Header Ads
Header Ads
Breaking News

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ : ಬಿಜೆಪಿ ಹಾಗೂ ಎಲ್‍ಡಿಎಫ್‍ನಿಂದ ಬಿರುಸಿನ ಮತಯಾಚನೆ

ಶಾಸಕ ಪಿ.ಬಿ ಅಬ್ದುಲ್ ರಜಾಕ್ ರವರ ನಿಧನದ ಬಳಿಕ ತೆರವುಗೊಂಡ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಹತ್ತಿರವಾಗುತಿದ್ದಂತೆಯೇ ಮುಸ್ಲಿಂ ಲೀಗ್ ಬಾಹುಲ್ಯವಿರುವ ಸ್ಥಳಗಳಲ್ಲಿ ಬಿಜೆಪಿ ಹಾಗೂ ಎಡರಂಗ ತಮ್ಮ ಕಾರ್ಯಕರ್ತರನ್ನು ಹಾಗೂ ನೇತಾರರನ್ನು ಇಳಿಸಿ ಮತವನ್ನು ತನ್ನದಾಗಿಸುವ ಕಾರ್ಯಕ್ಕೆ ಇಳಿದಿದೆ.

2018 ಅಕ್ಟೋಬರ್ 20ಕ್ಕೆ ಶಾಸಕ ಪಿ.ಬಿ ಅಬ್ದುಲ್ ರಜಾಕ್ ನಿಧನರಾಗಿದ್ದರು. ಇದೀಗ 2019 ಅಕ್ತೋಬರ್ 21 ಕ್ಕೆ ಉಪಚುನಾವಣೆ ನಡೆಯುತ್ತಿದೆ. ಇದರೊಂದಿಗೆ ಜನಪ್ರತಿನಿಧಿಗಳಿಲ್ಲದೆ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯದ ಮಂಜೇಶ್ವರಕ್ಕೆ ಅಲ್ಪ ದಿನಗಳಲ್ಲೇ ಶಾಶ್ವತ ಪರಿಹಾರ ದೊರಕಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಮಂಜೇಶ್ವರದ ಜನತೆ.

ಇದೀಗ ಪಿ.ಬಿ ಅಬ್ದುಲ್ ರಜಾಕ್‍ರವರು ನಡೆಸಿದ ಅಭಿವೃದ್ದಿಗಳ ವಿಷಯವಾಗಿದೆ ಯುಡಿಎಫ್ ನ ಪ್ರಧಾನ ಪ್ರಚಾರ ವಿಷಯ. ಮಂಡಲದಲ್ಲಿ ಆರು ಪಂಚಾಯತ್‍ಗಳಲ್ಲೂ ಕೂಡಾ ಯುಡಿಎಫ್ ಅಧಿಕಾರ ಇದೆ. ಇದು ಕೂಡಾ ಯುಡಿಎಫ್ ಗೆ ಒಂದು ಲಾಭವಾಗಿ ಪರಿಣಮಿಸಿದೆ.

ಯುಡಿಎಫ್ ಹಾಗೂ ಬಿಜೆಪಿ ತಮ್ಮೊಳಗೆ ಇತ್ತೀಚೆಗೆ ನಡೆದ ಪ್ರತಿಯೊಂದು ಚುನಾವಣೆಗಳಲ್ಲೂ ನಾಲ್ಕು ಸಾವಿರ ಮತಗಳ ಅಂತರದ ವ್ಯತ್ಯಾಸ ಕಂಡು ಬಂದದ್ದು. ಇಲ್ಲಿಯದ್ದು ಕನ್ನಡ ಹಾಗೂ ಮಲಯಾಳ ಭಾಷೆಗಳು ಪ್ರಧಾನವಾಗಿವೆ. ತುಳು, ಬ್ಯಾರಿ, ಕೊಂಕಣಿ ಹಾಗೂ ಉರ್ದು ಭಾಷೆಗಳನ್ನಾಡುವ ವಿಭಾಗ ಕೂಡಾ ಅಧಿಕವಿದೆ. ಬಿಜೆಪಿ ಕರ್ನಾಟಕದಿಂದ ಶಾಸಕರನ್ನು ಹಾಗೂ ಸಚಿವರುಗಳನ್ನು ಗಡಿ ಪ್ರದೇಶದಲ್ಲಿ ಇಳಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಪೈಪೆÇೀಟಿ ನೀಡಲು ಯುಡಿಎಫ್ ಹಾಗೂ ಎಲ್‍ಡಿಎಫ್ ಕೂಡಾ ಸಜ್ಜಾಗಿದೆ.

Related posts

Leave a Reply

Your email address will not be published. Required fields are marked *