Header Ads
Header Ads
Breaking News

ಮಹಾಮಳೆಗೆ ತತ್ತರಿಸಿದ ಕೇರಳ.ಸಂತ್ರಸ್ಥರಿಗೆ ನೆರವಾಗುತ್ತಿರುವ ಬಸ್ ಮಾಲಕರು ನಾಗರಿಕರು, ಗಲ್ಫ್ ಉದ್ಯೋಗಿಗಳು

ಮಂಜೇಶ್ವರ: ಇಡೀ ಕೇರಳವನ್ನೇ ಕಣ್ಣೀರ ಸಾಗರದಲ್ಲಿ ಮುಳುಗಿಸಿದ ಮಹಾ ಪ್ರಳಯದಿಂದಾಗಿ ಕಳೆದೆರಡು ದಿನಗಳಿಂದ ಸಂಭವಿಸಿದ ಸಾವಿನ ಸಂಖ್ಯೆ ಅತಿಯಾಗಿದೆ ಕಾಸರಗೋಡು ಜಿಲ್ಲೆಯನ್ನು ಹೊರತು ಪಡಿಸಿದರೆ ಇತರ ಎಲ್ಲಾ 13 ಜಿಲ್ಲೆಗಳಲ್ಲೂ ಪ್ರಳಯ ತಾಂಡವಾಡುತ್ತಿದೆ.ರಾಜ್ಯದ13 ಜಿಲ್ಲೆಗಳಲ್ಲಿ ಅತೀವ ಜಾಗ್ರತಾ ನಿರ್ಧೆಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಪ್ರಳಯದಲ್ಲಿ ಸಿಲುಕಿ ಜೀವನ್ಮರಣದಲ್ಲಿ ಹೋರಾಟ ನಡೆಸುತ್ತಿರುವವರಿಗೆ ಜಾತಿ ಮತ ಬೆರೆತು ಕಾಸರಗೋಡು ಜಿಲ್ಲೆಯಿಂದ ವಿದ್ಯಾರ್ಥಿಗಳು, ನಾಗರಿಕರು, ಸಂಘಟನೆಗಳು, ಕ್ಲಬ್ ಗಳು ಸಂತ್ರಸ್ತರಿಗೆ ನೆರವನ್ನು ನೀಡುತಿದ್ದಾರೆ.ಬದಿಯಡ್ಕದ ಬಸ್ ಮಾಲಕರಾದ ಮೊಹಮ್ಮದ್ ಎಂಬವರು ತನ್ನ ಮಾಲಕತ್ವದಲ್ಲಿರುವ ಪಿ ಎಂ ಎಸ್ ಬಸ್ಸಿನ ಐದು ದಿನಗಳ ವರಮಾನವನ್ನು ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕರಿ ಡಾ. ಶ್ರೀನಿವಾಸ್ ಚಾಲನೆ ನೀಡಿದರು.ಅದೇ ರೀತಿ ಮಚ್ಚಂಪ್ಪಾಡಿ ಜಿ ಸಿ ಸಿ ಕೆ ಎಂ ಸಿ ಸಿ ವತಿಯಿಂದ ಅರ್ಧ ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ಬ್ಲೋಕ್ ಪಂ. ಎ ಕೆ ಎಂ ಅಶ್ರಫ್ ರವರಿಗೆ ಹಸ್ತಾಂತರಿಸಲಾಯಿತು. ಅದೇ ರೀತಿ ಜಿಲ್ಲೆಯ ಎಲ್ಲಾ ಖಾಸಗಿ ಬಸ್ ಮಾಲಕರುಗಳು ಕೂಡಾ ಒಂದು ದಿನದ ವರಮಾನವನ್ನು ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದ್ದಾರೆ.ಅದೇ ರೀತಿ ಗಡಿ ಪ್ರದೇಶದಲ್ಲಿರುವ ತೂಮಿನಾಡು ಅರಬ್ ರೈಡರ್ಸ್ ಕ್ಲಬ್, ಉದ್ಯಾವರ ಜುಮಾ ಮಸೀದಿ, ಕುಂಜತ್ತೂರು, ಮಂಜೇಶ್ವರ, ಉಪ್ಪಳ, ಕುಂಬಳೆಯ ಇತರ ಹತ್ತು ಹಲವಾರು ಸಂಘಟನೆಗಳು, ಅರಾಧನಾಲಯಗಳು ಕ್ಲಬ್ ಗಳು ಸಂತ್ರಸ್ತರಿಗೆ ನೆರವನ್ನು ಯಾಚಿಸಿ ಸಂತ್ರಸ್ತರ ಪರಿಹಾರ ನಿಧಿಗೆ ನೀಡುತ್ತಿರುವ ದೃಶ್ಯ ಕಂಡು ಬರುತ್ತಿದೆ, ಹಣ ಸಂಗ್ರಹದ ಜೊತೆಯಾಗಿ ನಿತ್ಯೋಪಯೋಗಿ ಸಾಮಾಗ್ರಿ ಬಟ್ಟೆ ಬರೆಗಳನ್ನು ಸಂಗ್ರಹಿಸಿ ನೀಡುತಿದ್ದಾರೆ.ಇವರ ಈ ಸೇವೆ ಸರ್ವತ್ರ ಶ್ಲಾಘನೆಗೆ ಪಾತ್ರವಾಗುತ್ತಿದೆ.

Related posts

Leave a Reply