Breaking News

ಮಾಹಿತಿ ಮೇರೆಗೆ ಅಕ್ರಮ ಸಾಗಾಟದ ದನಗಳ ವಶ

ಪೊಲೀಸ್ ಅಯುಕ್ತರಾದ ಶ್ರೀ ಸುರೇಶ್ ಕುಮಾರ್, ಶ್ರೀ ಶಾಂತರಾಜು, ಉಪ ಪೊಲೀಸ್‌ ಅಯುಕ್ತರು ( ಕಾನೂನು & ಸುವ್ಯವಸ್ಥೆ )  ಮತ್ತು ಶ್ರೀ ಹನುಮಂತರಾಯ ಉಪ ಪೊಲೀಸ್‌ ಅಯುಕ್ತರು (ಅಪರಾದ & ಸಂಚಾರ )  ಮತ್ತು ಶ್ರೀ ಡಿಎಸ್‌ ರಾಜೇಂದ್ರ ಪಣಂಬೂರು ಎಸಿಪಿ ಇವರ ನಿರ್ದೇಶನದ ಮೇರೆಗೆ ಮೂಡುಬಿದರೆ ಪೊಲಿಸ್‌ ನಿರೀಕ್ಷರಾದ ರಾಮಚಂದ್ರ ನಾಯಕ್ ಮತ್ತು ಸಿಬ್ಬಂದಿಯವರು ಪುತ್ತಿಗೆ ಗ್ರಾಮದ ಹಂಡೇಲಿನ ಬಾವು ಬ್ಯಾರಿ, ನಿಸಾರ್‌  ಹಮೀದ್  ಎಂಬವರುಗಳು  ಅಕ್ರಮವಾಗಿ ಕಳವು ಮಾಡಿ ತಂದ ದನಗಳನ್ನು ವದೆ ಮಾಡಲು ಶೇಖರಿಸಿಟ್ಟ ಸ್ಥಳಕ್ಕೆ ಬೆಳಿಗ್ಗೆ ದಾಳಿ ಮಾಡಿ 18 ಜಾನುಮಾರುಗಳನ್ನು ಸ್ವಾಧಿನಪಡಿಸಿಕೊಂಡಿರುತ್ತಾರೆ ಇವುಗಳಲ್ಲಿ ಹಾಲು ಕರೆಯುವಂತಹ ದನಗಳು ಕೂಡ ಇದ್ದು ಇವುಗಳನ್ನು ಕಳವು ಮಾಡಿ ತಂದಿರುವುದಾಗಿ  ಕಂಡು ಬಂದಿರುತ್ತದೆ. ಈ ಬಗ್ಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದ.  ಈ ಕಾರ್ಯಚರಣೆಯಲ್ಲಿ ಪೊಲಿಸ್‌ ಉಪ ನಿರೀಕ್ಷಕರುಗಳಾದ ಶ್ರೀದೇಜಪ್ಪ, ಶ್ರೀಶಂಕರ ನಾಯರಿ, ಸಿಬ್ಬಂದಿಯವರಾದ ರಾಜೇಶ್ , ಸುರೇಶ್‌, ವಿಜಯ ಕಾಂಚನ್, ಮೋಹನ್‌,  ಉಮೇಶ್‌, ಮಾದವ, ಸುರೇಂದ್ರ, ಅಖಿಲ್‌ ಅಹಮ್ಮದ್, ಮಲಿಕ್‌ ಜಾನ್, ಪ್ರದೀಫ್, ನವಾಜ್, ಚಂದ್ರಹಾಸ,  ಮತ್ತಿತರು  ಭಾಗವಹಿಸಿದ್ದರು.

Related posts

Leave a Reply