Header Ads
Breaking News

ಮತದಾನ ಜಾಗೃತಿಗೆ ಮಂಗಳೂರು ಕಡಲ ತೀರದಲ್ಲಿ ಮಾನವ ಸರಪಳಿ

ಲೋಕಸಭೆ ಚುನಾವಣೆ ಹಿನ್ನೆಲೆ ಎಲ್ಲೆಡೆ ಮತದಾನ ಜಾಗೃತಿ ಕಾರ್ಯಕ್ರಮ ನಡಿತಾ ಇದೆ. ನಿನ್ನೆ ಕೂಡಾ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕರಾವಳಿ ಕಡಲ ತೀರದಾದ್ಯಂತ ಪ್ರಜಾ ಸಂಗಮ ಎಂಬ ಮತದಾನ ಜಾಗೃತಿ ಮನವ ಸರಪಳಿ ಕಾರ್ಯಕ್ರಮ ನಡೆಯಿತು.

ಹೌದು.. ನಿನ್ನೆ ಕಡಲ ತೀರದಾದ್ಯಂತ ಮತದಾನ ಜಾಗೃತಿ ಮಾನವ ಸರಪಳಿ ಕರ್ಯಕ್ರಮದ ಮೂಲಕ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ತಲಪಾಡಿ ಕಡಲ ತೀರದಿಂದ ಉಳ್ಳಾಲ, ಬೆಂಗ್ರೆ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್, ಸಸಿಹಿತ್ಲು ಕಡಲತೀರದವರೆಗೆ 42ಕಿಮೀ ವರೆಗೆ ನಡೆದ ಮಾನವ ಸರಪಳಿಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದು ವಿಶೇಷ. ಮತದಾನ ಜಾಗೃತಿಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗಿತ್ತು.

ಮತದಾನ ಜಾಗೃತಿಗಾಗಿ ಸಸಿಹಿತ್ಲು ಬೀಚ್‌ನಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಮಾನವ ಸರಪಳಿ ನಿರ್ಮಿಸಿ ಜಾಗೃತಿಯನ್ನು ಮೂಡಿಸಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಲ್ ಮಾತನಾಡಿ ಚುನಾವಣೆ ಪ್ರತೊಯೊಬ್ಬರ ಹಕ್ಕು. ಮತದಾನವನ್ನು ಸಂಭ್ರಮಿಸಿ, ಪ್ರತಿಯೊಬ್ಬರೂ ಮತ ಹಾಕಬೇಕು. ಕಡಲ ತೀರದಲ್ಲಿ ಸಹಸ್ರಾರು ಮಂದಿ ಸೇರಿಸಿ ಕಾರ್ಯಕ್ರಮ ಆಯೋಜಿಸಬೇಕು ಎಂಬ ಕನಸಿತ್ತು. ಇದೀಗ ಈಡೇರಿದೆ ಎಂದು ಹೇಳಿದ್ರು.

ಇನ್ನು ಪಣಂಬೂರು ಬೀಚ್ ಅಭಿವೃದ್ಧಿ ನಿಗಮದ ಸಿಇಒ ಯತೀಶ್ ಬೈಕಂಪಾಡಿ ಮಾತನಾಡಿ ಯಾವುದೇ ಮತಭೇದವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದಾರೆ. ಜಿಲ್ಲಾಡಳಿತದ ಪ್ರೋತ್ಸಾಹವಿದ್ರೆ ಇದಕ್ಕಿಂತ ದೊಡ್ಡ ಕಾರ್ಯಕ್ರಮವನ್ನು ಮಾಡುತ್ತೇವೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ರು.

ಇದೇ ವೇಳೆ ದ.ಕ ಜಿಲ್ಲಾ ಪಂಚಾಯತ್ ಸಿಇಒ ಡಾ. ಆರ್ ಸೆಲ್ವಮಣಿ, ರಾಜ್ಯ ಯುವ ಸಮಿತಿಯ ರಾಯಭಾರಿ ಬಹುಮುಖ ಪ್ರತಿಭೆ ಶಬರಿ ಗಾಣಿಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *