕುಸಿದು ವಾಹನ ಸಂಚಾರಕ್ಕೆ ಹಾಗೂ ಕಾಲ್ನಡಿಗೆ ಯಾತ್ರಿಕರಿಗೆ ಅಡ್ಡಿ ಉಂಟಾಯಿತು.

ಪೋಲೀಸರ ಕಣ್ತಪ್ಪಿಸಿ ಮರಳು ಶೇಖರಣೆ ನಡೆಸಲು ರಾತ್ರಿ ಕಾಲದಲ್ಲಿ ಈ ರಸ್ತೆಯಿಂದ ಮರಳು ಸಾಗಾಟದ ಟಿಪ್ಪರ್ ಲಾರಿಗಳು ಸಾಗುತ್ತಿರುವುದರಿಂದ ರಸ್ತೆಯ ಹೊದಿಕೆ ಕುಸಿದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ಈ ಚರಂಡಿಯ ಹೊದಿಕೆ ಕುಸಿಯುವ ಭೀತಿಯನ್ನು ಸ್ಥಳೀಯರು ಎದುರಿಸುತ್ತಿದ್ದರೆಂದು ಹೇಳಲಾಗಿದೆ. ಮರಳು ಸಾಗಾಟದ ಲಾರಿ ಸಾಗುವ ವೇಳೆ ಚರಂಡಿಯ ಹೊದಿಕೆ ಕುಸಿದಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *