Header Ads
Breaking News

ಮಿಸ್ ಯೂನಿವರ್ಸ್ ಸ್ಪರ್ಧೆಗೆ ಆಯ್ಕೆಯಾದ ಆಡ್ಲಿನ್ : ಉಡುಪಿಯಲ್ಲಿ ಆಡ್ಲಿನ್‍ಗೆ ಅದ್ಧೂರಿ ಸ್ವಾಗತ

ಲಿವಾ ಮಿಸ್ ದಿವಾ-2020 ಗೆದ್ದ ಉಡುಪಿ ಮೂಲದ ಆಡ್ಲಿನ್ ಕ್ಯಾಸ್ಟಲಿನೋ ತನ್ನ ಹುಟ್ಟೂರು ಉಡುಪಿಗೆ ಆಗಮಿಸಿದ್ದಾರೆ. ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾಗಿರುವ ಆಡ್ಲಿನ್ಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

ಉಡುಪಿಯ ಉದ್ಯಾವರ ಕೊರಂಗ್ರಪಾಡಿಯ ಮನೆಗೆ ಆಗಮಿಸಿದ ಆಡ್ಲಿನ್, ಕುಟುಂಬಸ್ಥರ ಜೊತೆ ಸಂತೋಷದಿಂದ ಬೆರೆತರು. ಸಂಬಂಧಿಕರ ಜೊತೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ದೊಡ್ಡಪ್ಪನ ಮನೆಯಲ್ಲಿ ಅಯ್ದ ಕುಟುಂಬಿಕರಿಂದ ವಿಶೇಷ ಪ್ರಾರ್ಥನೆ ನಡೆಯಿತು. ಗೆಲುವಿಗೆ ಏಸುವಿನ ಆಶೀರ್ವಾದವೇ ಕಾರಣ ಎಂದು ಪ್ರಾರ್ಥನೆ ವೇಳೆ ಆಡ್ಲಿನ್ ಕುಟುಂಬದ ಹಿರಿಯರು ತಿಳಿಸಿದರು.
ಕಂಬಳದ ಕೋಣ, ಕರಾವಳಿ ಚೆಂಡೆ, ರಂಗಿನ ಕೊಡೆ ಹಿಡಿದು ಚರ್ಚ್ ವರೆಗೆ ಮೆರವಣಿಗೆ ಮಾಡಲಾಯಿತು. ನೂರಾರು ವಾಹನಗಳು, ಆಪ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಉದ್ಯಾವರ ನಗರದಾದ್ಯಂತ ಆಡ್ಲಿನ್ ಕ್ಯಾಸ್ಟಲಿನೋ ಅವರ ಕಟೌಟ್ ಗಳು ರಾರಾಜಿಸುತ್ತಿದ್ದವು

Related posts

Leave a Reply

Your email address will not be published. Required fields are marked *